15 ವರ್ಷದಿಂದ ಯೂಟ್ಯೂಬ್ ಚಾನೆಲ್‌ನಲ್ಲಿದ್ದೇನೆ, ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಒತ್ತಿ, ಮೋದಿ ಸಂದೇಶ!

Published : Sep 27, 2023, 09:45 PM ISTUpdated : Sep 27, 2023, 09:48 PM IST
15 ವರ್ಷದಿಂದ ಯೂಟ್ಯೂಬ್ ಚಾನೆಲ್‌ನಲ್ಲಿದ್ದೇನೆ, ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಒತ್ತಿ, ಮೋದಿ ಸಂದೇಶ!

ಸಾರಾಂಶ

ನಾನು ನಿಮ್ಮಂತೆ, ನಿಮ್ಮಂತೆ ನಾನು ಕೂಡ ಯೂಟ್ಯೂಬ್ ಚಾನೆಲ್ ಮೂಲಕ ಕಳೆದ 15 ವರ್ಷದಿಂದ ಜನರ ಸಂಪರ್ಕದಲ್ಲಿದ್ದೇನೆ ಎಂದು ಮೋದಿ ಯೂಟ್ಯೂಬರ್ಸ್‌ಗೆ ಸ್ಪೂರ್ತಿ ತುಂಬಿದ್ದಾರೆ. ಯೂಟ್ಯೂಬ್ ಫಾನ್‌ಫೆಸ್ಟ್‌ನಲ್ಲಿ ಮೋದಿ ಸಂದೇಶ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.   

ನವದೆಹಲಿ(ಸೆ.27) ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮೂಲಕ ಮಹತ್ತರ ಬದಲಾವಣೆಗಳಾಗಿದೆ. ಯುವ ಸಮೂಹ ಯೂಟ್ಯೂಬ್ ಚಾನೆಲ್ ಮೂಲಕವೇ ಆದಾಯ ಗಳಿಸುತ್ತಿದ್ದಾರೆ. ಲಕ್ಷಾಂತರ ಯೂಟ್ಯೂಬ್ ಚಾನೆಲ್ ಭಾರತದಲ್ಲಿ ಪ್ರತಿ ದಿನ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ಮುಂಬೈನಲ್ಲಿ ಯೂಟ್ಯೂಬ್  ಫ್ಯಾನ್‌ಫೆಸ್ಟ್ ಇಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾರತದ ಯೂಟ್ಯೂಬರ್ಸ್‌ಗೆ ಮಹತ್ವದ ಸಂದೇಶ ನೀಡಿದ್ದರೆ. ಮೋದಿ ವಿಡಿಯೋ ಪ್ಲೇ ಆಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದವರಿಂದ ಹರ್ಷೋದ್ಘಾರ ಮೂಡಿತ್ತು.

ನನ್ನ ಆತ್ಮೀಯ ಯೂಟ್ಯೂಬರ್ಸ್, ಇಂದು ನಾನು ಫೆಲೋ ಯೂಟ್ಯೂಬರ್ಸ್ ರೂಪದಲ್ಲಿ ಈ ಕಾರ್ಯಕ್ರಮದ ಮೂಲಕ ನಿಮ್ಮ ಜೊತೆ ಮಾತನಾಡಲು ಅತೀವ ಸಂಸತವಾಗುತ್ತಿದೆ. ನಾನು ಕೂಡ ನಿಮ್ಮಂತೆ. ನಿಮಗಿಂತ ನಾನು ಭಿನ್ನವಾಗಿಲ್ಲ. ಕಳೆದ 15 ವರ್ಷಗಳಿಂದ ನಾನು ಕೂಡ ಯ್ಯೂಟೂಬ್ ಚಾನೆಲ್ ಮೂಲಕ ದೇಶದ ಜನತೆ ಹಾಗೂ ವಿಶ್ವದ ಸಂಪರ್ಕದಲ್ಲಿದ್ದೇನೆ. ನನ್ನ ಯೂಟ್ಯೂಬ್ ಚಾನೆಲ್‌ಗೆ ಬಹಳ ಮಂದಿ ಸಬ್‌ಸ್ಕ್ರೈಬರ್ ಆಗಿದ್ದಾರೆ. ಇದೀಗ 5,000 ಯೂಟ್ಯೂಬ್ ಕ್ರಿಯೆಟರ್ಸ್ ಇದ್ದಾರೆ ಎಂದು ನನಗೆ ಮಾಹಿತಿ ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಮಹಿಳಾ ಮೀಸಲು ಬಿಲ್‌ ರಕ್ಷಾ ಬಂಧನಕ್ಕೆ ನನ್ನ ಗಿಫ್ಟ್‌: ಪ್ರಧಾನಿ ಮೋದಿ

