
ನವದೆಹಲಿ(ಡಿ.03): ಅಯೋಧ್ಯೆ ರಾಮಮಂದಿರ ಹೋರಾಟವನ್ನು ಆರಂಭಿಸಿದ್ದು ಬಿಜೆಪಿಯ ಎಂಬುದು ಜನಜನಿತ. ಆದರೆ, ಅಯೋಧ್ಯೆ ಚಳವಳಿಯನ್ನು ಮೊದಲು ಉತ್ತೇಜಿಸಿದ್ದು ಕಾಂಗ್ರೆಸ್ ಪಕ್ಷ ಎಂಬ ಸಂಗತಿಯನ್ನು ನೂತನ ಪುಸ್ತಕವೊಂದು ಬಹಿರಂಗಪಡಿಸಿದೆ.
ರಾಮಮಂದಿರಕ್ಕೆ ಬೇಕಾದ ಗುಲಾಬಿ ಕಲ್ಲಿನ ಗಣಿಗಾರಿಕೆಗೆ ರಾಜಸ್ಥಾನ ಸರ್ಕಾರ ಅಸ್ತು?
ರಾಜ್ಯಶಾಸ್ತ್ರಜ್ಞ ವಿನಯ್ ಸೀತಾಪತಿ ಬರೆದ ‘ಜುಗಲ್‌ಬಂದಿ: ‘ದ ಬಿಜೆಪಿ ಬಿಫೋರ್ ಮೋದಿ’ ಎಂಬ ಪುಸ್ತಕದಲ್ಲಿ ಈ ಸಂಗತಿಯನ್ನು ಉಲ್ಲೇಖಿಸಲಾಗಿದೆ. 1983ರಲ್ಲಿ ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ವಿಎಚ್‌ಪಿ ಹಿಂದು ಸಮ್ಮೇಳನವೊಂದನ್ನು ಆಯೋಜಿಸಿತ್ತು. ಇದರಲ್ಲಿ ಕಾಂಗ್ರೆಸ್‌ನ ಇಬ್ಬರು ಮುಖಂಡರು ಭಾಗಿಯಾಗಿದ್ದರು.
ಅಯೋಧ್ಯೆ ಶ್ರೀರಾಮ ವಿಗ್ರಹಕ್ಕೆ ಸೂರ್ಯಕಿರಣ ಸ್ಪರ್ಶದ ವ್ಯವಸ್ಥೆ : ಮೋದಿ ಸೂಚನೆ
ಸಭೆಯಲ್ಲಿ ಉತ್ತರ ಪ್ರದೇಶದ ಮಾಜಿ ಮಂತ್ರಿ ದೌ ದಯಾಲ್ ಖನ್ನಾ ಹಾಗೂ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಗುಲ್ಜಾರಿ ಲಾಲ್ ನಂದಾ ಅವರ ಉಪಸ್ಥಿತಿ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