ವಿಚಾರಣೆ ವೇಳೆ ನಗೆಗಡಲಲ್ಲಿ ತೇಲಿದ ಸುಪ್ರೀಂ ಕೋರ್ಟ್, CJI ಪ್ರಶ್ನೆಗೆ ನಾನೊಬ್ಬ ವಿಸ್ಕಿ ಪ್ರೇಮಿ ಎಂದ ವಕೀಲ!

By Suvarna News  |  First Published Apr 4, 2024, 3:19 PM IST

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ವಕೀಲ ದಿನೇಶ ದ್ವಿವೇದಿ ನಡುವಿನ ಹಾಸ್ಯಕ್ಕೆ ಸುಪ್ರೀಂ ಕೋರ್ಟ್ ನಗೆಗಡಲಲ್ಲಿ ತೇಲಿದೆ. ನಿಮ್ಮ ಕೂದಲಿಗೂ ಮದ್ಯಕ್ಕೂ ಏನು ಸಂಬಂಧ ಎಂದು ಸಿಜೆಐ ಪ್ರಶ್ನಿಸಿದ್ದಾರೆ. ನಾನೊಬ್ಬ ವಿಸ್ಕಿ ಪ್ರೇಮಿ ಎಂದು ಉತ್ತರಿಸಿ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.
 


ನವದೆಹಲಿ(ಏ.04) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಎಲ್ಲರೂ ಗಂಭೀರವಾಗಿರುತ್ತಾರೆ. ವಿಚಾರಣೆ ಹಾಜರಾಗುವ ವಕೀಲರು, ಅಧಿಕಾರಿಗಳು ಶಿಸ್ತಿನಿಂದ ಹಜರಾಗುತ್ತಾರೆ. ಇತ್ತೀಚೆಗೆ ಅಧಿಕಾರಿಯೊಬ್ಬರು ಧರಿಸಿದ ಉಡುಪಿಗೆ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯನ್ಯಾಯಮೂರ್ತಿ ಡಿವೆ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದ್ದ ನಡುವೆ ಇಡೀ ಆವರಣ ನಗೆಗಡಲಲ್ಲಿ ತೇಲಿದೆ. ವಕೀಲ ದಿನೇಶ್ ದ್ವಿವೇದಿ ನಾನು ಸ್ಟೈಲೀಶ್ ಆಗಿ ಕೂದಲಿಗೆ ಬಣ್ಣ ಹಾಕಿಕೊಂಡು ಬಂದಿಲ್ಲ. ಕ್ಷಮೆ ಇರಲಿ ಇದು ಹೋಳಿ ಆಚರಣೆಯಿಂದಾಗಿದೆ ಎಂದಿದ್ದಾರೆ. ಈ ಮಾತಿಗೆ ಆವರಣದಲ್ಲಿದ್ದ ಎಲ್ಲರೂ ನಕ್ಕಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್ ನಿಮ್ಮ ಕೂದಲಿನ ಬಣ್ಣಕ್ಕೂ, ಮದ್ಯಕ್ಕೂ ಏನಾದರು ಸಂಬಂಧವಿದೆಯಾ? ಅನ್ನೋ ಪ್ರಶ್ನೆಗೆ ನಾನೊಬ್ಬ ವಿಸ್ಕಿ ಅಭಿಮಾನಿ ಎಂದು ಉತ್ತರಿಸಿದ್ದಾರೆ. ಈ ಹಾಸ್ಯ ಚರ್ಚೆ ಗಂಭೀರ ವಿಚಾರಣೆಯಲ್ಲಿದ್ದ ಸುಪ್ರೀಂ ಕೋರ್ಟ್ ಒಂದು ಕ್ಷಣ ಹಾಸ್ಯದ ಹೊನಲಿನಲ್ಲಿ ತೇಲಾಡಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಅಡ್ವೋಕೇಟ್ ದಿನೇಶ್ ದ್ವಿವೇದಿ ಉತ್ತರ ಪ್ರದೇಶ ಸರ್ಕಾರ ಮದ್ಯ ನಿಯಂತ್ರಣ ಹಾಗೂ  ನಿರ್ವಹಣೆ ಅಧಿಕಾರದ ಕುರಿತು ಗಂಭೀರ ವಿಚಾರಣೆಯಲ್ಲಿ ವಾದ ಮಂಡಿಸಲು ಆರಂಭಿಸಿದ್ದರು. ದಿನೇಶ್ ದ್ವಿವೇದಿ ತಮ್ಮ ಬಿಳಿ ಕೂದಲಿನ ಬಣ್ಣ ಬದಲಾಗಿರುವ ಕುರಿತು ಆರಂಭದಲ್ಲೇ ಕ್ಷಮೆ ಕೇಳಿದ್ದಾರೆ. ನನ್ನ ಬಣ್ಣ ಬಣ್ಣದ ಸ್ಟೈಲಿಶ್ ಕೂದಲಿಗೆ ಮೊದಲಿಗೆ ನಾನು ಕ್ಷಮೆ ಕೇಳುತ್ತೇನೆ. ಇದು ಹೋಳಿ ಹಬ್ಬದ ಆಚರಣೆಯಿಂದಾಗಿದೆ. ಇದು ಮನೆಯಲ್ಲಿರುವ ಮೊಮ್ಮಕ್ಕಳಿಂದ ಆಗಿದೆ. ನಿಮ್ಮ ಮನೆಯಲ್ಲಿ ತುಂಬಾ ಮೊಮ್ಮಕ್ಕಿಳಿದ್ದರೆ ನೀವು ಹೋಳಿಯಿಂದ ಬಚಾವ್ ಆಗಲು ಸಾಧ್ಯವಿಲ್ಲ ಎಂದು ದಿನೇಶ್ ದ್ವಿವೇದಿ ಹೇಳಿದ್ದಾರೆ. ಅಡ್ವೋಕೇಟ್ ಮಾತಿಗೆ ಕೋರ್ಟ್ ಆವರಣದಲ್ಲಿದ್ದ ಎಲ್ಲರೂ ನಕ್ಕಿದ್ದಾರೆ.

