ಮೋದಿ ವೇಷಭೂಷಣ ಟೀಕಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ಹಿಗ್ಗಾಮುಗ್ಗಾ ಟ್ರೋಲ್

Published : Jan 14, 2025, 09:09 PM ISTUpdated : Jan 14, 2025, 09:29 PM IST
ಮೋದಿ ವೇಷಭೂಷಣ ಟೀಕಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ಹಿಗ್ಗಾಮುಗ್ಗಾ ಟ್ರೋಲ್

ಸಾರಾಂಶ

ಪ್ರಧಾನಿ ಮೋದಿ ಉಡುಪು, ವೇಷಭೂಷಣ  ಹೋಲಿಕೆ ಮಾಡಿ ಟೀಕಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದು ವಿವಾದಕ್ಕೂ ಕಾರಣವಾಗಿದೆ. ಆದರೆ ಮೋದಿ ವೇಷಭೂಷಣ ಟೀಕಿಸಿದ ಕಾಂಗ್ರೆಸ್ ನಾಯಕರನ್ನು ಹಲವರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.

ನವದೆಹಲಿ(ಜ.14) ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ಝೆಡ್ ಮೊರ್ತ್ ಸುರಂಗ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಅತೀವ ಚಳಿ ಹಾಗೂ ಎಲ್ಲೆಡೆ ಹಿಮಗಳು ಘನೀಕರಿಸಿದ ಕಾರಣ ಮೋದಿ ಚಳಿಯಿಂದ ರಕ್ಷಣೆಗೆ ತಕ್ಕಂತೆ ಉಡುಪು ಧರಿಸಿದ್ದರು. ಓವರ್ ಕೋಟ್ ಧರಿಸಿದ್ದರು. ಹೂಡಿ ರೀತಿಯ ಈ ಓವರ್ ಕೋಟ್ ಮೂಲಕ ತಲೆ ಕೂಡ ಕವರ್ ಮಾಡಿದ್ದರು. ಆದರೆ ಮೋದಿಯ ಈ ವೇಷಭೂಷಣವನ್ನು ಕೇರಳ ಕಾಂಗ್ರೆಸ್ ಟೀಕಿಸಿದೆ. ಇದು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ವೇಷಭೂಷಣದಂತಿದೆ ಎಂದು ಟೀಕಿಸಿತ್ತು. ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ಮೋದಿ ಹಾಗೂ ಲಾರೆನ್ಸ್ ಬಿಷ್ಣೋಯ್ ಚಿತ್ರ ಪೋಸ್ಟ್ ಮಾಡಿ ಕೃಪೆ ಲಾರೆನ್ಸ್ ಬಿಷ್ಣೋಯ್ ಎಂದು ಉಲ್ಲೇಖಿಸಿತ್ತು. ಈ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ. ಭಾರತದ ಪ್ರಧಾನಿಯನ್ನು ಗ್ಯಾಂಗ್‌ಸ್ಟರ್‌ಗೆ ಹೋಲಿಕೆ ಮಾಡಿರುವುದು ಹಾಗೂ ವೇಷಭೂಷಣ ಕುರಿತು ಟೀಕಿಸಿರುವುದು ವಿರೋಧಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಹಲವರು ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದು ಮಾತ್ರವಲ್ಲ, ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.

ಕಾಂಗ್ರೆಸ್ ಮಾಡಿರುವ ಟ್ವೀಟ್ ಅತ್ಯಂತ ಕೀಳುಮಟ್ಟದ್ದಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವವೇ ಗೌರವಿಸುವ, ಆದರದಿಂದ ಕಾಣವು ನಾಯಕನನ್ನು ವೇಷಭೂಷಣದಿಂದ ಅವಮಾನಿಸುವುದು ಸರಿಯಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಇದ ವೇಳೆ ಹಲವು ಬಿಜೆಪಿ ಬೆಂಬಲಿಗರು ಇದೇ ರೀತಿ ಕಾಂಗ್ರೆಸ್ ನಾಯಕರ ಚಿತ್ರವನ್ನು ಹೋಲಿಕೆ ಮಾಡಿ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಈ ಕುರಿತು ಏನೂ ಉಲ್ಲೇಖ ಮಾಡುವುದಿಲ್ಲ, ವಿವಾದವಾಗಲಿದೆ ಎಂದಿದ್ದಾರೆ.

