*ಕಾಲೇಜು ಪಾರ್ಕಿಂಗ್‌ನಲ್ಲಿ ನಮಾಜ್ ಮಾಡುತ್ತಿದ್ದವರನ್ನು ತಡೆದ ಉಪಪ್ರಾಂಶುಪಾಲ
*ಉಪಪ್ರಾಂಶುಪಾಲ ವಿರುದ್ಧ ಕ್ರಮಕ್ಕೆ ಜೈಪುರ ಶಾಸಕ ಅಮೀನ್ ಕಾಗ್ಜಿ ಪತ್ರ
*ಧಾರ್ಮಿಕ ದ್ವೇಷವನ್ನು ಹರಡುವ ಪ್ರಯತ್ನ ಎಂದ ಬಿಜೆಪಿ ನಾಯಕ ದೇವನಾನಿ
ಜೈಪುರ್(ನ.20) : ಕಾಲೇಜು ಆವರಣದಲ್ಲಿ ನಮಾಜ್ (Namaz) ಮಾಡಲು ಮುಸ್ಲಿಂ (Muslim) ವಿದ್ಯಾರ್ಥಿಯನ್ನು ತಡೆದ ಕಾಲೇಜು ಉಪಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜೈಪುರ ಶಾಸಕ ಅಮೀನ್ ಕಾಗ್ಜಿ (Amin Kagzi) ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ನಾಯಕ ಹಾಗೂ ಮಾಜಿ ಶಿಕ್ಷಣ ಸಚಿವ ವಾಸುದೇವ್ ದೇವನಾನಿ (Vasudev Devnani) ಅವರು ಕಾಂಗ್ರೆಸ್‌ನ ಕಿಶನ್‌ಪೋಲ್ (Kishnpole) ಶಾಸಕ ಅಮೀನ್ ಕಾಗ್ಜಿ ಅವರು "ಧಾರ್ಮಿಕ ದ್ವೇಷವನ್ನು ಹರಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ" ಎಂದು ಆರೋಪಿಸಿ ಬರೆದ ಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ: ವಿವಾದ ಸೃಷ್ಟಿಸಿ, ಕ್ಷಮಿಸಿ ಎಂದ ವಕಾರ್!
ಕಳೆದ ವಾರ ರಾಜಸ್ಥಾನದ ಜೈಪುರದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ನಮಾಜ್ ಮಾಡದಂತೆ ಉಪಪ್ರಾಂಶುಪಾಲರು (vice principal) ತಡೆದಿದ್ದರು ಎನ್ನಲಾಗಿದೆ. ಕಾಗ್ಜಿ ಅವರು ತಮ್ಮ ಪತ್ರದಲ್ಲಿ ಕಾಲೇಜು ಪಾರ್ಕಿಂಗ್ (College Parking) ಸ್ಥಳದ ಒಂದು ಮೂಲೆಯಲ್ಲಿ ನಮಾಝ್ ಮಾಡುವುದನ್ನು ತಡೆಯುವ ಘಟನೆಯ ಹಿಂದೆ ಉಪ ಪ್ರಾಂಶುಪಾಲರಾದ ಆರ್.ಎನ್.ಶರ್ಮಾ (R N Sharma) ಅವರ ಕೈವಾಡವಿದೆ ಎಂದು ಉಲ್ಲೇಖಿಸಿದ್ದಾರೆ. ಜತೆಗೆ ಶರ್ಮಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ (Syndicate Member) ಮತ್ತು ಶಾಸಕ ಅಮೀನ್ ಕಾಗ್ಜಿ ಅವರು ಕಾಲೇಜಿನಲ್ಲಿ ನಡೆದ ನಮಾಜ್ ಘಟನೆಯ ಬಗ್ಗೆ ಧಾರ್ಮಿಕ ದ್ವೇಷವನ್ನು ಹರಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ," ಇಂತಹ ಕ್ರಮಗಳು ಶಿಕ್ಷಣ ಸಂಸ್ಥೆಗಳನ್ನು "ಮೂಲಭೂತವಾದಿ ಚಿಂತನೆ" ಯಿಂದ ಕಲುಷಿತಗೊಳಿಸುತ್ತವೆ ಎಂದು ದೇವನಾನಿ ಹೇಳಿದ್ದಾರೆ.
Namaz ಸಲ್ಲಿಕೆಗೆ ವಿರೋಧ : ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ ಎಂದ ಪ್ರತಿಭಟನಾಕಾರರು!
