ಪಾಕ್ ಇಫ್ತಾರ್ ಕೂಟದಲ್ಲಿ ಮಣಿಶಂಕರ್ ಅಯ್ಯರ್ ಭಾಗಿ, ಮೋದಿಯವರನ್ನ ವಿರೋಧಿಸುವ ಭರದಲ್ಲಿ ಕಾಂಗ್ರೆಸ್‌ನಿಂದ ದೇಶ ವಿರೋಧಿ ಕೆಲಸ?

Published : Mar 22, 2025, 06:21 AM ISTUpdated : Mar 22, 2025, 06:29 AM IST
 ಪಾಕ್ ಇಫ್ತಾರ್ ಕೂಟದಲ್ಲಿ ಮಣಿಶಂಕರ್ ಅಯ್ಯರ್ ಭಾಗಿ, ಮೋದಿಯವರನ್ನ ವಿರೋಧಿಸುವ ಭರದಲ್ಲಿ ಕಾಂಗ್ರೆಸ್‌ನಿಂದ ದೇಶ ವಿರೋಧಿ ಕೆಲಸ?

ಸಾರಾಂಶ

ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ದೂತಾವಾಸ ಕಚೇರಿಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು, ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅಯ್ಯರ್ ಅವರ ಪಾಕ್ ಪ್ರೀತಿಯನ್ನು ಬಿಜೆಪಿ ಖಂಡಿಸಿದೆ.

ನವದೆಹಲಿ (ಮಾ.22): ಪಾಕಿಸ್ತಾನದ ಪರ ಸದಾ ಮೃಧು ಧೋರಣೆ ತೋರುವ ಹಿರಿಯ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಮತ್ತೆ ತಮ್ಮ ಪಾಕ್‌ ಪ್ರೀತಿ ಪ್ರದರ್ಶಿಸಿದ್ದಾರೆ. ನವದೆಹಲಿಯಲ್ಲಿ ಪಾಕಿಸ್ತಾನದ ದೂತಾವಾಸ ಕಚೇರಿ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ಅಯ್ಯರ್‌ ಭಾಗಿಯಾಗಿದ್ದಾರೆ. 

ಪಾಕಿಸ್ತಾನದ ರಾಷ್ಟ್ರೀಯ ದಿನ ಆಚರಣೆಯ ಭಾಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಯ್ಯರ್‌ ಭಾಗವಹಿಸುವಿಕೆಯನ್ನು ಟೀಕಿಸಿರುವ ಬಿಜೆಪಿ, ಕಾಂಗ್ರೆಸ್‌ ಎಂದರೆ ‘ಪಾಕಿಸ್ತಾನ ಸ್ನೇಹಿ ಪಕ್ಷ(ಪಿಪಿಪಿ)’ ಎಂದು ಕರೆದಿದೆ. ಶೆಹಜಾದ್‌ ಪೂನಾವಾಲ ಮಾತನಾಡಿ, ‘ಮೋದಿಯವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್‌ ದೇಶ ವಿರೋಧಿ ಕೆಲಸ ಮಾಡುತ್ತಿದೆ’ ಎಂದು ಆಪಾದಿಸಿದ್ದಾರೆ. ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ, ‘ಅಯ್ಯರ್‌ ಅಥವಾ ಯಾವುದೇ ಕಾಂಗ್ರೆಸ್‌ ನಾಯಕರಿರಲಿ, ಅವರ ಮನಸ್ಸಲ್ಲಿ ಪಾಕ್‌ ಪ್ರೀತಿ ಇರುತ್ತದೆ’ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: 'ಮೆರಿಟ್‌ ಆಧಾರದಲ್ಲಿ ಶಿಕ್ಷಣ, ಉದ್ಯೋಗ ತಪ್ಪು, ಇದು ಮೇಲ್ವರ್ಗದವವರಿಗೆ ಅನುಕೂಲ ಆಗುವಂತಿದೆ': ರಾಹುಲ್ ಗಾಂಧಿ

ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಮುಗ್ಗಾ ಜಾಡಿಸಿದ ನೆಟಿಜನ್ಸ್:

 ಮಣಿಶಂಕರ್ ಅಯ್ಯರ್ ಅವರ ಪಾಕಿಸ್ತಾನ ಹೈಕಮಿಷನ್ ಭೇಟಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು. ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವರು ಅಯ್ಯರ್‌ಗೆ ಎರಡನೇ ಮನೆ, ಅದು ಅವರ ನೆಚ್ಚಿನ ತಾಣ ಅಲ್ಲಿಗೆ ಕಳಿಸಿಬಿಡಿ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬರದಿರಲು ದೇಶ ವಿರೋಧಿ ಗುಣವೇ ಕಾರಣ:

