
ಮುಂಬೈ (ಆ.06): ಬಾಲಿವುಡ್ ನಟಿ ಶಿಲ್ಪಾಶೆಟ್ಟಿಅವರ ಪತಿ ರಾಜ್‌ಕುಂದ್ರಾ ಅವರು ತಮ್ಮ ಅಶ್ಲೀಲ ಸಿನಿಮಾಗಳಲ್ಲಿ ಹಲವು ನಟಿಯರು ಮತ್ತು ಮಾಡೆಲ್‌ಗಳ ಅನುಮತಿಯಿಲ್ಲದೆ ಅವರ ಖಾಸಗಿ ಭಾಗಗಳನ್ನು ಬಳಸಿಕೊಂಡಿದ್ದಾರೆ ಎಂಬ ಗಂಭೀರ ವಿಚಾರ ಇದೀಗ ಬಯಲಿಗೆ ಬಂದಿದೆ.
ರಾಜ್‌ಕುಂದ್ರಾ ಬಂಧನ ಹಾಗೂ ಮುಂಬೈ ಅಪರಾಧ ವಿಭಾಗದ ಪೊಲೀಸರು ಈ ಪ್ರಕರಣ ತನಿಖೆ ತೀವ್ರಗೊಳಿಸಿರುವ ಬೆನ್ನಲ್ಲೇ, ಹಲವು ನಟಿಯರು ಮತ್ತು ಮಾಡೆಲ್‌ಗಳು ಮುಂದೆ ಬಂದು ರಾಜ್‌ಕುಂದ್ರಾ ಅವರ ಕೃತ್ಯವನ್ನು ಬಹಿರಂಗಪಡಿಸುತ್ತಿದ್ದಾರೆ.
ರಾಜ್‌ಕುಂದ್ರಾ ಕೇಸ್: ಮಾಧ್ಯಮದ ವಿಚಾರಣೆ ಬೇಡ ಎಂದ ನಟಿ
ಇದೀಗ ಮತ್ತೋರ್ವ ಸಂತ್ರಸ್ತ ಯುವತಿ ಮಲ್ವಾನಿ ಠಾಣೆಯಲ್ಲಿ ಈ ಸಂಬಂಧ ದೂರು ದಾಖಸಿದ್ದಾರೆ. ಈ ಪ್ರಕಾರ ಸಿನಿಮಾ ಶೂಟಿಂಗ್ ವೇಳೆ ಕುಂದ್ರಾ ತನ್ನ ಖಾಸಗಿ ಭಾಗಗಳನ್ನು ಸಿನಿಮಾದಲ್ಲಿ ಬಳಸಲ್ಲ ಎಂದು ಭರವಸೆ ನೀಡಿದ್ದರು. ಆದರೆ ಕೆಲ ದಿನಗಳ ಕಾಲ ಮೊಬೈಲ್ ಆ್ಯಪ್‌ನಲ್ಲಿ ತಮ್ಮ ಅನುಮತಿಯಿಲ್ಲದೆ ಯಾವುದೇ ಎಡಿಟಿಂಗ್ ಮಾಡದೇ ತಮ್ಮ ಇಡೀ ದೇಹದ ಭಾಗಗಳನ್ನು ಬಳಸಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಬಾಲಿವುಡ್ ನಟಿ ಪೂನಂ ಪಾಂಡೆ ಕುಂದ್ರಾ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