52 ವರ್ಷಗಳ ಕಾಲ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದ ಸುರೇಶ್‌ ಪಚೌರಿ ಬಿಜೆಪಿಗೆ ಸೇರ್ಪಡೆ

Published : Mar 09, 2024, 05:28 PM IST
52 ವರ್ಷಗಳ ಕಾಲ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದ ಸುರೇಶ್‌ ಪಚೌರಿ ಬಿಜೆಪಿಗೆ ಸೇರ್ಪಡೆ

ಸಾರಾಂಶ

ತಮ್ಮ ಜೀವಮಾನದ 52 ವರ್ಷಗಳನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಾಗಿಯೇ ಕಳೆದಿದ್ದ ಸುರೇಶ್‌ ಪಚೌರಿ, ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 


ಭೋಪಾಲ್‌ (ಮಾ.9):ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದ್ದು, ರಾಜ್ಯದಲ್ಲಿ ಪಕ್ಷದ ಪ್ರಮುಖ ಸಾಂಸ್ಥಿಕ ವ್ಯಕ್ತಿಗಳಲ್ಲಿ ಒಬ್ಬರಾದ ಹಿರಿಯ ಕಾಂಗ್ರೆಸ್ಸಿಗ ಸುರೇಶ್ ಪಚೌರಿ ಅವರು 10 ಇತರ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಶನಿವಾರ ಬೆಳಿಗ್ಗೆ ಬಿಜೆಪಿಗೆ ಸೇರ್ಪಡೆಗೊಂಡರು. 52 ವರ್ಷಗಳ ನಂತರ ಪಚೌರಿ ಕಾಂಗ್ರೆಸ್‌ ಪಕ್ಷವನ್ನು ತೊರೆದಿರುವುದು ವಿಶೇಷವಾಗಿದೆ. ಬಿಜೆಪಿ ಸೇರಿದ ಇತರರಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್‌ನ ಅತ್ಯಂತ ಶ್ರೀಮಂತ ಶಾಸಕ ಸಂಜಯ್ ಶುಕ್ಲಾ ಸೇರಿದಂತೆ ಮಾಜಿ ಸಂಸದ ಮತ್ತು ಮೂವರು ಮಾಜಿ ಶಾಸಕರು ಸೇರಿದ್ದಾರೆ. ಶುಕ್ಲಾ ಅವರು 2023 ರ ರಾಜ್ಯ ಚುನಾವಣೆಯಲ್ಲಿ ಇಂದೋರ್-1 ಸ್ಥಾನದಿಂದ ಬಿಜೆಪಿಯ ಪ್ರಮುಖ ಕೈಲಾಶ್ ವಿಜಯವರ್ಗಿಯಾ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಬಿಜೆಪಿಗೆ ಸೇರುವ ಮೊದಲು, ಪಚೌರಿ ಅವರು ತಮ್ಮ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ್ದಾರೆ.  "ಸಾರ್ವಜನಿಕ ಮತ್ತು ಧಾರ್ಮಿಕ ಮಹತ್ವದ ವಿಷಯಗಳ" ನಿರ್ಧಾರಗಳಿಗಾಗಿ ಪಕ್ಷವನ್ನು ಅವರು ದೂಷಣೆ ಮಾಡಿದ್ದಾರೆ. "ಕಾಂಗ್ರೆಸ್ ತಾನು ಹೊಂದಿದ್ದ ಮತ್ತು ಪಾಲಿಸುತ್ತಿದ್ದ ತತ್ವಗಳಿಂದಲೇ ಈಗ ವಿಮುಖವಾಗುತ್ತಿದೆ; ಎಂದು ಅವರು ಆರೋಪಿಸಿದರು.

ಭೋಪಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪಚೌರಿ ಅವರು ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಆಹ್ವಾನವನ್ನು ನಿರಾಕರಿಸಿದ ಕಾಂಗ್ರೆಸ್ ನಾಯಕತ್ವದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. “ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನವಿತ್ತು, ಆದರೆ ಅದನ್ನು ಅನುಚಿತ ರೀತಿಯಲ್ಲಿ ವ್ಯವಹರಿಸಲಾಗಿದೆ. ನಾನು ಯಾವಾಗಲೂ ರಾಮ ಮಂದಿರದ ಪ್ರತಿಪಾದಕ. (ದಿವಂಗತ ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ) ರಾಜೀವ್ ಗಾಂಧಿಯವರು 1989 ರಲ್ಲಿ ರಾಮ ಮಂದಿರದ ಬೀಗಗಳನ್ನು ತೆರೆಯಬೇಕೆಂದು ಒಪ್ಪಿಕೊಂಡಿದ್ದರು. ಅದಕ್ಕೆ ನಾನು ಸಾಕ್ಷಿಯಾಗಿದ್ದೆ. ಯಾರಿಗೆ ರಾಮ ಎಷ್ಟು ಆಪ್ತ ಎನ್ನುವುದು ಬೇಕಾಗಿಲ್ಲ. ಆದರೆ, ರಾಮನ ಪರವಾಗಿ ಅವರು ಇಲ್ಲ ಎಂದಾದರೆ, ಅವರ ಜೊತೆಗೆ ನಾವಿಲ್ಲ'' ಎಂದು ಹೇಳಿದ್ದಾರೆ.

