'19 ದಿನದಿಂದ ಪೆಟ್ರೋಲ್‌ ಬೆಲೆ ಏರಿಲ್ಲ ಏಕೆ?'

By Kannadaprabha NewsFirst Published Aug 6, 2021, 7:25 AM IST
Highlights
  • ಕಳೆದ 19 ದಿನದಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳಲ್ಲಿ ವ್ಯತ್ಯಾಸವಿಲ್ಲ
  • ಸಂಸತ್‌ ಅಧಿವೇಶನ ನಡೆಯುತ್ತಿರುವುದು ಕಾರಣವೋ ಅಥವಾ ಇಂಧನ ಕಂಪೆನಿ ಮಾಲೀಕರ ಪೋನ್‌ಗಳಲ್ಲಿ ಪೆಗಾಸಸ್‌ ನುಸುಳಿದೆಯೋ
  • ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ತರಾಟೆ

ನವದೆಹಲಿ (ಆ.06): ಕಳೆದ 19 ದಿನದಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳಲ್ಲಿ ವ್ಯತ್ಯಾಸವಾಗದಿರುವುದಕ್ಕೆ ಸಂಸತ್‌ ಅಧಿವೇಶನ ನಡೆಯುತ್ತಿರುವುದು ಕಾರಣವೋ ಅಥವಾ ಇಂಧನ ಕಂಪೆನಿ ಮಾಲೀಕರ ಪೋನ್‌ಗಳಲ್ಲಿ ಪೆಗಾಸಸ್‌ ನುಸುಳಿದೆಯೋ ಎಂದು ಕೇಂದ್ರ ಸರ್ಕಾರವನ್ನು ಗುರುವಾರ ಕಲಾಪದ ವೇಳೆ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 3.35 ಲಕ್ಷ ಕೋಟಿ ಆದಾಯ!

‘ಕಳೆದ 19 ತಿಂಗಳಿನಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಏಕೆಂದರೆ, 18 ದಿನಗಳ ಹಿಂದೆ ಪಾರ್ಲಿಮೆಂಟ್‌ ಅಧಿವೇಶನ ಆರಂಭವಾಗಿದೆ ಅಥವಾ ಇಂಧನ ಕಂಪೆನಿ ಮಾಲಿಕರುಗಳ ಫೋನ್‌ ಪೆಗಾಸಿಸ್‌ ಮಾಲ್ವೇರ್‌ನ ದಾಳಿಗೆ ಒಳಗಾಗಿದೆ ಅಥವಾ ಎಲ್ಲಾ ಅಧಿಕಾರಿಗಳು ಆಗಸ್ಟ್‌ 15ರವರೆಗೆ ಕ್ವಾರಂಟೈನ್‌ನಲ್ಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪೆಟ್ರೋಲ್‌ ಬೆಲೆ ಏರಿಕೆಯನ್ನ ವಿರೋಧಿಸಿ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಿದ್ದರು.

click me!