ವಿಶ್ವಸಂಸ್ಥೆ ಸಮಿತಿಗೆ ಹರ್ಷವರ್ಧನ ಅಧ್ಯಕ್ಷ!

By Suvarna NewsFirst Published May 20, 2020, 2:52 PM IST
Highlights

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನ ಈ ಬಾರಿ ಭಾರತಕ್ಕೆ| ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ನೇಮಕ| ಕೊರೋನಾ ಹಿನ್ನೆಲೆಯಲ್ಲಿ ಈ ಹುದ್ದೆ ಅತ್ಯಂತ ಮಹತ್ವದ್ದಾಗಿದೆ.

ನವದೆಹಲಿ(ಮೇ.20): ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನ ಈ ಬಾರಿ ಭಾರತಕ್ಕೆ ಒಲಿದಿದೆ. ಆ ಹುದ್ದೆಯನ್ನು ಆರೋಗ್ಯ ಸಚಿವ ಡಾ| ಹರ್ಷವರ್ಧನ ಅವರು ಮೇ 22ರಂದು ವಹಿಸಿಕೊಳ್ಳಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಈ ಹುದ್ದೆ ಅತ್ಯಂತ ಮಹತ್ವದ್ದಾಗಿದ್ದು, ಒಂದು ವರ್ಷ ಅಧಿಕಾರಾವಧಿ ಹೊಂದಿದೆ.

ಚೀನಾ ವಿರುದ್ಧ ತನಿಖೆ ಆದೇಶ ಅಧಿಕಾರ ಈಗ ಭಾರತ ಕೈಯ್ಯಲ್ಲಿ!

ಪ್ರಸ್ತುತ 34 ಸದಸ್ಯರ WHO ಕಾರ್ಯನಿರ್ವಾಹಕ ಮಂಡಳಿ (Executive Board) ಯ ಅಧ್ಯಕ್ಷರಾಗಿರುವ ಜಪಾನ್ ನ ಡಾ.ಹಿರೋಕಿ ನಕಟಾನಿ ಸ್ಥಾನವನ್ನು ಭಾರತದ ಡಾ.ಹರ್ಷವರ್ಧನ್ ತುಂಬಲಿದ್ದಾರೆ. ಒಟ್ಟು ಮೂರು ವರ್ಷದ ಅವಧಿಗೆ ಈ ನೇಮಕಾತಿ ನಡೆದಿದೆ. ಮೊದಲ ವರ್ಷ ಡಾ. ಹರ್ಷ್ ವರ್ಧನ್ ಅವರು ಛೇರ್ಮನ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೆರಡು ವರ್ಷ ಬೇರೆ ದೇಶಗಳ ಪ್ರತಿನಿಧಿಗಳು ಆ ಸ್ಥಾನ ನಿರ್ವಹಿಸಲಿದ್ಧಾರೆ.

ಭಾರತದ ಚೊಚ್ಚಲ ಸೋಂಕು ಪತ್ತೆ ಕಿಟ್‌ ಅಭಿವೃದ್ಧಿ ಯಶಸ್ವಿ!

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಭಾರತ ಸೇರಿದಂತೆ ಮೂರು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ನೀಡಲು ಕಳೆದ ವರ್ಷವೇ ನಿರ್ಧರಿಸಲಾಗಿತ್ತು. ಅದರಂತೆ, ನಿನ್ನೆ ಮಂಗಳವಾರ ನಡೆದ 194 ಸದಸ್ಯ ಬಲದ ವಿಶ್ವ ಆರೋಗ್ಯ ಅಧಿವೇಶನದಲ್ಲಿ ಭಾರತಕ್ಕೆ ಎಕ್ಸಿಕ್ಯೂಟಿವ್ ಬೋರ್ಡ್ ಛೇರ್ಮನ್ ಸ್ಥಾನ ನೀಡಲು ಅಂಕಿತ ಹಾಕಲಾಗಿತ್ತು.

click me!