Tap to resize

Latest Videos

ಕುಳಿತಿದ್ದ ರೀತಿ ಚೇಂಜ್‌ ಮಾಡಿದ್ದಕ್ಕೆ ನನ್ನ ಟ್ರೋಲ್‌ ಮಾಡಿದ್ರು: ಸಿಜೆಐ ಡಿವೈ ಚಂದ್ರಚೂಡ್‌!

ದ್ವಿವೇದಿ ಈ ಮಾತುಗಳನ್ನು ಹೇಳುತ್ತಿದ್ದಂತೆ ಗಂಭೀರ ವಿಚಾರಣೆಯಲ್ಲಿ ತೊಡಗಿಸಿಕೊಂಡಿದ್ದ ಸಿಜೆಐ ಡಿವೈ ಚಂದ್ರಚೂಡ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನಿಮ್ಮ ಕೂದಲಿನ ಬಣ್ಣಕ್ಕೂ ವಾದ ಮಾಡುತ್ತಿರುವ ಮದ್ಯಕ್ಕೂ ಏನಾದರು ಸಂಬಂಧವಿದೆಯಾ ಎಂದು ಪ್ರಶ್ನಿಸಿದ್ದಾರೆ. ಚಂದ್ರಚೂಡ್ ಅವರ ಹಾಸ್ಯ ಪಜ್ಞೆ ಎಲ್ಲರನ್ನು ಚಕಿತಗೊಳಿಸಿತ್ತು. ಇದಕ್ಕೆ ಉತ್ತರಿಸಿದ ದ್ವಿವೇದಿ, ಹೋಳಿ ಹಬ್ಬ ಎಂದರೆ ಕೊನೆಯಲ್ಲಿ ಒಂದು ಮದ್ಯದ ಪಾರ್ಟಿ ಇರಬೇಕಲ್ವಾ? ನಾನೊಬ್ಬ ವಿಸ್ಕಿ ಪ್ರೇಮಿ ಎಂದು ದ್ವಿವೇದಿ ಹೇಳಿದ್ದಾರೆ. ಮೊದಲೆ ಹಾಸ್ಯದ ಮೂಡ್‌ನಲ್ಲಿದ್ದ ಕೋರ್ಟ್ ಆವರಣೆ ಈ ಉತ್ತರದಿಂದ ನಗೆಗಡಲಾಯಿತು.

ಇಂಡಸ್ಟ್ರಿಯಲ್ ಆಲ್ಕೋಹಾಲ್ ಕುರಿತು ವಿಚಾರಣೆ ವೇಳೆ ಈ ಹಾಸ್ಯದ ಹೊನಲು ಹರಿದಿದೆ. ಡಿವೈ ಚಂದ್ರಚೂಡ್ ನೇತೃತ್ವದ 9 ನ್ಯಾಯಮೂರ್ತಿಗಳ ಪೀಠ ಈ ಅರ್ಜಿ ವಿಚಾರಣೆ ನಡೆಸಿದೆ. 

ಭಾರತದ ಪ್ರಭಾವಿ ವ್ಯಕ್ತಿ ಪಟ್ಟಿ ಪ್ರಕಟ, ಮೋದಿ ನಂ.1, ಟಾಪ್ 10 ಪಟ್ಟಿಯಲ್ಲಿ CJI ಚಂದ್ರಚೂಡ್!

click me!