ಮುದುಕಿಗೆ ರಾಹುಲ್‌ ಗಾಂಧಿ ಯಾಕೆ ಫ್ಲೈಯಿಂಗ್‌ ಕಿಸ್‌ ನೀಡ್ತಾರೆ? ದೇಶದಲ್ಲೇನು ಹೆಣ್ಮಕ್ಕಳಿಗೆ ಬರ ಇದ್ಯಾ?: ಕಾಂಗ್ರೆಸ್‌ ಶಾಸಕಿ!

Published : Aug 11, 2023, 11:49 AM ISTUpdated : Aug 11, 2023, 12:18 PM IST
ಮುದುಕಿಗೆ ರಾಹುಲ್‌ ಗಾಂಧಿ ಯಾಕೆ ಫ್ಲೈಯಿಂಗ್‌ ಕಿಸ್‌ ನೀಡ್ತಾರೆ? ದೇಶದಲ್ಲೇನು ಹೆಣ್ಮಕ್ಕಳಿಗೆ ಬರ ಇದ್ಯಾ?: ಕಾಂಗ್ರೆಸ್‌ ಶಾಸಕಿ!

ಸಾರಾಂಶ

ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಮಹಿಳಾ ಸಂಸದರಿದ್ದ ಕಡೆ ಫ್ಲೈಯಿಂಗ್‌ ಕಿಸ್‌ ಕೊಟ್ಟಿದ್ದನ್ನು ಡಿಫೆಂಡ್‌ ಮಾಡಿಕೊಳ್ಳುವ ಹಾದಿಯಲ್ಲಿ ಬಿಹಾರದ ಕಾಂಗ್ರೆಸ್‌ ಶಾಸಕಿ ನೀತು ಸಿಂಗ್‌ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ.  

ನವದೆಹಲಿ (ಆ.11): ಕಾಂಗ್ರೆಸ್ ಸಂಸದ ರಾಹುಲ್‌ ಲೋಕಸಭೆಯಲ್ಲಿ ನೀಡಿದ್ದಾರೆ ಎನ್ನಲಾದ ಫ್ಲೈಯಿಂಗ್‌ ಕಿಸ್‌ ವಿವಾದಕ್ಕಿಂತ ಅದನ್ನು ಡಿಫೆಂಡ್‌ ಮಾಡಿಕೊಂಡು ಕಾಂಗ್ರೆಸ್‌ ನಾಯಕರು ಆಡುತ್ತಿರುವ ಮಾತುಗಳೇ ವಿವಾದಕ್ಕೆ ಕಾರಣವಾಗಿದೆ. ಬಿಹಾರದ ಕಾಂಗ್ರೆಸ್‌ ಶಾಸಕಿ ನೀತು ಸಿಂಗ್‌ ಆಡಿರುವ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಫ್ಲೈಯಿಂಗ್‌ ಕಿಸ್‌ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಹೇಳುವ ಹಾದಿಯಲ್ಲಿ, ರಾಹುಲ್‌ ಗಾಂಧಿಗೆ ದೇಶದಲ್ಲಿ ಯುವ ಹೆಣ್ಮಕ್ಕಳ ಕೊರತೆಯಿಲ್ಲ ಎಂದು ಹೇಳಿದ್ದಾರೆ. ಇನ್ನು ನೀತಿ ಸಿಂಗ್‌ ಆಡಿರುವ ಮಾತಿಗೆ ಬಿಜೆಪಿ ಕಿಡಿಕಿಡಿಯಾಗಿದ್ದು, ಒಂದು ಮಹಿಳೆಯಾಗಿ ನೀವು ಆಡಿರುವ ಮಾತುಗಳು ಅತ್ಯಂತ ಹೀನವಾದದ್ದು ಎಂದು ಹೇಳಿದೆ. ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಫ್ಲೈಯಿಂಗ್‌ ಕಿಸ್‌ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಸ್ಮೃತಿ ಇರಾನಿಯನ್ನು ಗುರಿಯಾಗಿಸಿಕೊಂಡು ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್‌ ಮಾತನಾಡಿದ್ದಾರೆ.

ನೀತು ಸಿಂಗ್‌ ಹೇಳಿದ್ದೇನು?: ನಮ್ಮ ರಾಹುಲ್‌ ಗಾಂಧಿ ಏನಿದ್ದಾರೆ, ಅವರಿಗೆ ಈ ದೇಶದಲ್ಲಿ ಹುಡುಗಿಯರಿಗೇನು ಬರವಿಲ್ಲ. ಹಾಗೇನಾದರೂ ಅವರಿಗೆ ಫ್ಲೈಯಿಂಗ್‌ ಕಿಸ್ ನೀಡಬೇಕು ಅನಿಸಿದರೆ, ಅವರು ಯಾವುದಾದರೂ ಹುಡುಗಿಗೇ ನೀಡುತ್ತಾರೆ. 50 ವರ್ಷದ ಮುದುಕಿಗೆ ರಾಹುಲ್‌ ಗಾಂಧಿ ಯಾಕೆ ಫ್ಲೈಯಿಂಗ್‌ ಕಿಸ್‌ ನೀಡುತ್ತಾರೆ. ಅವರ ಮೇಲೆ ಮಾಡಿರುವ ಇಡೀ ಆರೋಪ ನಿರಾಧಾರ' ಎಂದು ನೀತು ಸಿಂಗ್‌ ನಗುತ್ತಲೇ ಕಾಮೆಂಟ್‌ ಮಾಡಿದ್ದಾರೆ.

