ಅತ್ಯಾಚಾರ ಹೇಳಿಕೆ ಕುರಿತು ಉತ್ತರ ಸಲ್ಲಿಸಿದ ರಾಹುಲ್ ಗಾಂಧಿ, ಇದರಲ್ಲಿ ತನಿಖೆ ನಡೆಯಲ್ಲ ಎಂದ ದೆಹಲಿ ಪೊಲೀಸ್!

By Suvarna NewsFirst Published Mar 19, 2023, 7:33 PM IST
Highlights

ಮಹಿಳೆ ಮೇಲೆ ಅತ್ಯಾಚಾರ ಕುರಿತು ರಾಹುಲ್ ಆಡಿದ ಮಾತು ಹೆಜ್ಜೆ ಹೆಜ್ಜೆಗೂ ಸಂಕಷ್ಟ ತರುತ್ತಿದೆ. ಈ ಕುರಿತು ಉತ್ತರಿಸುವಂತೆ ದೆಹಲಿ ಪೊಲೀಸರ ನೊಟಿಸ್‌ಗೆ ರಾಹುಲ್ ಉತ್ತರಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಉತ್ತರ ನೋಡಿದ ದೆಹಲಿ ಪೊಲೀಸರಿಗೆ ಒಂದು ಕ್ಷಣ ಏನೂ ಅನ್ನೋದೇ ಅರ್ಥವಾಗಿಲ್ಲ. ಈ ಉತ್ತರ ಹಿಡಿದು ತನಿಖೆ ಮುಂದುವರಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

ನವದೆಹಲಿ(ಮಾ.19): ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಆಡಿದ ಮಾತು ಇದೀಗ ಕಾಂಗ್ರೆಸ್‌ಗೆ ತೀವ್ರ ತಲೆನೋವು ತಂದಿದೆ. ಮಹಿಳೆಯರ ಮೇಲೆ ಈಗಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದ ರಾಹುಲ್ ಗಾಂಧಿ, ಇದಕ್ಕೆ ಎರಡು ಘಟನೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ದೆಹಲಿ ಪೊಲೀಸರು ಉತ್ತರಿಸುವಂತೆ ನೊಟೀಸ್ ನೀಡಿದ್ದರು. ಇಂದು ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ಪೊಲೀಸರು ಉತ್ತರ ನೀಡುವಂತೆ ಸೂಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ದೆಹಲಿ ಪೊಲೀಸರಿಗೆ ಉತ್ತರ ನೀಡಿದ್ದಾರೆ. ಆದರೆ ರಾಹುಲ್ ನೀಡಿದ ಉತ್ತರದಲ್ಲಿ ಕಾಶ್ಮೀರದಲ್ಲಿ ಹೇಳಿದ ಅತ್ಯಾಚಾರ ಘಟನೆ ಯಾವುದೇ ಮಾಹಿತಿ ಇಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಇಷ್ಟೇ ಅಲ್ಲ ರಾಹುಲ್ ಉತ್ತರ ಹಿಡಿದು ತನಿಖೆ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿ ನೀಡಿದ ಉತ್ತರದಲ್ಲಿ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ತಮ್ಮ ಹೇಳಿಕೆ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ರಾಹುಲ್ ಗಾಂಧಿ ಉತ್ತರ ಅಸಮರ್ಪಕವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ರಾಹುಲ್ ಗಾಂಧಿ ಮಾತನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ದೆಹಲಿ ಪೊಲೀಸರ ನಡೆಯನ್ನು ಪ್ರಶ್ನಿಸಿದೆ. ಅದಾನಿ ಪ್ರಕರಣವನ್ನು ಮುಚ್ಚಿಹಾಕಲು, ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಇದೀಗ ರಾಹುಲ್ ನಿವಾಸಕ್ಕೆ ಪೊಲೀಸರನ್ನು ಕಳುಹಿಸಿದೆ ಎಂದು ಆರೋಪಿಸಿದೆ.

ಕೈ ನಾಯಕನಿಗೆ ಶಾಕ್: ರಾಹುಲ್‌ ಗಾಂಧಿ ಮನೆಗೆ ದೌಡಾಯಿಸಿದ ದೆಹಲಿ ಪೊಲೀಸರು..!

ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಚರಿಸಿದ ವೇಳೆ ರಾಹುಲ್ ಗಾಂಧಿ ಬಿಜೆಪಿ ಹಾಗೂ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಆಡಳಿತದಲ್ಲಿ ಈಗಲೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಪ್ರತಿಪಾದಿಸಲು ಎರಡು ಘಟನೆಯನ್ನು ವಿವರಿಸಿದ್ದರು. ನಮ್ಮ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಇಬ್ಬರು ಮಹಿಳೆಯರು ನನ್ನ ಬಳಿ ಹೇಳಿದ್ದಾರೆ. ನಾನು ಅವರಲ್ಲಿ ಕೇಳಿದೆ,ಯಾಕೆ ನೀವು ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂದು ಕೇಳಿದೆ. ಅದಕ್ಕೆ ಈ ವಿಚಾರ ಬಹಿರಂಗವಾದರೆ ನಮಗೆ ಮದುವೆಯಾಗುವುದಿಲ್ಲ ಎಂದರು. ಮತ್ತೊಬ್ಬ ಅತ್ಯಾಚಾರಕ್ಕೊಳಗಾದ ಹುಡುಗಿಯಲ್ಲಿ ಹೇಳಿದೆ, ನಾನು ಪೊಲೀಸರಿಗೆ ಕಾಲ್ ಮಾಡಿ ಮಾಹಿತಿ ನೀಡುತ್ತೇನೆ ಎಂದೆ. ಬೇಡ ಮಾನ ಮರ್ಯಾದೆಗೆ ಅಂಜಿ ಬೇಡ ಎಂದಳು ಎಂದು ರಾಹುಲ್ ಗಾಂಧಿ ಭಾಷಣಧಲ್ಲಿ ಹೇಳಿದ್ದರು.

ರಾಹುಲ್ ಗಾಂಧಿ ಭಾಷಣದಲ್ಲಿ ಆಡಿದ ಈ ಅತ್ಯಾಚಾರ ಹೇಳಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿತು. ದೇಶದ ಪ್ರತಿಯೊಬ್ಬರಿಗೆ ರಕ್ಷಣೆ ನೀಡುವ ಜವಾಬ್ದಾರಿ ಪೊಲೀಸರ ಮೇಲಿದೆ. ಈ ರೀತಿ ಅತ್ಯಾಚಾರ ಪ್ರಕರಣದ ಮಾಹಿತಿ ನೀಡಿ ಪೊಲೀಸರು ಸೂಕ್ತ ತನಿಖೆ ನಡೆಸಿ ಅವರಿಗೆ ನ್ಯಾಯ ಕೊಡಿಸಲಿದೆ ಎಂದು ರಾಹುಲ್ ಗಾಂಧಿಗೆ ಸೂಚಿಸಿತ್ತು. ಇಷ್ಟೇ ಅಲ್ಲ ಮಾರ್ಚ್ 16 ರಂದು ರಾಹುಲ್ ಗಾಂಧಿಗೆ ಅತ್ಯಾಚಾರ ಘಟನೆಯ ಹೆಚ್ಚಿನ ಮಾಹಿತಿ ನೀಡುವಂತೆ ನೋಟಿಸ್ ನೀಡಲಾಗಿತ್ತು. 

 

ಪ್ರಜಾಪ್ರಭುತ್ವದ ಯಶಸ್ಸಿಂದ ಕೆಲವರಿಗೆ ಘಾಸಿ, ಹೀಗಾಗಿ ಅದರ ಮೇಲೆ ದಾಳಿ: ಮೋದಿ

ಆದರೆ ರಾಹುಲ್ ಗಾಂಧಿ ನೋಟಿಸ್‌ಗೆ ಉತ್ತರ ನೀಡದೆ ಕಾಲಾವಕಾಶ ಬೇಕು ಎಂದಿದ್ದರು. ಇತ್ತ ದೆಹಲಿ ಪೊಲೀಸರು ದಿಢೀರ್ ರಾಹುಲ್ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಕೇಳಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಅಸಮರ್ಪಕ ಉತ್ತರ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

click me!