LPG Cylinder Price: ವಾಣಿಜ್ಯ ಸಿಲಿಂಡರ್‌ ಬೆಲೆ 102 ರೂ. ಇಳಿಕೆ

By Kannadaprabha NewsFirst Published Jan 2, 2022, 8:20 AM IST
Highlights

ಹಿಂದಿನ ವರ್ಷ ಪೂರ್ತಿ ಬೆಲೆ ಏರಿಕೆಯಿಂದ ಬೇಸರಗೊಂಡಿದ್ದ ಗ್ರಾಹಕರಿಗೆ ಹೊಸ ವರ್ಷದ ಮೊದಲ ದಿನವೇ ಸಂತೋಷದ ಸುದ್ದಿ ಸಿಕ್ಕಿದೆ. ಜ.1ರಿಂದ 19 ಕೇಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 102.5 ರೂ.ನಷ್ಟುಕಡಿಮೆಯಾಗಿದೆ. 

ನವದೆಹಲಿ (ಜ.2): ಹಿಂದಿನ ವರ್ಷ ಪೂರ್ತಿ ಬೆಲೆ ಏರಿಕೆಯಿಂದ ಬೇಸರಗೊಂಡಿದ್ದ ಗ್ರಾಹಕರಿಗೆ ಹೊಸ ವರ್ಷದ ಮೊದಲ ದಿನವೇ ಸಂತೋಷದ ಸುದ್ದಿ ಸಿಕ್ಕಿದೆ. ಜ.1ರಿಂದ 19 ಕೇಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 102.5 ರೂ.ನಷ್ಟುಕಡಿಮೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಸಿಲಿಂಡರ್‌ನ ಬೆಲೆ 1,998.5 ರೂ.ಗೆ ಇಳಿದಿದೆ. ವಾಣಿಜ್ಯ ಸಿಲಿಂಡರ್‌ಗಳನ್ನು ಹೆಚ್ಚು ಬಳಕೆ ಮಾಡುವ ಹೋಟೆಲ್‌, ಟೀ ಸ್ಟಾಲ್‌ ಮುಂತಾದವುಗಳಿಗೆ ಬೆಲೆ ಇಳಿಕೆ ಕೊಂಚ ಸಮಾಧಾನ ತಂದಿದೆ.

ಕಳೆದ ವರ್ಷದ ಕೊನೆಯಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆ ಎರಡೆರಡು ಬಾರಿ ಏರಿಕೆ ಕಂಡಿತ್ತು. ಕಳೆದ ವರ್ಷ ಡಿ.1ರಂದು 100 ರು. ಏರಿಕೆ ಕಾಣುವುದರ ಮೂಲಕ ಸಿಲಿಂಡರ್‌ ಬೆಲೆ 9 ವರ್ಷದ ನಂತರ ಮತ್ತೆ 2 ಸಾವಿರದ ಗಡಿ ದಾಟಿತ್ತು. ದೆಹಲಿಯಲ್ಲಿ ಸಿಲಿಂಡರ್‌ ಬೆಲೆ 2,101ಕ್ಕೆ ಏರಿಕೆಯಾಗಿತ್ತು. 2012-13ರಲ್ಲಿ ಸಿಲಿಂಡರ್‌ ಬೆಲೆ 2,200 ರೂ.ಗೆ ಏರಿಕೆಯಾಗಿತ್ತು. ಆದರೆ 14.2 ಕೇಜಿ, 5 ಕೇಜಿ ಮತ್ತು 10 ಕೇಜಿ ಮನೆಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಹೊಸ ವರ್ಷದಿಂದ ಗ್ರಾಹಕರಿಗೆ ಗ್ಯಾಸ್ ಶಾಕ್: ಊಟ, ತಿಂಡಿ ಬೆಲೆ ಹೆಚ್ಚಳ!

ಈ ಹಿಂದೆ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್‌ನಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ (LPG Gas Cylinder) ಬೆಲೆಯನ್ನು ಹೆಚ್ಚಿಸಿತ್ತು. ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 103.50 ರೂ.ವರೆಗೆ ಹೆಚ್ಚಿಸಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದ ಪ್ರತಿ ಸಿಲಿಂಡರ್ ಗೆ 100.50 ರೂ ಹೆಚ್ಚಳವಾಗಿತ್ತು. ಈ ಮೂಲಕ ಇಲ್ಲಿ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2101 ರೂ.ಗೆ ಏರಿಕೆಯಾಗಿತ್ತು.

ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿಲ್ಲ: ಆದರೆ, ತೈಲ ಕಂಪನಿಗಳು ಸಾಮಾನ್ಯ ಜನರ ಗೃಹ ಬಳಕೆಗಾಗಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸದಿರುವುದು ಬಹುದೊಡ್ಡ ನೆಮ್ಮದಿಯ ವಿಚಾರವಾಗಿದೆ. ಇದರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 899.50 ರೂ.ನಲ್ಲಿ ಬದಲಾಗದೆ ಉಳಿದಿದೆ.

ಹೋಟೆಲ್‌ ತಿನಿಸು ಶೇ.10 ದುಬಾರಿ: ಇಂದಿನಿಂದಲೇ ಹೊಸ ದರ ಜಾರಿ!

ಸಬ್ಸಿಡಿ ಇಲ್ಲದ 14.2 ಕೆಜಿ ಸಿಲಿಂಡರ್ ಬೆಲೆ ಎಷ್ಟು ಗೊತ್ತಾ: ದೆಹಲಿಯಲ್ಲಿ ಈಗ ಸಬ್ಸಿಡಿರಹಿತ 14.2 ಕೆಜಿ ಸಿಲಿಂಡರ್ ಬೆಲೆ 899.50 ರೂ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 926 ರೂ., ಮುಂಬೈನಲ್ಲಿ 899.50 ರೂ., ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಈಗ 915.50 ರೂ.

LPG ಬೆಲೆಯನ್ನು ಈ ರೀತಿ ಪರಿಶೀಲಿಸಿ: ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಶೀಲಿಸಲು, ನೀವು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ಕಂಪನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಲಿಂಕ್‌ನಲ್ಲಿ ನಿಮ್ಮ ನಗರದ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ನೀವು ಪರಿಶೀಲಿಸಬಹುದು.

click me!