ನಾನು ದ್ರೋಹ ಮಾಡಿದ್ದೇನೆ ಎಂಬುದಕ್ಕೆ ಕೆಲವು ಕಾರಣವಿರಬೇಕು ಎಂದ ಅವರು,  "ಯಾವುದೇ ಷರತ್ತುಗಳು ಅಥವಾ ಯಾವುದೇ ಹುದ್ದೆಗೆ ಬೇಡಿಕೆಯಿಲ್ಲದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ" ಎಂದು ತಿಳಿಸಿದ್ದಾರೆ.  ಪಚೌರಿ ಮತ್ತು ಇತರರು ಮುಖ್ಯಮಂತ್ರಿ ಮೋಹನ್ ಯಾದವ್, ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ವಿಜಯವರ್ಗಿಯ, ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ. ಶರ್ಮಾ ಮತ್ತು ಹಿರಿಯ ನಾಯಕ ನರೋತ್ತಮ್ ಮಿಶ್ರಾ ಅವರ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ.

“ರಾಹುಲ್ ಗಾಂಧಿ ಎಲ್ಲಿಗೆ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್ ಸೋಲು ಕಾಣುತ್ತಿದೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅನ್ನು ಮುಗಿಸುತ್ತಿರುವ ಕಾರಣ ಇನ್ನೂ ಕೆಲವು ಯಾತ್ರೆಗಳನ್ನು ಕೈಗೊಳ್ಳಬೇಕೆಂದು ನಾವು ಬಯಸುತ್ತೇವೆ, ”ಎಂದು ಸಿಎಂ ಮೋಹನ್‌ ಯಾದವ್‌,  ರಾಹುಲ್‌  ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

Umesh Keelu: ಮುಂಬೈನ ಧಾರಾವಿ ಸ್ಲಮ್‌ನಲ್ಲಿ ಬೆಳೆದ ಹುಡುಗ ಈಗ ಭಾರತೀಯ ಸೇನೆಯ ಲೆಫ್ಟಿನೆಂಟ್‌!

ಯಾರಿವರು ಸುರೇಶ್‌ ಪಚೌರಿ: ಪಚೌರಿ 1972 ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶಿಸಿದರು. ನಂತರ ಅವರು ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್‌ಅನ್ನು ಮಧ್ಯಪ್ರದೇಶದಲ್ಲಿ ತಳಮಟ್ಟದಲ್ಲಿ ಬಲಪಡಿಸಿದ ಕಾರಣಕ್ಕಾಗಿ ಅವರು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಆಪ್ತರಲ್ಲಿ ಒಬ್ಬರಾಗಿದ್ದರು. ಪ್ರಬಲ ಸಂಘಟನಾಶೀಲ ವ್ಯಕ್ತಿಯಾಗಿದ್ದ ಪಚೌರಿ ಅವರ ಅಧಿಕಾರಾವಧಿಯಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಾಗಲಿಲ್ಲ.ಅವರ ಚುನಾವಣಾ ವೈಫಲ್ಯಗಳ ಹೊರತಾಗಿಯೂ, ಗಾಂಧಿ ಕುಟುಂಬದ ಆಪ್ತತೆ, ಪಚೌರಿ ಕಾಂಗ್ರೆಸ್‌ನಲ್ಲಿ ಪ್ರಮುಖ ಸ್ಥಾನಗಳನ್ನು ಪಡೆಯಲು ಕಾರಣವಾಗಿತ್ತು. ಅವರು 1984 ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು ಮತ್ತು ನಂತರ 1990, 1996 ಮತ್ತು 2002 ರಲ್ಲಿ ಮರು-ಚುನಾಯಿತರಾದರು, ಸಂಸತ್ತಿನ ಮೇಲ್ಮನೆಯಲ್ಲಿ ನಾಲ್ಕು ನೇರ ಅವಧಿಗಳನ್ನು ಕಂಡಿದ್ದರು. ಕಾಂಗ್ರೆಸ್ ಸೇವಾದಳದ ಅಧ್ಯಕ್ಷರೂ ಆಗಿದ್ದರು.

Big News: ಬ್ಯಾಂಕ್‌ ಉದ್ಯೋಗಿಗಳಿಗೆ ಬಂಪರ್‌ ನ್ಯೂಸ್‌, ಶೇ.17ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ, ತಿಂಗಳ ಎಲ್ಲಾ ಶನಿವಾರ ರಜೆ?

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