 ಭಾರತದಲ್ಲಿ ಕಾಂಗ್ರೆಸ್ ಎಂದಿಗೂ ಅಧಿಕಾರಕ್ಕೆ ಬರದಿರಲು ಇಂಥ ದೇಶ ವಿರೋಧಿ ಮನಸ್ಥಿತಿಯೇ ಕಾರಣ ಎಂದು ಮತ್ತೊಬ್ಬ ಬಳಕೆದಾರ ಸನ್ಮೋಯ್ ಬಸು ಬರೆದಿದ್ದಾರೆ. ಕಾಂಗ್ರೆಸ್ ಭಾರತಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಬೇಕೆಂದರೆ, ಪಕ್ಷವು ಕುಟುಂಬ ಮತ್ತು ಅದರ ಗುಲಾಮರಿಂದ ಬೇರ್ಪಡಬೇಕು ಎಂದಿದ್ದಾರೆ.

ಡೊಳ್ಳಿ ಎಂಬ ಬಳಕೆದಾರರು ಕಾಂಗ್ರೆಸ್ ನಾಯಕನನ್ನು "ಛಲ ಗಯಾ ಸಸುರಲ್"ಎಂದು ಅಪಹಾಸ್ಯ ಮಾಡಿದರೆ, ಮತ್ತೊಬ್ಬರು "ಅಸ್ಲಿ ರಿಸ್ಟೆದರ್ ಹೇ ಯೇ" (ಪಾಕಿಸ್ತಾನದವರು ಮಣಿಶಂಕರ್ ಅಯ್ಯರ್ ಅವರ ನಿಜವಾದ ಸಂಬಂಧಿಗಳು) ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಮಣಿಶಂಕರ್ ಅಯ್ಯರ್ ಅವರ ಕ್ರಮವನ್ನು ಟೀಕಿಸಿ ಕಾಂಗ್ರೆಸ್ ಪಕ್ಷವನ್ನು "ಮುಸ್ಲಿಂ ತುಷ್ಟೀಕರಣ ಪಕ್ಷ" ಎಂದು ಕರೆದಿದ್ದಾರೆ. ಮಣಿಶಂಕರ್ ಅಯ್ಯರ್ ವಿರುದ್ಧ ಟ್ವೀಟ್ ದಾಳಿ ಮುಂದುವರಿದಂತೆ, ಆದಿತ್ಯ ಕೃ ದಾಸ್ ಎಂಬ ಬಳಕೆದಾರರು 'ಕಾಂಗ್ರೆಸ್ ಪಾಕ್ ಪ್ರೇಮಿ ಹೊರಹೊಮ್ಮುತ್ತಿದ್ದಾನೆ' ಎಂದು ಟೀಕಿಸಿದರು

ಇದನ್ನೂ ಓದಿ: ಎರಡೂ ಯುನಿವರ್ಸಿಟಿಯಲ್ಲಿ ಫೇಲ್‌ ಆಗಿದ್ದ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು, ಮಣಿಶಂಕರ್ ಅಯ್ಯರ್ ಹೇಳಿಕೆ ಅಚ್ಚರಿ!

'ಭಾರತೀಯ ಉಪಖಂಡದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರವನ್ನು ಒತ್ತಾಯಿಸುವ 1940 ರಲ್ಲಿ ಲಾಹೋರ್ ನಿರ್ಣಯವನ್ನು ಅಂಗೀಕರಿಸಿದ ಸ್ಮರಣಾರ್ಥವಾಗಿ ನಡೆಯುವ ಪಾಕಿಸ್ತಾನ ದಿನದಂದು ಕಾಂಗ್ರೆಸ್ ನಾಯಕರೊಬ್ಬರು ಭಾಗವಹಿಸುತ್ತಿದ್ದಾರೆ ಎಂದರೆ ಇದು ಅತ್ಯಂತ ಅವಮಾನಕರ ಮತ್ತು ದೇಶದ್ರೋಹಿ' ಕೃತ್ಯ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಮಣಿಶಂಕರ್ ಅಯ್ಯರ್ ಅವರನ್ನು ಟೀಕಿಸಿ, ಅವರು ತಪ್ಪಾಗಿ ಈ ದೇಶದಲ್ಲಿ ದೇಶದಲ್ಲಿ ಜನಿಸಿದ್ದಾರೆ ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್