ಸ್ಪೀಕ್ ಅಪ್ ಅರ್ನಬ್ ಎಂದು ಹೇಳಿ ನಿಷೇಧಕ್ಕೊಳಗಾದ ಕಾಮಿಡಿಯನ್!

By Suvarna News  |  First Published Jan 29, 2020, 11:59 AM IST

ವಿಮಾನದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಹೀಯಾಳಿಸಿದ ಕಾಮಿಡಿಯನ್| ಮುಂಬೈ-ಲಕ್ನೋ ವಿಮಾನದಲ್ಲಿ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ದುರ್ವರ್ತನೆ| ಅರ್ನಬ್ ಗೋಸ್ವಾಮಿ ಅವರನ್ನು ಹೇಡಿ ಎಂದ ಕುನಾಲ್ ಕಾಮ್ರಾ| ಕುನಾಲ್ ಕಾಮ್ರಾ ವಿರುದ್ಧ 6 ತಿಂಗಳ ಪ್ರಯಾಣ ನಿಷೇಧ ಹೇರಿದ ಇಂಡಿಗೋ|


ನವದೆಹಲಿ(ಜ.29): ಪತ್ರಕರ್ತ ಹಾಗೂ ಖಾಸಗಿ ಸುದ್ದಿ ವಾಹಿನಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ನಿಂದಿಸಿದ ಆರೋಪದ ಮೇಲೆ, ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರನ್ನು ಇಂಡಿಗೋ ಹಾಗೂ ಏರ್ ಇಂಡಿಯಾ ವಿಮಾನ ಸಂಸ್ಥೆ 6 ತಿಂಗಳುಗಳ ಕಾಲ ನಿಷೇಧ ಹೇರಿದೆ.

ಮುಂಬೈ- ಲಕ್ನೋ ವಿಮಾನದಲ್ಲಿ ತೆರಳುತ್ತಿದ್ದ ಅರ್ನಬ್‌ ಗೋಸ್ವಾಮಿ ಅವರನ್ನು ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ನಿಂದಿಸಿ ವಿಡಿಯೋ ಮಾಡಿದ್ದಾರೆ.

I did this for my hero...
I did it for Rohit pic.twitter.com/aMSdiTanHo

— Kunal Kamra (@kunalkamra88)

Tap to resize

Latest Videos

ನೀವು ಪತ್ರಕರ್ತರೋ ಅಥವಾ ಹೇಡಿಯೋ ಎಂದು ಪ್ರಶ್ನಿಸಿದ ಕುನಾಲ್, ಸರ್ಕಾರದ ವಕ್ತಾರರಂತೆ ವರ್ತಿಸುತ್ತಿರುವ ನೀವು ನೈಜ ಪತ್ರಕರ್ತರಲ್ಲ ಎಂದು ಲೇವಡಿ ಮಾಡಿದ್ದಾರೆ.

ಮಾತಿನ ಬರದಲ್ಲಿ ’ಸನ್ನಿ’ ನೆನಪಿಸಿಕೊಂಡ ಅರ್ನಬ್..! ಟ್ವಿಟರಿಗರಿಂದ ಫುಲ್ ಟ್ರೋಲ್

ನಾನು ನಿಮಗೆ ಪ್ರಶ್ನೆಗಳನ್ನು ಕೇಳುತ್ತಿದ್ದು, ಇದಕ್ಕೆ ಉತ್ತರ ನೀಡಿ ಎಂದು ಪದೇ ಪದೇ ಅರ್ನಬ್ ಅವರ ಮೇಲೆ ಕುನಾಲ್ ಒತ್ತಡ ಹೇರಿದ್ದಾರೆ. ಈ ವೇಳೆ ಮೌನಕ್ಕೆ ಶರಣಾಗಿದ್ದ ಅರ್ನಬ್, ತಮ್ಮ ಲ್ಯಾಪ್’ಟಾಪ್ ನೋಡುತ್ತಾ ಕುಳಿತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Met Arnab Goswami on a flight & gave him a monologue about his ‘journalism’

All he did was call me mentally unstable & after sometime I had no choice but to return to my seat.

The entire flight I’ll keep pretending to use the loo just to tell him he’s piece of SHIT

F*CK Arnab

— Kunal Kamra (@kunalkamra88)

ಇನ್ನು ವಿಮಾನದಲ್ಲಿ ವಿಡಿಯೋ ಮಾಡಿ ಅರ್ನಬ್ ಗೋಸ್ವಾಮಿ ಅವರನ್ನು ಹೀಯಾಳಿದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ವಿರುದ್ಧ ದೂರು ದಾಖಲಾಗಿದ್ದು, ಇಂಡಿಗೋ ಸಂಸ್ಥೆ ಕಾಮ್ರಾ ವಿರುದ್ಧ 6 ತಿಂಗಳ ಪ್ರಯಾಣ ನಿಷೇಧ ಹೇರಿದೆ.
 

click me!