ಸೋನಿಯಾ ಸಭೆ ದಿನವೇ ಕಾಂಗ್ರೆಸ್‌ಗೆ ಶಾಕ್; ಪಕ್ಷದ ಪ್ರಮುಖ ನಾಯಕಿ ರಾಜೀನಾಮೆ!

By Suvarna NewsFirst Published Dec 19, 2020, 4:05 PM IST
Highlights

ಕಾಂಗ್ರೆಸ್‌ ಒಡಕು ಶಮನಗೊಳಿಸಿ, ಬಂಡಾಯ ನಾಯಕರನ್ನು ಮತ್ತೆ ಪಕ್ಷದಲ್ಲಿ ಮುಂದುವರಿಸಲು ಖುದ್ದು ಸೋನಿಯಾ ಗಾಂಧಿ ಅಖಾಡಕ್ಕೆ ಇಳಿದಿದ್ದಾರೆ. ಇಂದು ಸಭೆ ಆಯೋಜಿಸಿದ್ದಾರೆ. ಆದರೆ ಇದೇ ದಿನ ಕಾಂಗ್ರೆಸ್‌ಗೆ ಮತ್ತೊಂದು ಕಡೆಯಿಂದ ಆಘಾತವಾಗಿದೆ. ಪಕ್ಷದ ನಾಯಕಿ, ರಾಹುಲ್ ಗಾಂಧಿ ಆಪ್ತೆ, NSUI ಕಾರ್ಯದರ್ಶಿ ರಾಜೀನಾಮೆ ನೀಡಿದ್ದಾರೆ

ನವದೆಹಲಿ(ಡಿ.19):  ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವಿನ ಮನಸ್ತಾಪ, ಒಡಕು, ಬಂಡಾಯ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದೆ. ನಾಯಕತ್ವದ ಬದಲಾವಣೆ, ಪಕ್ಷ ಬಲಪಡಿಸುವಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಗಾಂಧಿ ಪರಿವಾರದ ವಿರುದ್ಧ ಸಿಡಿದೆದ್ದಿದ್ದರು. ಬಂಡಾಯ ಶಮನಕ್ಕೆ ಖುದ್ದು ಸೋನಿಯಾ ಗಾಂಧಿ ಸಭೆ ಆಯೋಜಿಸಿದ್ದಾರೆ. ಈದರೆ ಸಭೆ ದಿನವೇ ಪಕ್ಷದ ನಾಯಕಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಪತ್ರ ಬರೆದ 23 ಹಿರಿಯ ಮುಖಂಡರ ಜೊತೆ ಸೋನಿಯಾ ಸಭೆ: ಕಾಂಗ್ರೆಸ್‌ನಲ್ಲಿ ದೊಡ್ಡ ಬದಲಾವಣೆ..?.

ರಾಹುಲ್ ಗಾಂಧಿ ಆಪ್ತೆ, ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ NSUI ಜಂಟಿ ಕಾರ್ಯದರ್ಶಿ ರುಚಿ ಗುಪ್ತಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಸಾಂಸ್ಥಿಕ ಬದಲಾವಣೆ ತರುವಲ್ಲಿ ನಾಯಕ ಕೆಸಿ ವೇಣುಗೋಪಾಲ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದು ಪಕ್ಷಕ್ಕೆ ತಮಗೆ ತೀವ್ರ ಹಿನ್ನಡೆಯನ್ನುಂಟು ಮಾಡುತ್ತಿದೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಗತಿ ಕಂಡಿಲ್ಲ ಎಂದು ಬೇಸತ್ತ ನಾಯಕಿ ರುಚಿ ಗುಪ್ತಾ ರಾಜೀನಾಮೆ ನೀಡಿದ್ದಾರೆ.

ಸೋನಿಯಾರಿಂದ ಯುಪಿಎ ಸೋಲು, ಮೋದಿ ಮೊದಲ ಅವಧಿ ನಿರಂಕುಶ

ಸೋನಿಯಾ ಗಾಂಧಿ ಬಿನ್ನರ ಸಮಾಧಾನ ಪಡಿಸಲು ಸಭೆ ಆಯೋಜಿಸಿದ ದಿನವೇ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಮತ್ತೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಸಿಕಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ಶಾಕ್ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ಇದೀಗ ಕಾಂಗ್ರಸ್ ಪಕ್ಷದಲ್ಲೂ ರಾಜೀನಾಮೆ ಆರಂಭಗೊಂಡಿದೆ.

click me!