ದೇವರ ನಾಡು ಕೇರಳದಲ್ಲಿ ಸಾಲದ ಸರ್ಕಾರ, ಕರ್ನಾಟಕದ ಪರಿಸ್ಥಿತಿ ಹೇಗೆ?
Kerala vs Centre over release of funds ದೇವರ ನಾಡು ಕೇರಳದಲ್ಲಿ ಸಾಲದ ಸರ್ಕಾರ ನಡೆಯುತ್ತಿದೆ. ಇನ್ನಷ್ಟು ಹೆಚ್ಚಿನ ಸಾಲ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆದರೆ, ಸುಪ್ರೀಂ ಕೋರ್ಟ್ ಕೇರಳ ಸರ್ಕಾರದ ಆರ್ಥಿಕ ಅಶಿಸ್ತಿನ ಕುರಿತಾಗಿ ಛೀಮಾರಿ ಹಾಕಿದೆ.
ನವದೆಹಲಿ (ಏ.4): ಆರ್ಥಿಕ ಸಂಕಷ್ಟದಲ್ಲಿರುವ ತನಗೆ ಸುಪ್ರೀಂ ಕೋರ್ಟ್‌ನಿಂದ ರಿಲೀಫ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಕೇರಳ ಸರ್ಕಾರಕ್ಕೆ ನಿರಾಸೆಯಾಗಿದೆ. ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದೆ ನೆರೆಯ ಕೇರಳಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಆರ್ಥಿಕ ಅಶಿಸ್ತಿನಲ್ಲಿರುವ ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಾಲ ಪಡೆಯಲು ಮಿತಿ ಹೇರಿತ್ತು. ಕೇಂದ್ರದ ಮಿತಿ ವಿರುದ್ಧಕೇರಳ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಶಿಸ್ತೇ ಇಂದಿನ ಕೇರಳ ಆರ್ಥಿಕ ದುಸ್ಥಿತಿಗೇ ಕಾರಣ. ಸಾಲಕ್ಕೆ ಅನುಮತಿ ಕೊಟ್ಟರೆ ಮತ್ತಷ್ಟು ಸಾಲಕ್ಕೆ ಕಾರಣವಾಗಲಿದೆ' ಎಂದು ಹೇಳಿದೆ. ರಾಜ್ಯ ಆರ್ಚಥಿಕ ಸಂಕಷ್ಟ ತಗ್ಗಿಸಲು ಕೇಂದ್ರದಿಂದ ಪರಿಹಾರ ಕೊಡಿಸುವಂತೆ ಕೇರಳ ಅರ್ಜಿ ಸಲ್ಲಿಕೆ ಮಾಡಿತ್ತು. ಈ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಕೇಂದ್ರದಿಂದ ಮಧ್ಯಂತರ ಪರಿಹಾರ ಕೊಡಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಕೇರಳ ಸರ್ಕಾರದ ಸಾಲ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿದೆ. ಆ ಮೂಲಕ ಖೇರಳದ ಹೆಚ್ಚಿವರಿ ಸಾಲದ ಬೇಡಿಕೆಯ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಬುಧವಾರ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ವಿ ವಿಶ್ವನಾಥನ್ ಇದ್ದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಕೇರಳ ಸರ್ಕಾರ, ರಾಜ್ಯವು ಪಡೆಯಬಹುದಾದ ಸಾಲದ ಮೇಲೆ ಕೇಂದ್ರ ಮಿತಿ ಹೇರಿದೆ. ಕೇಂದ್ರ ಸರ್ಕಾರವು ರಾಜ್ಯದ ವಿಶೇಷ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಆರ್ಥಿಕ ಒಕ್ಕೂಟ ವ್ಯವಸ್ಥೆಯ ತತ್ವಗಳ ಉಲ್ಲಂಘನೆಯಾಗಿದೆ . ರಾಜ್ಯಗಳ ಪಾಲಿನ ಹಣವನ್ನು ಕೊಡದೇ ಕೇಂದ್ರ ತಾರತಮ್ಯ ನೀತಿ ಮಾಡುತ್ತಿದೆ. ಹೆಚ್ಚುವರಿ ಸಾಲವಾಗಿ ₹5 ಸಾವಿರ ಕೋಟಿ ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. ಆದರೆ, ನಮಗೆ 10 ಸಾವಿರ ಕೋಟಿ ರೂಪಾಯಿ ಬೇಕಾಗಿದೆ' ಎಂದು ವಾದ ಮಾಡಿತ್ತು.