ಅತೀ ದೊಡ್ಡ ಸಂಖ್ಯೆಯ ಯ್ಯೂಟೂಬ್ ಕ್ರಿಯೆಟರ್ಸ್ ನೆರೆದಿದ್ದಾರೆ. ನಾನು ವರ್ಷಗಳಿಂದ ನೋಡುತ್ತಿದ್ದೇನೆ. ಯೂಟ್ಯೂಬ್ ಮೂಲಕ ಒಂದು ವಿಷಯ, ವಿಚಾರಗಳು ಜನರಲ್ಲಿ ಬೀರುತ್ತಿರುವ ಪರಿಣಾಮ, ಫಲಶ್ರುತಿಗಳ ಕುರಿತು ನಾನು ಗಮನಿಸುತ್ತಿದ್ದೇನೆ. ಈ ಇಂಪಾಕ್ಟ್ ಮತ್ತಷ್ಟು ಪರಿಣಾಮಕಾರಿಯಾಗಿಸಲು ನಮಗೆ ಅವಕಾಶವಿದೆ. ನಾವು ಒಗ್ಗಟ್ಟಾಗಿ ಅತೀ ದೊಡ್ಡ ಜನಸಂಖ್ಯೆ ದೇಶವಾದ ಭಾರತದಲ್ಲಿ ಹೊಸ ಬದಲಾವಣೆ ತರಲು ಸಾಧ್ಯವಿದೆ ಎಂದು ಮೋದಿ ಹೇಳಿದ್ದಾರೆ.

ನಾವು ಒಗ್ಗಟ್ಟಾಗಿ ಹಲವರನ್ನ ಸಶಕ್ತರನ್ನಾಗಿ ಮಾಡಲು ಸಾಧ್ಯವಿದೆ. ದೇಶದ ಅತೀ ದೊಡ್ಡ ಕ್ರಿಯೇಟಿವ್ ಕಮ್ಯೂನಿಟಿ ಜೊತೆ ನಾನು ಮಾತನಾಡುತ್ತಿದ್ದೇನೆ. ಈ ವೇಳೆ ನನಗೆ ಕೆಲ ವಿಷಗಳ ಕುರಿತು ಮಾತನಾಡಲು ಅನಿಸುತ್ತಿದೆ. ಈ ವಿಷಯ ಅಪಾರ ಜನರಲ್ಲಿ ಸಂಚಲನ ಸೃಷ್ಟಿಸುವ ವಿಷಯವಾಗಿದೆ. ಈ ವಿಷಯ ಜನರಲ್ಲಿ ಹೊಸ ಚೈತನ್ಯ ನೀಡಬಲ್ಲದಾಗಿದೆ. ಈ ಪೈಕಿ ಮೊದಲ ವಿಷಯ ಸ್ವಚ್ಚತೆ. ಕಳೆದ 9 ವರ್ಷಗಳಿಂದ ಭಾರತದಲ್ಲಿ ಸ್ವಚ್ಚ ಭಾರತ ಅಭಿಯಾನ ನಡೆಸಲಾಗುತ್ತಿದೆ. ಪ್ರತಿಯೊಬ್ಬರು ಇದಕ್ಕೆ ಕೊಡುಗೆ ನೀಡಿದ್ದರೆ. ಮಕ್ಕಳು, ಸೆಲೆಬ್ರೆಟಿಗಳು, ಸಾಮಾನ್ಯರು ಈ ಆಂದೋಲನದಲ್ಲಿ ಪಾಲ್ಗೊಂಡು ಹೊಸ ಬದಲಾವಣೆ ತಂದಿದ್ದಾರೆ. 

Big Breaking: ಜನವರಿ 22ಕ್ಕೆ ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ!

ಎರಡನೇ ವಿಷಯ ಎಂದರೆ ಡಿಜಿಟಲ್ ಪೇಮೆಂಟ್. ಭಾರತ ಇಂದು ಶೇಕಡಾ 46 ರಷ್ಟು ಯುಪಿಐ ಪೇಮೆಂಟ್ ಮೂಲಕ ವ್ಯವಹಾರ ನಡೆಸುತ್ತಿದೆ. ನಿಮ್ಮ ವಿಡಿಯೋ ಮೂಲಕ ಜನಸಾಮಾನ್ಯರಿಗೆ ಸುಲಭ ಭಾಷೆ ಮೂಲಕ ಡಿಜಿಟಲ್ ಪೇಮೆಂಟ್ ತಿಳಿಸಿಕೊಡಿ. ಸ್ಥಳೀಯ ಉತ್ಪನ್ನಗಳ ಕುರಿತು ಬೆಳಕು ಚೆಲ್ಲಿ. ಭಾರತದ ಉತ್ಪನ್ನಗಳ ಖರೀದಿಗೆ ಪ್ರೇರಿಪಿಸಿ ಎಂದು ಮೋದಿ ಯೂಟ್ಯೂಬರ್ಸ್‌ ಬಳಿ ಮನವಿ ಮಾಡಿದ್ದಾರೆ. ಇದೇ ವೇಳೆ ಎಲ್ಲಾ ಯೂಟ್ಯೂಬರ್ಸ್ ರೀತಿಯಲ್ಲೇ ಮೋದಿ ಕೂಡ ನನ್ನ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಬಟನ್ ಪ್ರೆಸ್ ಮಾಡಿ ಎಂದು ಮಾತು ಮುಗಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!