ಅದಲ್ಲದೇ, ಈ ಫ್ಲೈಯಿಂಗ್‌ ಕಿಸ್‌ ವಿವಾದ ಎನ್ನುವುದು, ರಾಹುಲ್‌ ಗಾಂಧಿಯ ಇಮೇಜ್‌ಅನ್ನು ಹಾಳು ಮಾಡುವ ಯತ್ನವಷ್ಟೇ ಎಂದು ಎಂದು ಬಿಹಾರದ ಹಿಸುವಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿರುವ ನೀತು ಸಿಂಗ್‌ ಹೇಳಿದ್ದಾರೆ.  "ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಹುಡುಗಿಯರ ಕೊರತೆ ಇಲ್ಲ, ಅವರು ಫ್ಲೈಯಿಂಗ್ ಕಿಸ್ ಕೊಡಬೇಕು ಎನಿಸಿದಲ್ಲಿ, ಅದನ್ನು ಒಬ್ಬ ಹುಡುಗಿಗೆ ಕೊಡುತ್ತಾರೆ. ಸ್ಮೃತಿ ಇರಾನಿಯಂತಹ 50 ವರ್ಷದ ವೃದ್ಧ ಮಹಿಳೆಗೆ ಯಾಕೆ ಕೊಡುತ್ತಾರೆ. ರಾಹುಲ್ ಗಾಂಧಿ ವಿರುದ್ಧದ ಈ ಆರೋಪಗಳು ಆಧಾರರಹಿತವಾಗಿವೆ ಎಂದು ನೀತು ಸಿಂಗ್ ಹೇಳಿದ್ದಾರೆ.  ಈ ನಡುವೆ, ನೀತು ಹೇಳಿಕೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ವಿರುದ್ಧ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಮಹಾರಾಜ ಟಿ20 ಟ್ರೋಫಿ: ಕರ್ನಾಟಕ ಕ್ರಿಕೆಟ್‌ನಲ್ಲಿ ಕನ್ನಡಕ್ಕಿಲ್ಲ ಬೆಲೆ, ಕೆಎಸ್‌ಸಿಎ ಆವರಣದಲ್ಲೇ ಕನ್ನಡದ ಕಗ್ಗೊಲೆ!

ಪಕ್ಷದ ವಕ್ತಾರ ಗೌರವ್ ಭಾಟಿಯಾ ಟ್ವಿಟರ್‌ನಲ್ಲ ಈ ಕುರಿತಾಗಿ ಟೀಕೆ ಮಾಡಿದ್ದು, ನೀತು ಸಿಂಗ್ ಅವರನ್ನು ಸ್ಮೃತಿ ಇರಾನಿ ವಿರುದ್ಧದ ಟೀಕೆಗಳು 'ನಾಚಿಕೆಗೇಡಿನವು' ಎಂದು ಹೇಳಿದ್ದಾರೆ. ಭಾಟಿಯಾ ಮಾತನ್ನೇ ಪುನರುಚ್ಛರಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ 'ಮಹಿಳಾ ವಿರೋಧಿ ಪಕ್ಷ' ಮತ್ತು ಅದು ತನ್ನ ನಾಯಕ ರಾಹುಲ್ ಗಾಂಧಿಯನ್ನು ರಕ್ಷಿಸಲು ಯಾವುದೇ ಹಂತಕ್ಕೆ ಹೋಗಬಹುದು ಅನ್ನೋದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

 

Watch: ಲೋಕಸಭೆಯಲ್ಲೇ ಮಹಿಳಾ ಸಂಸದರಿಗೆ ಫ್ಲೈಯಿಂಗ್‌ ಕಿಸ್‌ ನೀಡಿದ ರಾಹುಲ್‌ ಗಾಂಧಿ!

ಏನಿದು ಫ್ಲೈಯಿಂಗ್‌ ಕಿಸ್‌ ಕೇಸ್‌: ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ಬುಧವಾರ ರಾಹುಲ್‌ ಗಾಂಧಿ ಮಾತನಾಡಿದ್ದರು. ಮಾತನಾಡಿ ಮುಕ್ತಾಯವಾದ ಬಳಿಕ ಸ್ಮೃತಿ ಇರಾನಿ ಇದರ ಬಗ್ಗೆ ಉತ್ತರ ನೀಡಲು ಆರಂಭಿಸಿದರು. ಈ ವೇಳೆ ಸದನದಿಂದ ಹೊರಹೀಗುವ ಹಾದಿಯಲ್ಲಿದ್ದ ರಾಹುಲ್‌ ಗಾಂಧಿ, ಫ್ಲೈಯಿಂಗ್‌ ಕಿಸ್‌ ನೀಡಿದ್ದರು ಎನ್ನಲಾಗಿದೆ. ಇದನ್ನು ಸ್ಮೃತಿ ಇರಾನಿ ಲೋಕಸಭೆಯ ಭಾಷಣದಲ್ಲಿಯೇ ಟೀಕೆ ಮಾಡಿದ್ದಲ್ಲದೆ, ಸದನದ ಇಂತ ಕೃತ್ಯಗಳನ್ನು ಹಿಂದೆಂದೂ ನೋಡಿರಲಿಲ್ಲ ಎಂದಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!