ಕಾರ್ಗಿಲ್‌ ವಿಜಯ ದಿವಸ್ ಆಚರಣೆ ಕೈಬಿಟ್ಟಿದ್ದ ಕಾಂಗ್ರೆಸ್‌ ಸರ್ಕಾರ!

Published : Jul 26, 2022, 10:05 AM ISTUpdated : Jul 26, 2022, 04:32 PM IST
ಕಾರ್ಗಿಲ್‌ ವಿಜಯ ದಿವಸ್ ಆಚರಣೆ ಕೈಬಿಟ್ಟಿದ್ದ ಕಾಂಗ್ರೆಸ್‌ ಸರ್ಕಾರ!

ಸಾರಾಂಶ

ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಹೊಸ ಯುಗದಲ್ಲಿ ಭಾರತ ಎದುರಿಸಿದ ಅತ್ಯಂತ ಪ್ರಮುಖ ಯುದ್ಧ ಎನಿಸಿಕೊಂಡಿದ್ದ ಕಾರ್ಗಿಲ್‌ ಯುದ್ಧದ ವಿಜಯದ ನೆನಪಿಗಾಗಿ ಆಚರಿಸಲಾಗುವ ಕಾರ್ಗಿಲ್‌ ವಿಜಯ್‌ ದಿವಸ್‌ ಅನ್ನು ಯುಪಿಎ ಸರಕಾರ 2004ರಿಂದ 2009ರವರೆಗೆ ಆಚರಿಸಿರಲಿಲ್ಲ. 2009ರಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭೆಯಲ್ಲಿ ಎತ್ತಿದ್ದ ಪ್ರಶ್ನೆಯಿಂದ ಇದು ಬಹಿರಂಗವಾಗಿದೆ.  

ನವದೆಹಲಿ (ಜುಲೈ 26): ಪಾಕಿಸ್ತಾನದೊಂದಿಗೆ 23 ವರ್ಷಗಳ ಹಿಂದೆ 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸ್ಮರಣಾರ್ಥವಾಗಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಪ್ರತಿ ವರ್ಷ ಜುಲೈ 26 ರಂದು ಆಚರಿಸಲಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ ಆಘಾತಕಾರಿ ಸಂಗತಿಯೊಂದು ಬಯಲಿಗೆ ಬಂದಿದೆ. ಯುಪಿಎ ಸರಕಾರ 2004ರಿಂದ 2009ರವರೆಗೆ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಿಲ್ಲ.ಅವರಿಗೆ ಈ ದಿನದ ಮಹತ್ವ ಅರ್ಥವಾಗಿರಲಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು 2009 ರ ಪತ್ರದಿಂದ ಇದು ಬಹಿರಂಗವಾಗಿದೆ. ಕಾರ್ಗಿಲ್ ಯುದ್ಧವು 1999ರ ಮೇ 3 ರಿಂದ ಜುಲೈ 26 ರವರೆಗೆ ನಡೆದಿತ್ತು. ಕೊನೆಯಲ್ಲಿ ಪಾಕಿಸ್ತಾನದ ಸೇನೆಯು ಭಾರತೀಯ ಸೇನೆಯ ಮುಂದೆ ಮಂಡಿಯೂರಿತ್ತು. ಅಧಿಕೃತ ದಾಖಲೆಗಳ ಪ್ರಕಾರ, 527 ಸೈನಿಕರು ಯುದ್ಧದಲ್ಲಿ ಹುತಾತ್ಮರಾಗಿದ್ದರು. ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಯುಪಿಎ ಸರಕಾರ ದೇಶಕ್ಕಾಗಿ ಮಾಡಿದ ಸೇವೆಯ ಸತ್ಯವನ್ನು ಬಹಿರಂಗ ಮಾಡಿದ್ದಾರೆ.  ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯ ಪ್ರತಿಯನ್ನು ಹಂಚಿಕೊಂಡಿರುವ ಸಚಿವರು, 2004-2009 ಕಾಂಗ್ರೆಸ್ ನೇತೃತ್ವದ ಯುಪಿಎ ಜುಲೈ 26 ರಂದು ಪ್ರತಿ ವರ್ಷ ಆಚರಣೆ ಮಾಡುತ್ತಿದ್ದ ಕಾರ್ಗಿಲ್ ವಿಜಯ್ ದಿವಸ್ ಆಚರಿಸಿರಲಿಲ್ಲ. ಆ ಮೂಲಕ ಸೈನಿಕರಿಗೆ ಗೌರವ ತೋರಿರಲಿಲ್ಲ.

