ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಸಂಕಷ್ಟ, ಶೇ.75ರಷ್ಟು ಕುಸಿತ ಕಂಡ ದೇಣಿಗೆ, 2025-26ರ ಹಣ ಸಂಗ್ರಹ ಇಷ್ಟೇನಾ?

Published : Nov 08, 2026, 02:40 PM IST
AICC  High-Level Meeting

ಸಾರಾಂಶ

2025-26ರ ಸಾಲಿನಲ್ಲಿ ಕಾಂಗ್ರೆಸ್‌ಗೆ 20 ಸಾವಿರ ರೂ ಮೇಲ್ಪಟ್ಟ ದೇಣಿಗೆ ನೀಡುವವರ ಸಂಖ್ಯೆ ಶೇಕಡಾ 75ರಷ್ಟು ಕುಸಿತ ಕಂಡಿದೆ. 25-26ರ ಸಾಲಿನಲ್ಲಿ ಕಾಂಗ್ರೆಸ್ ಸಂಗ್ರಹಿಸಿದ ದೇಣಿಗೆ ನೋಡಿದರೆ ಪಾರ್ಟಿ ಮುನ್ನಡೆಯುವುದೇ ಕಷ್ಟವಾಗಿದೆ.

2014ರಿಂದ ಕೇಂದ್ರದಲ್ಲಿ ಅಧಿಕಾರ ಇಲ್ಲ, ಹೋರಾಟ, ಪ್ರತಿಭಟನೆಗಳು ಫಲ ನೀಡುತ್ತಿಲ್ಲ. ವಿಧಾನಸಭೆ ಚುನಾವಣೆಗಳಲ್ಲಿ ಸೋಲಿನ ಕಹಿ. ಸತತ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಪಕ್ಷಕ್ಕೆ ದೇಣಿಗೆ ಬರುತ್ತಿಲ್ಲ, ದೇಣಿಗೆ ನೀಡುವವರ ಸಂಖ್ಯೆ ಹಾಗೂ ಮೊತ್ತವೂ ಗಣನೀಯವಾಗಿ ಇಳಿಕೆಯಾಗಿದೆ. 2025-26ರ ಸಾಲಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ 20ಸಾವಿರ ರೂಪಾಯಿ ಮೇಲ್ಪಟ್ಟ ದೇಣಿಕೆ ನೀಡುವವರ ಸಂಖ್ಯೆ ಶೇಕಡಾ 75ರಷ್ಟು ಕುಸಿತ ಕಂಡಿದೆ. ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಗಳಿಸಿದ ಅತ್ಯಂತ ಕಡಿಮೆ ದೇಣಿಗೆ ಇದಾಗಿದ್ದು, ಆರ್ಥಿಕ ಸಂಕಷ್ಟಗಳು ಪಕ್ಷದ ಬುಡವನ್ನೇ ಅಲುಗಾಡಿಸುವಂತಿದೆ.

2025-26ರ ಸಾಲಿನಲ್ಲಿ ಕಾಂಗ್ರೆಸ್‌ಗೆ ಬಂದ ದೇಣಿಗೆ ಎಷ್ಟು

ಕಾಂಗ್ರೆಸ್ ದೇಣಿಗೆ ಸಂಗ್ರಹ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಾ ಬರುತ್ತಿದೆ. 2024-25ರ ಸಾಲಿನಲ್ಲಿ ಕಾಂಗ್ರೆಸ್ 517.39 ಕೋಟಿ ರೂಪಾಯಿ ದೇಣಿಗೆ ಪಡೆದಿತ್ತು. 2014ರ ಬಳಿಕ ಕಾಂಗ್ರೆಸ್ ವರ್ಷದಿಂದ ವರ್ಷಕ್ಕೆ ಕಡಿಮೆ ದೇಣಿಗೆ ಸಂಗ್ರಹ ಮೂಲಕ ಸಂಕಷ್ಟಕ್ಕೆ ಸಿಲುಕುತ್ತಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ 2024-25ರ ಸಾಲಿನ ದೇಣಿಗೆ ಸಂಗ್ರಹ ಸಮಾಧಾನಕವಾಗಿತ್ತು. ಆದರೆ ಈ ಬಾರಿ 2025-26ರ ಸಾಲಿನಲ್ಲಿ ಕಾಂಗ್ರೆಸ್ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದು ಕೇವಲ 130. 69 ಕೋಟಿ ರೂಪಾಯಿ ಮಾತ್ರ.

2014ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಅತ್ಯಂತ ಹೀನಾಯ ಪ್ರದರ್ಶನ ನೀಡಿತ್ತು. ಅತ್ಯಂತ ಕಡಿಮೆ ಸಂಸದರು ಮಾತ್ರವಲ್ಲ, ದೇಶದಲ್ಲೇ ಕಾಂಗ್ರೆಸ್ ಕಳೆಗುಂದಿತ್ತು. 2014-15ರ ಸಾಲಿನಲ್ಲಿ ಕಾಂಗ್ರೆಸ್ ದೇಣಿಗೆ ರೂಪದಲ್ಲಿ ಕೇವಲ 141.46 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಶೇಕಡಾ 86ರಷ್ಟು ಕುಸಿತ ಇದಾಗಿತ್ತು. ಕಾಂಗ್ರೆಸ್ ಇತಿಹಾಸದಲ್ಲೇ ಕಂಡ ಅತೀ ದೊಡ್ಡ ಕುಸಿತ ಇದಾಗಿತ್ತು.

