ಲವ್‌ಜಿಹಾದ್ ನಿಷೇಧ ಬಳಿಕ ಅಂತರ್ ಧರ್ಮೀಯ ವಿವಾಹ ಪ್ರೋತ್ಸಾಹ ಧನ ರದ್ದು| 1976ರಲ್ಲಿ ಜಾರಿ ಆಗಿದ್ದ ವಿವಾಹ ಭತ್ಯೆ ಯೋಜನೆ
ಲಖನೌ(ಡಿ.03): ‘ಲವ್ ಜಿಹಾದ್’ ತಡೆಯಲು ಸುಗ್ರೀವಾಜ್ಞೆ ಹೊರಡಿಸಿರುವ ಉತ್ತರ ಪ್ರದೇಶ ಸರ್ಕಾರ ಇದೀಗ, ಅಂತರ್ ಧರ್ಮೀಯ ವಿವಾಹಗಳಿಗೆ ಕಳೆದ 44 ವರ್ಷಗಳಿಂದ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಅಂತರ್ ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಕ್ಕೆ ಭತ್ಯೆ ನೀಡುವ ಯೋಜನೆಯನ್ನು ಉತ್ತರ ಪ್ರದೇಶದಲ್ಲಿ 1976ರಲ್ಲಿ ಜಾರಿ ಮಾಡಲಾಗಿತ್ತು. ಉತ್ತರ ಪ್ರದೇಶದಿಂದ ಪ್ರತ್ಯೇಕಗೊಂಡಿರುವ ಉತ್ತರಾಖಂಡದಲ್ಲಿಯೂ ಈ ಯೋಜನೆಯನ್ನು ಮುಂದುವರಿಸಿಸಲಾಗಿದೆ. ಉತ್ತರ ಪ್ರದೇಶದ ರೀತಿ ಉತ್ತರಾಖಂಡ ಸರ್ಕಾರ ಕೂಡ ಈ ಯೋಜನೆಯನ್ನು ರದ್ದುಗೊಳಿಸುವ ಬಗ್ಗೆ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿವಾಹ ಭತ್ಯೆ ಯೋಜನೆಯ ಅಡಿಯಲ್ಲಿ ಅಂತರ್ ಧರ್ಮಿಯ ವಿವಾಹಕ್ಕೆ ಸರ್ಕಾರದ ವತಿಯಿಂದ 50 ಸಾವಿರ ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಮದುವೆ ಆದ ಎರಡು ವರ್ಷದ ಒಳಗಾಗಿ ಜಿಲ್ಲಾ ಮ್ಯಾಜಿಸ್ಪ್ರೇಟ್‌ಗೆ ಅರ್ಜಿ ಸಲ್ಲಿಸಿ ದಂಪತಿ ಯೋಜನೆಯ ಫಲಾನುಭವ ಪಡೆಯಬಹುದಾಗಿದೆ.