ನೋಟಿಸ್‌ ಜಾರಿ: ನಾನು ಈ ಕುರಿತಾಗಿ ಸಂಸತ್ತಿನಲ್ಲಿ ಒತ್ತಾಯ ಮಾಡುವವರೆಗೂ ಇದು ತಿಳಿದಿರಲಿಲ್ಲ. 2009ರ ಜುಲೈ 21 ರಂದು ಈ ಕುರಿತಾಗಿ ಮಾಹಿತಿ ನೀಡುವಂತೆ ಸಚಿವರಿಗೆ ರಾಜ್ಯಸಭೆಯಲ್ಲಿ ನೋಟಿಸ್‌ ನೀಡಲಾಗಿತ್ತು. ಸಾರ್ವಜನಿಕ ಪ್ರಾಮುಖ್ಯತೆಯ ವಿಚಾರ ಇದಾಗಿದ್ದು, ಜುಲೈ 23ರ ಒಳಗಾಗಿ ಉತ್ತರ ನೀಡಬೇಕು ಎಂದು ಹೇಳಿದ್ದರು ಎಂದು ರಾಜೀವ್‌ ಚಂದ್ರಶೇಖರ್‌ ಮಾಹಿತಿ ನೀಡಿದ್ದಾರೆ..2009ರ  ಜುಲೈ 23 ರಂದು ಸದನದಲ್ಲಿ ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಪ್ರಸ್ತಾಪಿಸಲು ನನಗೆ ಅವಕಾಶ ನೀಡುವಂತೆ ನಾನು ಸಭಾಪತಿಯನ್ನು ಕೋರಿದ್ದೆ. ಆಗ ರಾಜೀವ್‌ ಚಂದ್ರಶೇಖರ್‌ ಕೇಂದ್ರದಲ್ಲಿ ಮಂತ್ರಿಯಾಗಿರಲಿಲ್ಲ. ಕೇವಲ ರಾಜ್ಯಸಭಾ ಸದಸ್ಯರಾಗಿದ್ದರು.

ರಾಜೀವ್‌ ಚಂದ್ರಶೇಖರ್‌ ಬರೆದ ಪತ್ರ ಹೀಗಿತ್ತು: ಇಲ್ಲಿರುವ ಸಂಸದರ ಗಮನಕ್ಕೆ ತರಲು ಬಯಸುತ್ತೇನೆ. ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್‌ ಯುದ್ಧದ ಗೆಲುವಿಗಾಗಿ ಕಾರ್ಗಿಲ್‌ ವಿಜಯ್‌ ದಿವಸ್‌ ಅನ್ನು ಆಚರಣೆ ಮಾಡಲಾಗುತ್ತದೆ. ಆ ಹೋರಾಟದಲ್ಲಿ ಮತ್ತು ಇತರ ಪ್ರತಿಯೊಂದು ಸಂಘರ್ಷದಲ್ಲಿ ನಮ್ಮ ಸಶಸ್ತ್ರ ಪಡೆಗಳ ಪುರುಷರು ಮತ್ತು ಮಹಿಳೆಯರ ಹೋರಾಟಗಳು, ನಮ್ಮ ಗೌರವ ಮತ್ತು ವಂದನೆಗೆ ಅರ್ಹವಾಗಿವೆ ಎಂದು ನಾನು ನಂಬುತ್ತೇನೆ. ಈ ದಿನವನ್ನು ಸ್ಮರಣೀಯವಾಗಿಸಲು ಮತ್ತು ಪ್ರತಿ ವರ್ಷ ಆಚರಿಸಲು ನಾನು ರಕ್ಷಣಾ ಸಚಿವಾಲಯ ಮತ್ತು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇದನ್ನು ವಿರೋಧಿಸುವ ಅಥವಾ ಬಿಜೆಪಿ ಯುದ್ಧ ಅಥವಾ ಹಾಸ್ಯಾಸ್ಪದ ಎಂದು ಕರೆಯುವ ಈ ಸದನದ ನನ್ನ ಸಹೋದ್ಯೋಗಿಗಳಿಗೂ ನಾನು ಮನವಿ ಮಾಡುತ್ತೇನೆ, ಈ ಹಾಸ್ಯವನ್ನು ನಿಲ್ಲಿಸಬೇಕು. ಇಂತಹ ಕಾಮೆಂಟ್‌ಗಳನ್ನು ಮಾಡುವ ಮೂಲಕ ನೀವು ಅವರಿಗೆ ಮತ್ತು ನಮ್ಮ ದೇಶಕ್ಕೆ ಸೇವೆ ಸಲ್ಲಿಸುವ ಕುಟುಂಬಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತೀರಿ. ಈ ತ್ಯಾಗ ಮತ್ತು ಕರ್ತವ್ಯಗಳನ್ನು ನೆನಪಿಸಿಕೊಳ್ಳುವುದು ನಮ್ಮ ರಾಷ್ಟ್ರಕ್ಕೆ ನಮ್ಮ ಕರ್ತವ್ಯವಾಗಿದೆ ಎಂದು ಬರೆದಿದ್ದರು.

