
ಲಕ್ನೋ(ಮೇ.20): ಉತ್ತರ ಪ್ರದೇಶದಲ್ಲಿ ಕಾರ್ಮಿಕರಿಗಾಗಿ ಆಯೋಜಿಸಿರುಉವ ಒಂದು ಸಾವಿರ ಬಸ್ ವಿಚಾರ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಿ ಹಾಗೂ ಗಾಂಧಿ ಕುಟುಂಬಕ್ಕೆ ಬಹಳ ಆಪ್ತರು ಎನ್ನಲಾದ ಅದಿತಿ ಸಿಂಗ್ ಕೂಡಾ ಈ ಚರ್ಚೆಯಲ್ಲಿ ಧ್ವನಿ ಎತ್ತಿದ್ದಾರೆ. ಆದರೆ ಅದಿತಿ ಸಿಂಗ್ ಬಿಜೆಪಿಯಲ್ಲ, ಬದಲಾಗಿ ತನ್ನದೇ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಪ್ರಿಯಯಾಂಕಾ ಗಾಂಧಿ ವಿರುದ್ಧ ಕಿಡಿ ಕಾರಿರುವ ಅದಿತಿ ಯೋಗಿ ಆದಿತ್ಯನಾಥ್‌ರನ್ನು ಹಾಡಿ ಹೊಗಳಿದ್ದಾರೆ.
ಈವರೆಗೆ ಬಿಜೆಪಿ ಹಾಗೂ ಯೋಗಿ ಆದಿತ್ಯನಾಥ್ ಸರ್ಕಾರ ಮಾತ್ರ ಕಾಂಗ್ರೆಸ್ ಕಾರ್ಮಿಕರ ವಿಚಾರದಲ್ಲಿ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸುತ್ತಿತ್ತು. ಆದರೀಗ ಕಾಂಗ್ರೆಸ್ ಪಕ್ಷದ ನಾಯಕರೇ ಪಕ್ಷದ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ. ರಾಯ್ಬರೇಲಿಯ ಸದರ್‌ನ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದಿದ್ದಾರೆ. ಅಲ್ಲದೇ ಇದೆಂತಹ ಕ್ರೂರ ತಮಾಷೆ? ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅದಿತಿ ಸಿಂಗ್ ಸಂಕಷ್ಟದ ವೇಳೆ ಇಂತಹ ರಾಜಕೀಯದ ಅಗತ್ಯವೇನು? ಒಂದು ಸಾವಿರ ಬಸ್‌ಗಳ ಪಟ್ಟಿ ಕಳುಹಿಸಿದರು, ಆದರೆ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ನಕಲಿ. ಇದೆಂತಹ ಕ್ರೂರ ತಮಾಷೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಕೋಟಾದಲ್ಲಿ ಉತ್ತರ ಪ್ರದೇಶದ ಸಾವಿರಾರು ಮಕ್ಕಳು ಸಿಲುಕಿದ್ದಾಗ, ಈ ಬಸ್‌ಗಳು ಎಲ್ಲಿದ್ದವು? ಅಂದು ಕಾಂಗ್ರೆಸ್ ಸರ್ಕಾರಕ್ಕೆ ಈ ಮಕ್ಕಳನ್ನು ಅವರ ಮನೆಗೆ ಬಿಡಿ ಗಡಿವರೆಗೂ ತಲುಪಿಸಲು ಸಾಧ್ಯವಾಗಿರಲಿಲ್ಲ. ಆಗ ಯೋಗಿ ಆದಿತ್ಯನಾಥ್‌ರವರು ಈ ಮಕ್ಕಳಿಗಾಗಿ ರಾತ್ರೋ ರಾತ್ರಿ ಬಸ್ ರೆಡಿ ಮಾಡಿ ಅವರ ಮನೆಗೆ ಕಳುಹಿಸಿದ್ದರು. ಖುದ್ದು ರಾಜಸ್ಥಾನ ಸಿಎಂ ಕೂಡಾ ಅವರ ನಡೆಯನ್ನು ಶ್ಲಾಘಿಸಿದ್ದರು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