ಪುದುಚೇರಿಯಲ್ಲಿ ಬಹುಮತ ಕಳೆದುಕೊಂಡ ಕಾಂಗ್ರೆಸ್, ಶೀಘ್ರದಲ್ಲೇ ಸರ್ಕಾರ ಪತನ!

By Suvarna NewsFirst Published Feb 16, 2021, 12:25 PM IST
Highlights

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬಹುಮತ ಕಳೆದುಕೊಂಡ ಕಾಂಗ್ರೆಸ್| 15ರಿಂದ 10ಕ್ಕಿಳಿದ ಸಂಖ್ಯೆ| ಶೀಘ್ರದಲ್ಲೇ ಸರ್ಕಾರ ಪತನ, ಕಾಮಗ್ರೆಸ್‌ಗೆ ಭಾರೀ ಮುಖಭಂಗ

ನವದೆಹಲಿ(ಫೆ.16): ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್‌ಗೆ ಭಾರೀ ಹೊಡೆತ ಬಿದ್ದಿದೆ. ಕಾಮರಾಜನಗರ ಕ್ಷೇತ್ರದ ಶಾಸಕ ಎ ಜಾನ್ ಕುಮಾರ್ ತಮ್ಮ ಸ್ತಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ ಜೊತೆಗಿನ ಅಸಮಾಧಾನದಿಂದ ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. 

ನಾನು ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದೇನೆಂದ ಮುಖಂಡ

ಎ ಜಾನ್‌ ರಾಜೀನಾಮೆಯಿಂದ ಪುದುಚೇರಿಯಲ್ಲಿ ಕಾಂಗ್ರೆಸ್‌ ಸರ್ಕಾರ ಬಹುಮತ ಕಳೆದುಕೊಂಡಿದೆ. 2019ರಲ್ಲಿ ಎ ಜಾನ್ ಕಾಮರಾಜನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಸದ್ಯ ಅವರ ರಾಜೀನಾಮೆಯಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸ್ಥಾನ 10ಕ್ಕಿಳಿದಿದೆ. ಸದ್ಯ ಕಾಂಗ್ರೆಸ್‌ ಬಳಿ ಡಿಎಂಕೆ ಹಾಗೂ ಒಂದು ಪಕ್ಷೇತರ ಅಭ್ಯರ್ಥಿಯ ಬೆಂಬಲವಿದೆ.

ಕಾಂಗ್ರೆಸ್‌ನ ನಾಲ್ವರು ಶಾಸಕರ ರಾಜೀನಾಮೆ

ಎ ಜಾನ್ ಹೊರತುಪಡಿಸಿ ಇಬ್ಬರು ಸಚಿವರು ಮಲ್ಲಾಡಿ ಕೃಷ್ಣ ರಾವ್ ಹಾಗೂ ಎನರಸಿಂಹ ಮತ್ತು ಇಬ್ಬರು ಶಾಸಕರು ಇ. ಥೆಪಯಂತನ್ ರಾಜೀನಾಮೆ ನೀಡಿದ್ದಾರೆ. ಇನ್ನು ಮತ್ತೊಮ್ಮ ಶಾಸಕ ಎನ್‌. ಧನುವೇಲು ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿಯಲ್ಲಿ ಪಕ್ಷ ಅನರ್ಹಗೊಳಿಸಿದೆ. ಹೀಗಿರುವಾಗ ಒಟ್ಟು 30 ಸದಸ್ಯರಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 15 ರಿಂದ 10ಕ್ಕಿಳಿದಿದೆ.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುದುಚೇರಿ ಭೇಟಿಗೂ ಒಂದು ದಿನ ಮೊದಲೇ ಇಂತಹುದ್ದೊಂದು ರಾಜಕೀಯ ಬೆಳವಣಿಗೆ ನಡೆದಿದೆ ಎಂಬುವುದು ಉಲ್ಲೇಖನೀಯ.

2016ರ ಚುನಾವಣಾ ಫಲಿತಾಂಶ ಹೀಗಿತ್ತು

click me!