ಮಾದಕದ್ರವ್ಯ ಪ್ರಕರಣ ಪಂಜಾಬ್‌ ಕಾಂಗ್ರೆಸ್‌ ಶಾಸಕ ಸುಖ್ಪಾಲ್​ ಸಿಂಗ್ ಖೈರಾ ಬೆಳ್ಳಂಬೆಳಗ್ಗೆ ಅರೆಸ್ಟ್

By Gowthami KFirst Published Sep 28, 2023, 8:50 AM IST
Highlights

ಡ್ರಗ್ಸ್ ಸಂಬಂಧಿತ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪಂಜಾಬ್ (ಸೆ.28): ಡ್ರಗ್ಸ್ ಸಂಬಂಧಿತ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಚಂಡೀಗಢದ ಸೆಕ್ಟರ್ 5ರಲ್ಲಿರುವ ಅವರ ಬಂಗಲೆ ಮೇಲೆ ದಾಳಿ ನಡೆಸಿದ ನಂತರ ಬಂಧನವಾಗಿದೆ. 

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಖೈರಾ ವಿರುದ್ಧ ದಾಖಲಾಗಿರುವ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಾಲಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಮುಂಜಾನೆ ಖೈರಾ ಅವರ ನಿವಾಸದ ಮೇಲೆ ದಾಳಿ ನಡೆಸಿದರು.

ಹೊಸ ಸಿಇಒ ಆಯ್ಕೆಯಾಗಿದ್ದೇ ತಡ 5 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾದ ಬೈಜೂಸ್!

ದಾಳಿಯ ಸಮಯದಲ್ಲಿ ಖೈರಾ ಫೇಸ್‌ಬುಕ್‌ನಲ್ಲಿ ಲೈವ್‌ಗೆ ಬಂದರು, ಅದರಲ್ಲಿ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದರು. ವೀಡಿಯೋದಲ್ಲಿ ಖೈರಾ ಪೊಲೀಸರಿಗೆ ವಾರೆಂಟ್ ನೀಡುವಂತೆ ಕೇಳುತ್ತಿದ್ದು, ತನ್ನನ್ನು ಬಂಧಿಸಲು ಕಾರಣವೇನು ಎಂದು ವಿಚಾರಿಸುತ್ತಿರುವುದು ಕಂಡುಬಂದಿದೆ.

ಪಂಜಾಬ್‌ನ ಭುಲಾತ್‌ನ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ  ಅವರನ್ನು ಶೀಘ್ರದಲ್ಲೇ ಜಲಾಲಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ವರದಿ ತಿಳಿಸಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಆರೋಪಿಸಿದ್ದಾರೆ.

ಅಂಬಾನಿ ಕುಟುಂಬದ ಹೆಣ್ಮಕ್ಳ ಬಿಲಿಯನ್ ಡಾಲರ್ ಬೆಲೆಬಾಳುವ ಆಭರಣ ಸಂಗ್ರಹ, ಅತ್ತೆ-ಮಗಳು-

ಡಿಎಸ್​ಪಿ  ಜಲಾಲಾಬಾದ್ ಅಚ್ಚ್ರು ರಾಮ್ ಶರ್ಮಾ ಅವರು ಈ ಬಗ್ಗೆ ಹೇಳಿಕೆ ನೀಡಿ ಖೈರಾ ಅವರನ್ನು ಹಳೆಯ NDPS ಕೇಸ್‌ ನಲ್ಲಿ ಬಂಧಿಸಲಾಗುತ್ತಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಮತ್ತು ಬಂಧನವನ್ನು ವಿರೋಧಿಸುತ್ತದೆ ಎಂದು ಖೈರಾ ಬಂಧನದ ವೇಳೆ ಹೇಳಿಕೊಂಡಿದ್ದಾರೆ.

click me!