ಮುಸ್ಲಿಂಮರು (muslim) ನಮಾಜ್ ಮಾಡುತ್ತಿದ್ದ ಜಾಗಕ್ಕೆ ಹೋಗಿ ಕ್ಯಾತೆ ತೆಗೆದ ಗುಪೊಂದು ಆ ಜಾಗದಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಿಸುವುದಾಗಿ ಹೇಳಿದ ಘಟನೆ ಇತ್ತೀಚೆಗೆ ನಡೆದಿತ್ತು. ಹರಿಯಾಣದ ಗುರ್‌ಗಾವ್‌ನಲ್ಲಿ (Haryana) ಈ ಘಟನೆ ನಡೆದಿದ್ದು ಬೆಳಿಗ್ಗೆ ನಮಾಜ್ (Namaz) ಮಾಡುವ ಜಾಗದಲ್ಲಿ ಸುತ್ತುವರೆದ ಜನರು ಅಲ್ಲಿ ವಾಲಿಬಾಲ್ ಕೋರ್ಟ್ ಮಾಡುತ್ತಿರುವುದಾಗಿ ಹೇಳಿ ನಮಾಜ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ವಾಲಿಬಾಲ್ ಅಂಕಣವನ್ನು ನಿರ್ಮಿಸುತ್ತೇವೆ, ಮಕ್ಕಳು ಆಟವಾಡುತ್ತಾರೆ!
"ನಾವು ಇಲ್ಲಿ ಸದ್ದಿಲ್ಲದೆ ಕುಳಿತಿದ್ದೇವೆ ... ಆದರೆ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ. ನಾವು ಇಲ್ಲಿ ಆಟಕ್ಕೆ ಆಡಲು ಯೋಜನೆ ಮಾಡುತ್ತಿದ್ದೇವೆ" ಎಂದು ಮೈದಾನವನ್ನು ಆಕ್ರಮಿಸಿಕೊಂಡವರಲ್ಲಿ ಒಬ್ಬರಾದ ಪರ್ಮಿಳಾ ಚಾಹರ್ ಹೇಳಿದ್ದರು, : "ನಾವು ನೆಟ್ ಅನ್ನು ಸ್ಥಾಪಿಸುತ್ತೇವೆ. ಇಲ್ಲಿ ವಾಲಿಬಾಲ್ ಅಂಕಣವನ್ನು ನಿರ್ಮಿಸುತ್ತೇವೆ (ಮತ್ತು) ಮಕ್ಕಳು ಆಟವಾಡುತ್ತಾರೆ, ಏನೇ ಆದರೂ ನಮಾಜ್‌ಗೆ ಅವಕಾಶ ನೀಡುವುದಿಲ್ಲ. ಮತ್ತೊಬ್ಬ ವ್ಯಕ್ತಿ ವೀರ್ ಯಾದವ್ ಹೇಳಿದ್ದರು.
ನಮಾಜ್ ಮಾಡುವ ವೇಳೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು: ಸಾವಿನ ದೃಶ್ಯ CCTVಯಲ್ಲಿ ಸೆರೆ..!
ಇದೇ ಜಾಗದ ಸಮೀಪದಲ್ಲಿ, ಕಳೆದ ವಾರ ಹಸುವಿನ ಸಗಣಿ ಸಾರಿಸುವ ಮೂಲಕ ಹಿಂದೂ ಪರ ಗುಂಪುಗಳು ಪೂಜೆ ನಡೆಸಿದ್ದವು. ಕಳೆದ ಹಲವು ವಾರಗಳಿಂದ ಈ ಜಾಗದಲ್ಲಿ ಮತ್ತು ಇತರ ಸೈಟ್‌ಗಳಲ್ಲಿ ಪ್ರತಿಭಟನೆ (Protest) ಮತ್ತು ಬೆದರಿಕೆಯ ಪ್ರದರ್ಶನಗಳನ್ನು ಎದುರಿಸುತ್ತಿರುವ ಮುಸ್ಲಿಂ ಸಂಘಟನೆಗಳು (Muslim organisations) ಈ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಹೇಳಿದ್ದರು. ಹಿಂದೂ (Hindu) ಬಾಂಧವರ ಜತೆ ಒಪ್ಪಂದ ಮಾಡಿಕೊಳ್ಳುವವರೆಗೂ ಇಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಎಲ್ಲರಿಗೂ ಹೇಳಿದ್ದೇವೆ. ಡಿಸಿ ಸಾಹೇಬರು ನಮಗೆ ಒಂದು ವಾರ ಕಾಲಾವಕಾಶವನ್ನೂ ನೀಡಿದ್ದಾರೆ ಎಂದು ಮುಸ್ಲಿಂ ಸಂಘಟನೆಗಳು ಹೇಳಿವೆ.