ಆಸ್ಪತ್ರೆಗಳ ಸುಳ್ಳು ಲೆಕ್ಕ: ಸಾವನ್ನಪ್ಪಿದ್ದು 160 ಅಲ್ಲ, 400 ಮಂದಿ!

By Suvarna NewsFirst Published May 20, 2020, 11:35 AM IST
Highlights

ದೆಹಲಿಯಲ್ಲಿ ಒಂದೇ ದಿನ 500 ಕೊರೊನಾ ಪಾಸಿಟಿವ್ ಪ್ರಕರಣಗಳು| ನಿನ್ನೆ ಒಂದೇ ದಿನ ಪ್ರಕರಣಗಳು ಪತ್ತೆ| 11 ಸಾವಿರಕ್ಕೆ ಸಮೀಪಿಸುತ್ತಿರುವ ಸೋಂಕಿತರು| 

ನವದೆಹಲಿ(ಮೇ.20): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚತ್ತಿದೆ. ಹೀಗಿರುವಾಗ ಮೃತಪಟ್ಟವರ ಸಂಖ್ಯೆ ಕೊಂಚ ಗೊಂದಲ ಸೃಷ್ಟಿಸಿದೆ. ಇಲ್ಲಿನ ಆಸ್ಪತ್ರೆಗಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ನಾಲ್ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಶಂಕೆ ಎದುರಾಗಿದೆ.

ಹೌದು ಲಾಕ್‌ಡೌನ್ ಸಡಿಲಿಕೆ ಬಳಿಕ ದೆಹಲಿಯಲ್ಲಿ ಒಂದೇ ದಿನ 500 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯರ 11 ಸಾವಿರ ಸಮೀಪಿಸಿದೆ. ಅಲ್ಲದೇ ಸಾವಿನ ಸಂಖ್ಯೆ 166ಕ್ಕೇರಿಕೆಯಾಗಿದೆ ಎಂದು ಹೇಳಲಾಗಿದೆ. ಆದರೀಗ ಸಾವಿನ ಸಂಖ್ಯೆ 160 ಅಲ್ಲ 400 ಮಂದಿ ಎಂಬ ಮಾತುಗಳು ಕೇಳಿ ಬಂದಿವೆ. 

ರಾಜ್ಯದಲ್ಲಿ 149 ಮಂದಿಗೆ ಸೋಂಕು, 107 ಜನಕ್ಕೆ ಮಹಾರಾಷ್ಟ್ರ ಲಿಂಕ್‌!

ದೆಹಲಿಯ ಆಸ್ಪತ್ರೆಗಳು ಕೊಡುತ್ತಿರುವ ಲೆಕ್ಕ ಬೇರೆಯಾದರೆ, ಡೆಲ್ಲಿ ಕಾರ್ಪೋರೇಷನ್ ಕೊಟ್ಟಿದ್ದು ಮತ್ತೊಂದೇ ಲೆಕ್ಕವಾಗಿದೆ. ಕೊರೋನಾದಿಂದ ಸತ್ತವರ 160 ಮಂದಿ ಅಂತ ಆಸ್ಪತ್ರೆಗಳು ದಾಖಲೆಗಳು ನೀಡುತ್ತಿವೆ. ಆದರೆ ಎಸ್ ಒ ಪಿ ಪ್ರಕಾರ ಅಂತ್ಯ ಸಂಸ್ಕಾರ ಮಾಡಿರುವುದು 400 ಮಂದಿ ಎಂದು ಎನ್ ಡಿ ಎಂ ಸಿ ಹೇಳಿದೆ. 

ಈ ನಿಟ್ಟಿನಲ್ಲಿ ಇದೀಗ ದೆಹಲಿಯ ಆರೋಗ್ಯ ಕಾರ್ಯದರ್ಶಿ ಎನ್ ಡಿ ಎಂ ಸಿಗೆ ಪತ್ರ ಬರೆದು, ಕೂಡಲೇ ದಾಖಲೆ ಒದಗಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಆಸ್ಪತ್ರೆಗಳು ಸರಿಯಾಗಿ ಲೆಕ್ಕ ಕೊಡ್ತಿಲ್ಲ ಅಂಥ ದೆಹಲಿ ಸರ್ಕಾರ ಇತ್ತೀಚೆಗೆ ಎಚ್ಚರಿಸಿತ್ತು

click me!