2020ರಿಂದ ಕಾಂಗ್ರೆಸ್ ದೇಣಿಗೆ ಸಂಗ್ರಹದಲ್ಲಿ ಭಾರಿ ಹಿನ್ನಡೆ ಅನುಭವಿಸಿತ್ತು. ಕಾರಣ 2020-21ರ ಸಾಲಿನಲ್ಲಿ ಕೇವಲ 74.52 ಕೋಟಿ ರೂಪಾಯಿ ಸಂಗ್ರಹಿಸಿತ್ತು. 2022ರಿಂದ ಕಾಂಗ್ರೆಸ್ ದೇಣಿಗೆಯಲ್ಲಿ ಚೇತರಿಕೆ ಕಂಡಿತ್ತು. 2023-24ರ ಅವಧಿಯಲ್ಲಿ ಕಾಂಗ್ರೆಸ್ 281.48 ಕೋಟಿ ರೂಪಾಯಿ ದೇಣಿಗೆ ಪಡೆದರೆ, 2024-25ರಲ್ಲಿ 517.39 ರೂಪಾಯಿ ಸಂಗ್ರಹ ಮಾಡಿ ಭರ್ಜರಿ ಚೇತರಿಕೆ ಕಂಡಿತ್ತು. ಆಧರೆ ಈ ವರ್ಷದ ವೇಳೆ ಮತ್ತೆ ಕುಸಿತ ಕಂಡಿದೆ.

ಬಿಜೆಪಿ ಮುಂದೆ ಸೊರಗಿದ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿ ದೇಶದಲ್ಲಿ ಅತ್ಯಂತ ಪ್ರಬಲ ಪಕ್ಷವಾಗಿ ಹೊರಹೊಮ್ಮಿತು. ಇಷ್ಟೇ ಅಲ್ಲ ಸದೃಢ ಸರ್ಕಾರ ನೀಡಿದ ಬಿಜೆಪಿಗೆ ದೇಣಿಗೆಗಳು ಹರಿದು ಬಂದಿದೆ. ಈಗಲೂ ಬಿಜೆಪಿಯತ್ತ ಹರಿದುಬರುತ್ತಿರುವ ದೇಣಿಗೆ ಮೊತ್ತ ಹಾಗೂ ಸಂಖ್ಯೆ ಅತೀ ದೊಡ್ಡದಾಗಿದೆ. 2023-24ರ ಅವಧಿಯಲ್ಲಿ ಬಿಜೆಪಿ 6074.02 ಕೋಟಿ ರೂಪಾಯಿ ದೇಣಿಗೆ ಪಡೆದುಕೊಂಡಿತ್ತು. 2024-25ರ ಸಾಲಿನಲ್ಲಿ ಬಿಜೆಪಿ ದೇಣಿಗೆ ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿಗೆ ತಲುಪಿತ್ತು. 2025-26ರ ಸಾಲಿನ ಬಿಜೆಪಿ ದೇಣಿಗೆ ಇನ್ನು ಬಹಿರಂಗವಾಗಿಲ್ಲ.

ಬಿಜೆಪಿ ದೈತ್ಯ ಪಾರ್ಟಿಯಾಗಿ ಬೆಳೆದಿರುವುದು ಮಾತ್ರವಲ್ಲ ಪಕ್ಷ ಸಂಘಟನೆ, ದೇಣಿಗೆ ಸಂಗ್ರಹ ಸೇರಿದಂತೆ ಪ್ರತಿಯೊಂದರಲ್ಲೂ ಮುಂಚೂಣಿಯಲ್ಲಿದೆ. ಆದರೆ ದೇಶದ ಅತ್ಯಂತ ಹಳೇಯ ರಾಜಕೀಯ ಪಾರ್ಟಿ ಕಾಂಗ್ರೆಸ್ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದೆ. ಹೋರಾಟ, ಪ್ರತಿಭಟನೆ, ಕಿರುಚಾಟ ನಡೆಸಿದರೂ ಜನರ ಧನಿಯಾಗಲು ಸಾಧ್ಯವಾಗುತ್ತಿಲ್ಲ. ನಿನ್ನೆ ಮೊನ್ನೆ ಬಂದ ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ಇತರ ರಾಜಕೀಯ ಪಾರ್ಟಿಗಳು ತಮ್ಮ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನರನ್ನು ಸೇರಿಸುತ್ತಿದೆ. ಆದರೆ ಕಾಂಗ್ರೆಸ್ ಸೊರಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾರುಕಟ್ಟೆಯಲ್ಲಿ ಟಾಟಾ ನಕಲಿ ಉಪ್ಪು ಹಾವಳಿ! ತಿಂದರೆ ಅಪಾಯ: ಖರೀದಿಗೂ ಮುನ್ನ ಹೀಗೆ ಮಾಡಿ ಸೇಫ್​ ಆಗಿರಿ
‘ಬಡವನಾಗಿ ಬದುಕಿ, ಕೋಟ್ಯಧಿಪತಿಯಾಗಿ ಸಾವು!’ ಹೆಂಡತಿ ಹಣ ತೆಗೆದುಕೊಂಡು ಹೋಗ್ತಾಳೆಂದು ಮದುವೆಯೇ ಆಗದ ಸ್ವೀಪರ್