ಇದಕ್ಕೆ ಕೇಂದ್ರ ಸರ್ಕಾರ, '15ನೇ ಹಣಕಾಸು ಆಯೋಗದ ಪ್ರಕಾರ ಕೇರಳ ಜಿಡಿಪಿಯ ಶೇ.3ರಷ್ಟು ಸಾಲ ಪಡೆಯಬಹುದು. ಕೇರಳ ಈ ಆರ್ಥಿಕ ವರ್ಷದಲ್ಲಿ 6,664 ಕೋಟಿ ಸಾಲವನ್ನಷ್ಟೇ ಪಡೆಯಬಹುದಾಗಿದೆ. ಸರ್ಕಾರದ ವೆಚ್ಚ ನೋಡಿದರೆ ಇಷ್ಟು ಸಾಲದಲ್ಲಿ ಹಣಕಾಸು ನಿರ್ವಹಣೆ ಸಾಧ್ಯವಿಲ್ಲ. 2023-24ರಲ್ಲಿ 21,852 ಕೋಟಿ ಸಾಲದ ಮಿತಿ ನೀಡಲಾಗಿತ್ತು.ಮೊದಲ 6 ತಿಂಗಳಲ್ಲೇ ಕೇರಳ ಸರ್ಕಾರ ತನ್ನ ಸಾಲದ ಮಿತಿಯನ್ನು ಮೀರಿದೆ. ಈ ವರ್ಷ ಹಣಕಾಸು ಆಯೋಗದ ಮಿತಿಯನ್ನು ಮೀರಿ ನಾವು 13,608 ಕೋಟಿ ಸಾಲ ಪಡೆಯಲು ಅನುಮತಿ ನೀಡಿದ್ದೇವೆ. ಆದರೆ, ಕೇರಳ ಸರ್ಕಾರ 26 ಸಾವಿರ ಕೋಟಿ ಸಾಲ ಪಡೆಯಲು ಅನುಮತಿ ಕೇಳುತ್ತಿದೆ ಎಂದು ಹೇಳಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ಕೇರಳದ ಇಂದಿನ ಸ್ಥಿತಿಗೆ ಹಣಕಾಸು ನಿರ್ವಹಣೆಯಲ್ಲಿನ ಅಶಿಸ್ತೇ ಕಾರಣ. ಆರ್ಥಿಕ ಅಶಿಸ್ತಿನಿಂದಾಗಿ ನೀವೇ ಈ ಸಮಸ್ಯೆ ಸೃಷ್ಟಿಸಿಕೊಂಡಿದ್ದೀರಿ. ಕೇಂದ್ರ ಸರ್ಕಾರದಿಂದ ಆದ ಸಮಸ್ಯೆ ಎಂದು ಪರಿಹಾರ ನೀಡಲಾಗದು. ಇಂಥ ಪ್ರಕರಣಗಳಲ್ಲಿ ನಾವು ಮಧ್ಯಂತರ ಪರಿಹಾರ ನೀಡುತ್ತಾ ಹೋದಲ್ಲಿ..ರಾಜ್ಯಗಳಿಂದ ಹೊಸ ಯೋಜನೆ ಘೋಷಿಸಲು ಹೊಸ ಸಾಲಕ್ಕೆ ಬೇಡಿಕೆ ಮಾಡುತ್ತಾರೆ. ಹೆಚ್ಚುವರಿ ಸಾಲಕ್ಕೆ ಅನುಮತಿ ಕೊಟ್ಟರೆ ಮತ್ತಷ್ಟು ಸಾಲಕ್ಕೆ ಕಾರಣವಾಗುತ್ತೆ. ಹೆಚ್ಚುವರಿಯಾಗಿ ₹13,608 ಕೋಟಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ನಿಮಗೆ ಸಾಕಷ್ಟು ನೆರವು ಸಿಕ್ಕಿದೆ. ಹೀಗಾಗಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲಾಗದು. ಉಭಯ ಸರ್ಕಾರಗಳು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು' ಎಂದು ತಿಳಿಸಿದೆ.
ಆ ಬಳಿಕ ಈ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆಅರ್ಜಿ ವರ್ಗಾವಣೆ ಮಾಡುವ ಬಗ್ಗೆ ತಿಳಿಸಿದ ಸುಪ್ರೀಂ ಕೋರ್ಟ್, 'ಈ ವಿಚಾರ ಸಂವಿಧಾನದ 145ನೇ ವಿಧಿಯಡಿ ಬರುತ್ತದೆ. ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಲಿದ್ದೇವೆ ಎಂದು ಪೀಠ ಆದೇಶ ನೀಡಿದೆ. ಸಂವಿಧಾನದ 293ನೇ ವಿಧಿ ಬಗ್ಗೆ ಪ್ರಸ್ತಾಪಿಸಿ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ರಾಜ್ಯಗಳು ಪಡೆಯುವ ಸಾಲ, ಕೇಂದ್ರದ ನಿರ್ಬಂಧದ 293ನೇ ವಿಧಿ ಉಲ್ಲೇಖ ಮಾಡುತ್ತದೆ.
News Hour: ದುಡ್ಡಿಲ್ಲದೆ ದೇವರ ನಾಡು ಕೇರಳ ದಿವಾಳಿ, ಸುಪ್ರೀಂ ಕೋರ್ಟ್ ಛೀಮಾರಿ!
