ಅಮೃತಸರ(ಡಿ. 5): ಭಾರತವೂ ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧದ ಜೊತೆ ವ್ಯಾಪಾರ ವಹಿವಾಟು ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಸಲಹೆ ನೀಡಿದ್ದಾರೆ. ಅವರು ವ್ಯಾಪಾರ ವಸ್ತು ಪ್ರದರ್ಶನ ಪಿಟೆಕ್ಸ್(PITEX)ಮಳಿಗೆಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ಪಾಕ್‌ನ ಕರಾಚಿ ಹಾಗೂ ದೇಶದ ವಾಣಿಜ್ಯ ನಗರಿ ಮುಂಬೈ (Mumbai)ಮಧ್ಯೆ ವ್ಯಾಪಾರಕ್ಕೆ ಅವಕಾಶ ನೀಡಿ ಪಂಜಾಬ್ ರಾಜ್ಯದ ಅಮೃತಸರ ಹಾಗೂ ಪಾಕ್‌ನ ಲಾಹೋರ್(Lahore) ಮಧ್ಯೆ ವ್ಯಾಪಾರ ವಹಿವಾಟಿಗೆ ಅವಕಾಶ ನಿರಾಕರಿಸಿದ್ದ ಕೇಂದ್ರದ ಕ್ರಮವನ್ನು ಅವರು ಪ್ರಶ್ನಿಸಿದರು.
ಭಾರತ ಪಾಕಿಸ್ತಾನ ಗಡಿಯಲ್ಲಿ ಸೆರೆ ಇರುವುದರಿಂದ ಕೆಲವು ಕಿಡಿಗೇಡಿತನದ ಘಟನೆಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಉತ್ತರ ಭಾರತದ ಸರಕುಗಳನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಬಂದರುಗಳ ಮೂಲಕ ರಫ್ತು ಮಾಡುವ ಬದಲು ಅಟ್ಟಾರಿ-ವಾಘಾ ಜಂಟಿ ಚೆಕ್ ಪೋಸ್ಟ್‌ನಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ) ಮೂಲಕ ರಫ್ತು ಮಾಡಬೇಕು. ಕೇಂದ್ರದ ಈ ನಿರ್ಧಾರದಿಂದ ಪಂಜಾಬ್‌ನಲ್ಲಿ ಕಳೆದ 34 ತಿಂಗಳಿಂದ 4,000 ಕೋಟಿ ನಷ್ಟವಾಗಿದೆ ಹಾಗೂ 15,000 ಉದ್ಯೋಗಗಳು ಕಡಿತಗೊಂಡಿವೆ. ಒಂದು ವೇಳೆ ಪಂಜಾಬ್ ರಾಜ್ಯದ ಅಮೃತಸರ ಹಾಗೂ ಪಾಕ್‌ನ ಲಾಹೋರ್(Lahore) ಮಧ್ಯೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದಲ್ಲಿ ಪಂಜಾಬ್ ಕೇವಲ 6ತಿಂಗಳಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ನವಜೋತ್ ಸಿಂಗ್ ಸಿಧು ಹೇಳಿದರು.
ನವಜೋತ್ ಸಿಂಗ್ ಸಿಧು ಹೊಸ ಕ್ಯಾತೆ!
ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ ಆದರೆ ಇಂಟಿಗ್ರೇಟೆಡ್ ಚೆಕ್‌ಪೋಸ್ಟ್( ICP)ಗಳಿವೆ. ಎರಡನೇ ಮಹಾಯುದ್ಧ(World War II)ದ ನಂತರ ನಂತರ ಇಡೀ ಯುರೋಪ್(Europe) ಧ್ವಂಸಗೊಂಡಿತು. ಆದರೆ ಅವರು ತಮ್ಮ ಗಡಿಗಳನ್ನು ತೆರೆಯುವ ಮೂಲಕ 10 ವರ್ಷಗಳಲ್ಲಿ ತಮ್ಮ ಆರ್ಥಿಕತೆಯನ್ನು ಮತ್ತೆ ಪುನರುಜ್ಜೀವನಗೊಳಿಸಿದರು. ಇಂಟಿಗ್ರೇಟೆಡ್ ಚಿಕ್‌ಪೋಸ್ಟ್‌ಗಳನ್ನು ತೆರೆಯುವ ಮೂಲಕ ಪಾಕಿಸ್ತಾನವಲ್ಲದೇ ಇನ್ನೂ 34 ದೇಶಗಳೊಂದಿಗೆ ವ್ಯಾಪಾರ ಮಾಡುವ ಅವಕಾಶವಿದೆ. ಇದರಿಂದ ವರ್ಷಕ್ಕೆ 2,75,000 ಕೋಟಿ ($ 37 ಶತಕೋಟಿ) ಮೌಲ್ಯದ ವಹಿವಾಟು ನಡೆಯುವುದು. ಇದು ಪ್ರಸ್ತುತ ಕೇವಲ $ 3 ಬಿಲಿಯನ್ ಆಗಿದೆ. ಇದು ಒಟ್ಟು ವ್ಯಾಪಾರ ಸಾಮರ್ಥ್ಯದ ಶೇಕಡಾ 5 ರಷ್ಟು ಕೂಡ ಅಲ್ಲ ಎಂದು ಸಿಧು ಹೇಳಿದರು.
ಇಂಟಿಗ್ರೇಟೆಡ್ ಚೆಕ್‌ಪೋಸ್ಟ್‌ಗಳನ್ನು ತೆರೆಯುವುದರಿಂದ ಇದು ರೈತರ ಆದಾಯವನ್ನು ಹೆಚ್ಚಿಸುವುದರ ಜೊತೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಪಂಜಾಬ್‌ನ ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದೆ. ಇದು ರೈತರಿಗೆ ಬೆಳೆಗಳನ್ನು ಇತರ ದೇಶಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಸಿಧು ಹೇಳಿದರು. ದೇಶವು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಧಾನ್ಯಗಳು ಮತ್ತು ಬೇಳೆಕಾಳುಗಳಿಗೆ ದೇಶದಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡಲು ಅವರು ಒತ್ತಾಯಿಸಿದರು. ಕಳೆದ ಐದು ವರ್ಷಗಳಲ್ಲಿ ಭಾರತೀಯ ಆಹಾರ ನಿಗಮ(Food Corporation of India)ದ ಮೇಲಿನ ಸಾಲವನ್ನು 4 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಿಸಿರುವುದಕ್ಕೆ ಕೇಂದ್ರದ ವಿರುದ್ಧ ಸಿಧು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ಗೆ ಮತ್ತೆ ಟೆನ್ಶನ್: 13 ಬೇಡಿಕೆ, ಸೋನಿಯಾಗೆ ಪತ್ರ ಬರೆದ ಸಿಧು!
ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೇರಿಸಲು ಸಿಧು ಸೇರಿದಂತೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷದ ಇತರ ನಾಯಕರು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarinder Singh) ಜತೆ ಜಗಳ ಆಡಿದ್ದಲ್ಲದೇ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದರು. ನಂತರ ಕಾಂಗ್ರೆಸ್ ಹಿರಿಯರು ಅವರ ಮನವೊಲಿಸಿ ರಾಜೀನಾಮೆ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮೊನ್ನೆ ಮೊನ್ನೆಯಷ್ಟೇ ಪಂಜಾಬ್ ಸರ್ಕಾರ ಡ್ರಗ್ಸ್ ಹಾವಳಿ ವರದಿಯನ್ನು ಬಹಿರಂಗಗೊಳಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ನವಜೋತ್ ಸಿಂಗ್ ಸಿಧು ಬೆದರಿಕೆ ಹಾಕಿದ್ದರು.