ಯೋಧರ ಸಾಹಸ ನೆನಪಿಸುವ ‘ಕಾರ್ಗಿಲ್‌ ವಿಜಯ ದಿವಸ್‌’

2010ರಿಂದ ಮತ್ತೆ ಆರಂಭ: ರಾಜ್ಯಸಭೆಯಲ್ಲಿ ಸಂಸದ ರಾಜೀವ್‌ ಚಂದ್ರಶೇಖರ್‌ ಈ ಪ್ರಶ್ನೆಯನ್ನು ಯುಪಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಎಕೆ ಆಂಟನಿ ಅವರಿಗೆ ಕೇಳಿದ್ದರು. ಆ ಬಳಿಕ 2010ರ ಜುಲೈ 26 ರಿಂದ ಅಮರ್‌ ಜವಾನ್‌ ಜ್ಯೋತಿ ಬಳಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದರು. ಆ ನಂತರ ಎಂದಿನಂತೆ ಕಾರ್ಗಿಲ್‌ ವಿಜಯ್‌ ದಿವಸ್‌ ಆಚರಣೆ ಆರಂಭವಾಗಿತ್ತು.

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಶತ್ರುರಾಷ್ಟ್ರದಲ್ಲಿ ತಳಮಳ ಸೃಷ್ಟಿಸಿದ ರಾಜನಾಥ್ ಹೇಳಿಕೆ!

ವಿಜಯೋತ್ಸವ ಆಚರಿಸಲು ಕಾರಣವಿಲ್ಲ ಎಂದಿದ್ದ ಕಾಂಗ್ರೆಸ್‌ ಸಂಸದ: ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಜೈ ಹಿಂದ್ ಕೂಡ ಇದೇ ವಿಷಯವನ್ನು ಟ್ವೀಟ್ ಮಾಡಿದ್ದಾರೆ. ಯುಪಿಎ ಸರ್ಕಾರವು 2004-2009 ರವರೆಗೆ ಕಾರ್ಗಿಲ್ ವಿಜಯ್ ದಿವಸ್ ಅನ್ನು ಅಧಿಕೃತವಾಗಿ ಆಚರಿಸಲಿಲ್ಲ. ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲು ಯಾವುದೇ ಕಾರಣವಿಲ್ಲ ಎಂದು ಕಾಂಗ್ರೆಸ್ ಸಂಸದ ರಶೀದ್ ಅಲ್ವಿ ಹೇಳಿದ್ದಾರೆ. ಯುಪಿಎ ಅದನ್ನು ಆಚರಿಸುವುದನ್ನು ಮುಂದುವರೆಸದೇ ಇರಬಹುದು, ಆದರೆ ರಾಜೀವ್ ಚಂದ್ರಶೇಖರ್ (@Rajiv_GoI) ಅದನ್ನು ಬದಲಾಯಿಸಿದರು ಎಂದು ಬರೆದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್