 

 

5 ವರ್ಷ ನೀನೇ ಸಿಎಂ, ಬೇಡ ಅಂದವ್ರು ಯಾರು? ಆದರೆ ಈಗಲ್ಲ; ಡಿಕೆಶಿಗೆ ಸಿದ್ದು ಆಪ್ತರ ಠಕ್ಕರ್

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಲವು ನಾಯಕರನ್ನು ಇದೇ ರೀತಿ ಬೇರೆ ಬೇರೆ ವ್ಯಕ್ತಿಗಳಿಗೆ ಹೋಲಿಕೆ ಮಾಡಿ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ.  

 

 

ಕೇರಳ ಕಾಂಗ್ರೆಸ್ ಮಾಡಿರುವ ಟ್ವೀಟ್ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಡ್ರೆಸ್, ಕುರ್ತುಾ, ಗಡ್ಡದ ಶೈಲಿ, ಕೂದಲು ಶೈಲಿಯನ್ನೇ ಟೀಕಿಸುತ್ತಿದೆ. ಮತ್ಯಾವುದೇ ವಿಚಾರ ಟೀಕಿಸಲು ಕಾಂಗ್ರೆಸ್‌ಗೆ ಸಿಗುತ್ತಿಲ್ಲ. ಆಡಳಿತ ವಿಚಾರದಲ್ಲಿ, ಮೋದಿ ನಿರ್ಧಾರದಲ್ಲಿ, ಸರ್ಕಾರದ ನೀತಿಗಳು, ಯೋಜನೆಗಳ ಕುರಿತು ಟೀಕಿಸಲು ಏನೂ ಇಲ್ಲ. ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ನೀಡಿರುವ ಮೋದಿಯನ್ನು ಈ ರೀತಿ ಕಾಂಗ್ರೆಸ್ ಟೀಕಿಸುತ್ತಿದೆ ಎಂದು ಬೆಜಿಪಿ ಬೆಂಬಲಿಗರು ಪ್ರತಿಕ್ರಿಯಿಸಿದ್ದಾರೆ.

 

 

ಇದೇ ವೇಳೆ ಬಿಜೆಪಿ ವಿರುದ್ದ ಕಾಂಗ್ರೆಸ್ ಬೆಂಬಲಿಗರು ತಿರುಗೇಟು ನೀಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಹಿರಂಗವಾಗಿ ರಾಹುಲ್ ಗಾಂಧಿಯನ್ನು, ಇರಾನ್ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೈನ್‌ಗೆ ಹೋಲಿಕೆ ಮಾಡಿದ್ದರು. ಅಂದು ಬಿಜಿಪಿ ಬೆಂಬಲಿಗರು ಶರ್ಮಾರನ್ನ ಹೊಗಳಿದ್ದರು. ಇದೀಗ ಮೋದಿಯನ್ನು ಹೋಲಿಕೆ ಮಾಡಿದಾಗ ಏಕಾಏಕಿ ಸರಿ ತಪ್ಪು ನೆನಪಾಯಿತಾ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಪರ ವಿರೋಧಗಳ ಇದೀಗ ಟ್ವೀಟ್ ಸಮರ ಶುರುವಾಗಿದೆ. 

ಜಮ್ಮು ಕಾಶ್ಮೀರದ ಸೋನ್‌ಮಾರ್ಗ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸುರಂಗ ಮಾರ್ಗ ಉದ್ಘಾಟನೆ ವೇಳೆ ಮೋದಿ ಧರಿಸಿದ್ದ ವೇಷಭೂಷಣ  ಇದೀಗ ಭಾರಿ ಚರ್ಚೆಯಾಗುತ್ತಿದೆ. 6.5 ಕಿಲೋಮೀಟರ್ ಉದ್ದರ ಈ ಸುರಂಗ ಮಾರ್ಗ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಬರೋಬ್ಬರಿ 2400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸುರಂಗ ಮಾರ್ಗ ನಿರ್ಮಾಣಗೊಂಡಿದೆ.2015ರಲ್ಲಿಕಾಮಗಾರಿ ಆರಂಭಗೊಂಡಿತ್ತು. ಇದೀಗ ಪೂರ್ಣಗೊಂಡಿದೆ.

ಜೆಡಿಎಸ್‌ನ 11 ಶಾಸಕರು ಶೀಘ್ರ ಕಾಂಗ್ರೆಸ್ ಸೇರ್ಪಡೆ ಕೈ ಶಾಸಕ ಸ್ಫೋಟಕ ಹೇಳಿಕೆ, ದೇವೇಗೌಡ ತಿರುಗೇಟು!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!