ರೈಲು ದುರಂತದಲ್ಲಿ ಮೋದಿ ವೈಷ್ಣವ್ ಪ್ರಚಾರ ಗಿಮಿಕ್: ಖರ್ಗೆ ಆರೋಪ

By Kannadaprabha NewsFirst Published Jun 5, 2023, 8:40 AM IST
Highlights

ರೈಲು ದುರಂತದಲ್ಲಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಪ್ರಚಾರ ಪಡೆಯುತ್ತಿದ್ದಾರೆ, ದುರಂತದ ಹೊಣೆ ಹೊತ್ತು ಕೂಡಲೇ ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

ನವದೆಹಲಿ: ಶುಕ್ರವಾರ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲಯ ದುರಂತದ ಬೆನ್ನಲ್ಲೇ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ. ಈ ಕುರಿತು ಸರಣಿ ಟ್ವೀಟ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ಪಿಆರ್‌ ಗಿಮಿಕ್‌ನಿಂದಾಗಿ ಆಡಳಿತ ನಿರ್ವಹಣೆ ಕೆಟ್ಟು ನಿಂತಿದೆ. ಪ್ರಧಾನಿ ಮೋದಿ ಅವರು ವೈಟ್‌ ವಾಶ್‌ ಮಾಡಿರುವ ರೈಲುಗಳ ಉದ್ಘಾಟನೆಯಲ್ಲಿ ಗಮನಕೊಟ್ಟಿದ್ದಾರೆಯೇ ಹೊರತು ರೈಲ್ವೆ ಪ್ರಯಾಣಿಕರ ಭದ್ರತೆಯಲ್ಲ. ಪೂರ್ವ ಕರಾವಳಿ ವಲಯದಲ್ಲಿ 2017ರಿಂದ ಇಲ್ಲಿವರೆಗೆ ಹಳಿಗಳ ನಿರ್ವಹಣೆ ನಡೆದಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ (Pavan Khera) ಮಾತನಾಡಿ, ದುರಂತವು ಜನರ ಭದ್ರತೆ ವಿಚಾರದಲ್ಲಿ ತೀರಾ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತಾಳಿದ್ದರಿಂದ ನಡೆದಿದೆ. ಈ ದುರಂತದ ಹೊಣೆಯನ್ನು ಮೋದಿ ಸರ್ಕಾರವೇ ಹೊರಬೇಕು. ಮೋದಿ ಅವರು ಈ ಕೂಡಲೇ ಅಶ್ವಿನಿ ವೈಷ್ಣವ್‌ ಅವರಿಂದ ರಾಜೀನಾಮೆ ಕೇಳಬೇಕು. ಇದರೊಂದಿಗೆ ಬಹಳ ಸುದ್ದಿ ಮಾಡಿದ್ದ ರೈಲ್ವೆ ಕವಚವನ್ನು ಕೇಂದ್ರ ಸರ್ಕಾರ ದೇಶದ ಎಲ್ಲಾ ರೈಲಿನಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ಕಲ್ಲು ಹೃದಯವೂ ಕರಗೀತು..! ಮೃತದೇಹಗಳ ರಾಶಿಯಲ್ಲಿ ಮುಸುಕು ತೆಗೆದು ಮಗನಿಗಾಗಿ ಹುಡುಕಾಡಿದ ತಂದೆ!

ಕೇಂದ್ರವು ಏಕೆ 2022ರಲ್ಲಿ ತಂದ ಕವಚ್‌ ವ್ಯವಸ್ಥೆಯನ್ನು ಜಾರಿ ಮಾಡಿಲ್ಲ. ಸಚಿವ ಅಶ್ವಿನಿ ವೈಷ್ಣವ್‌ (Ashwin vaishnav) ಅವರ ರಾಜೀನಾಮೆಗೆ ಇಷ್ಟು ಕಾರಣ ಸಾಕು. ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಎನ್‌ಸಿಪಿ ಆಗ್ರಹಿಸಿದೆ. ಇದರೊಂದಿಗೆ ಟಿಎಂಸಿ ಹಾಗೂ ಇನ್ನಿತರೆ ಪಕ್ಷಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ರಾಜೀನಾಮೆಗೆ ಆಗ್ರಹಿಸಿದವು. ಆದರೆ, ದುರಂತದ ವಿಷಯದಲ್ಲಿ ರಾಜಕೀಯ ಬೇಡ ಎಂದು ಬಿಜೆಪಿ ಕಿಡಿಕಾರಿದೆ.

ಕೇಂದ್ರ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ: ದೀದಿ

ಕೋಲ್ಕತಾ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಕೇಂದ್ರ ಸರ್ಕಾರ ಮೃತರ ಸಂಖ್ಯೆ ಮುಚ್ಚಿಡುತ್ತಿದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಆರೋಪಿಸಿದ್ದಾರೆ. ಸಾವಿನ ಸಂಖ್ಯೆ 275 ಮೀರಿರುವ ಸಾಧ್ಯತೆ ಇದೆ. ದುರಂತದಲ್ಲಿ ಬಂಗಾಳದ 61 ಮಂದಿ ಮೃತಪಟ್ಟಿದ್ದು 182 ಮಂದಿ ಕಾಣೆಯಾಗಿದ್ದಾರೆ. ಹಾಗಿದ್ದರೆ ಕಾಣೆಯಾದವರ ಕತೆ ಏನು? ಏಕೆ ಸರ್ಕಾರ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ? ಎಂದು ಮಮತಾ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಬಾಲಸೋರ್ ರೈಲು ದುರಂತ: ನೂರಾರು ಜನರ ಪ್ರಾಣ ರಕ್ಷಿಸಿದ ಸ್ಥಳೀಯರು: ಜೀವ ಉಳಿಸಿದ ಸಹಸ್ರಾರು ರಕ್ತದಾನಿಗಳು

ಚದೇ ಇರಲಾರರು ಎಂದು ಕಿಡಿಕಾರಿದರು.  ಇದೇ ವೇಳೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಕ್ಷಮತೆ ಬಗ್ಗೆ ಟೀಕಿಸಿದ ಅವರು, ಕೇವಲ ಮರದ ಒಂದು ರೆಂಬೆ ಬಿದ್ದಿದ್ದಕ್ಕೆ ವಂದೇ ಭಾರತ್‌ ನುಜ್ಜುಗುಜ್ಜಾಗಿತ್ತು. ಇನ್ನು ಇಂತಹ ಅಫಘಾತ ಸಂಭವಿಸಿದರೆ ಏನಾಗುತ್ತದೆ ಎಂದರು.

click me!