ಆರ್ಥಿಕ ದಿವಾಳಿಯತ್ತ ಕೇರಳ..?: ಇನ್ನು ಕೇರಳದ ಪರಿಸ್ಥಿತಿ ನೋಡುವುದದಾದರೆ. ಶ್ರೀಲಂಕಾ, ಪಾಕಿಸ್ತಾನದಂತೆ ಆರ್ಥಿಕ ದಿವಾಳಿ ಸ್ಥಿತಿ ತಲುಪಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಯೋಜನೆಗಳಿಗೆ ಅನುದಾನ ಕೊಡಲೂ ಸರ್ಕಾರದ ಬಳಿ ಹಣ ಇಲ್ಲ. ಆರ್ಥಿಕ ನಿರ್ವಹಣೆಗಾಗಿ ಕೇರಳ ಸಾಲವನ್ನೇ ನಂಬಿ ಕೂತಿದೆ. ಜಿಡಿಪಿಯ ಶೇ.25ರಷ್ಟು ಸಾಲದ ಮಿತಿ ಮೀರಿ ಕೇರಳದಿಂದ ಶೇ.44ರಷ್ಟು ಸಾಲ ಮಾಡಿದೆ. ಇದೇ ಕಾರಣಕ್ಕಾಗಿ ಹೊಸದಾಗಿ ಸಾಲ ಪಡೆಯಲು ಕೇರಳ ಸರ್ಕಾರಕ್ಕೆ ಕೇಂದ್ರದಿಂದ ನಿರ್ಬಂಧ ವಿಧಿಸಲಾಗಿದೆ. ಕೇರಳ ಹಾಲಿ ವರ್ಷ 26 ಸಾವಿರ ಕೋಟಿ ಸಾಲ ಪಡೆಯಲು ಮುಂದಾಗಿತ್ತು. ಆದರೆ, ಕೇಮದ್ರ 13,608 ಕೋಟಿ ಸಾಲ ಪಡೆಯಲಷ್ಟೇ ಅನುಮತಿ ನೀಡಿದೆ. ಸಂಬಳ, ಪಿಂಚಣಿ, ಬಡ್ಡಿಗೆ ಶೇ.70ರಷ್ಟು ಬಜೆಟ್ ಹಣ ವ್ಯಯವಾಗುತ್ತಿದೆ.
Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್ ನಾಯಕ!
ಸಾಲದ ಸುಳಿಯಲ್ಲಿ ಕೇರಳ: ಬುದ್ದಿವಂತರ ನಾಡು ಎನಿಸಿಕೊಳ್ಳುತ್ತಿದ್ದ ಕೇರಳದಲ್ಲಿ 2016ರಲ್ಲಿ 1.6 ಲಕ್ಷ ಕೋಟಿ ಸಾಲವಿದ್ದರೆ, 2024ರಲ್ಲಿ ಇದು 4.3 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಜಿಡಿಪಿಯ ಶೇ. 44ರಷ್ಟು ಸಾಲ ಎನಿಸಿದೆ. ಇನ್ನು 2024ರ ಕೇರಳ ಬಜೆಟ್‌ನಲ್ಲಿ 1,38,665 ಕೋಟಿ ವರಮಾನವಿದ್ದರೆ, ಸಾಲ 1,16,689 ಕೋಟಿ ರೂಪಾಯಿ ಆಗಿದೆ. 2024ರಲ್ಲಿ 2,55,385 ಕೋಟಿ ಬಜೆಟ್‌ಅನ್ನು ಕೇರಳ ಮಂಡಿಸಿದ್ದು ಇದರಲ್ಲಿ ಸಾಲದ ಪ್ರಮಾಣ ಶೇ. 45.7ರಷ್ಟಿದೆ.
ಕೇರಳದಲ್ಲಿ ಆರ್ಥಿಕ ಸಂಕಷ್ಟ
ಕೇರಳ | ಕರ್ನಾಟಕ | |
3.4 ಕೋಟಿ | ಒಟ್ಟು ಜನಸಂಖ್ಯೆ | 6.4 ಕೋಟಿ |
₹2,55,385 ಕೋಟಿ | 2024-25 ಬಜೆಟ್ | ₹3,71,383 ಕೋಟಿ |
₹1,38,665 ಕೋಟಿ | ರಾಜಸ್ವ ಸಂಗ್ರಹ | ₹2,63,177 ಕೋಟಿ |
₹1,16,689 ಕೋಟಿ | ಈ ವರ್ಷದ ಸಾಲ | ₹1,05,246 ಕೋಟಿ |
ಶೇ.45.7 | ಬಜೆಟ್‌ನಲ್ಲಿ ಸಾಲ | ಶೇ.28 |
₹28,694 ಕೋಟಿ | ಸಾಲ ಮರುಪಾವತಿ | ₹24,974 ಕೋಟಿ |
₹9.78 ಲಕ್ಷ ಕೋಟಿ | ಜಿಡಿಪಿ | ₹28.1 ಲಕ್ಷ ಕೋಟಿ |
₹4,29,270 ಕೋಟಿ | ರಾಜ್ಯದ ಒಟ್ಟು ಸಾಲ | ₹6,65,095 ಕೋಟಿ |
ಶೇ.43.8 | ಸಾಲದ ಪ್ರಮಾಣ(GDP) | ಶೇ.23.5 |