* ಮಹಿಳಾ ಕಾಲೇಜಿನಲ್ಲಿ ಸೆಕ್ಸ್ ದಂಧೆ
* ಪ್ರೊಫೆಸರ್ ಮುಖವಾಡ ಕಳಚಿದ ವಿದ್ಯಾರ್ಥಿನಿ
* ಮಾಟ, ಸೆಕ್ಸ್ ಟಾಯ್ಸ್, ಭೂಗತ ಸಂಪರ್ಕದ ಬೆದರಿಕೆ
ಲಕ್ನೋ(ನ.23): ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ (Pilibhit, Uttar Pradesh) ಮಹಿಳಾ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳು ತನ್ನದೇ ಕಾಲೇಜಿನ ಪ್ರೊಫೆಸರ್ (College Proffesor) ಸೆಕ್ಸ್ Racket ನಡೆಸುತ್ತಿದ್ದು, ವಿದ್ಯಾರ್ಥಿನಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದಾಳೆ. ಇಡೀ ಪ್ರಕರಣದಲ್ಲಿ ಎಸ್ಪಿ ಆದೇಶದ ಬಳಿಕ, ಕೊತ್ವಾಲಿ ಪೊಲೀಸ್ ಠಾಣೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಕಾಲೇಜಿನ ಗಣಿತ ಪ್ರಾಧ್ಯಾಪಕ ಕಮ್ರಾನ್ ಆಲಂ ಖಾನ್ (Kamran Alam Khan) ಒಬ್ಬ ಹುಚ್ಚು ಮನಸ್ಸಿನ ವ್ಯಕ್ತಿಯಾಗಿದ್ದು, ಅವರ ನಡತೆ ಸರಿಯಿಲ್ಲ ಎಂದು ಜಿಲ್ಲೆಯ ಮಹಿಳಾ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬರು ಎಸ್ಪಿಗೆ ದೂರು ಪತ್ರ ನೀಡಿದ್ದಾರೆ.
ಈ ಪ್ರಾಧ್ಯಾಪಕ ಕಾಲೇಜಿನಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ಧೂಮಪಾನ (Smoking), ಮಾದಕ ದ್ರವ್ಯ ಸೇವಿಸುವಂತೆ ಓಲೈಸುತ್ತಿದ್ದ. ದಿನಗಳೆದಂತೆ ಬೇಡವೆಂದರೂ ಒತ್ತಾಯಿಸುತ್ತಿದ್ದ. ವಿದ್ಯಾರ್ಥಿನಿಯರಿಗೆ ಅಶ್ಲೀಲ ಪುಸ್ತಕ, ಲೈಂಗಿಕ ಆಟಿಕೆಗಳನ್ನು (Sex Toys) ನೀಡುವ ಮೂಲಕ ಅಶ್ಲೀಲವಾಗಿ ನಡೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದ, ಬಳಿಕ ಸಂಬಂಧ ಬೆಳೆಸುವಂತೆಯೂ ಒತ್ತಾಯಿಸುತ್ತಿದ್ದ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.
Murder Case | ಲೈಂಗಿಕ ದೌರ್ಜನ್ಯ ನೀಡಿದ ಸ್ವಂತ ತಂದೆ : ಸ್ನೇಹಿತರಿಂದ ಅಪ್ಪನ ಕೊಲ್ಲಿಸಿದ ಮಗಳು
ಕಮ್ರಾನ್ ಖಾಸಗಿ ನಿವಾಸ ಬಡಾ ಖುದಗಂಜ್ ಪೆಂಟೆಕೋಸ್ಟಲ್ ಚರ್ಚ್‌ನ ಮುಂಭಾಗದಲ್ಲಿರುವ ಶಾಲೆಯ ವಿದ್ಯಾರ್ಥಿನಿಯರನ್ನು ಆಹ್ವಾನಿಸಿ ಅಶ್ಲೀಲ ಕೃತ್ಯಗಳನ್ನು ಮಾಡುವ ಮೂಲಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸುತ್ತಿದ್ದ ಮತ್ತು ಶಾಲೆಯ ಅನೇಕ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದೂ ಆರೋಪಿಸಿದ್ದಾಳೆ.
ಮಾಟಮಂತ್ರದ ಭಯ ಹುಟ್ಟಿಸುತ್ತಿದ್ದ
ದೂರು ನೀಡಿರುವ ವಿದ್ಯಾರ್ಥಿನಿ ಆರೋಪಿ ತನ್ನನ್ನು ಮೋಸದಿಂದ ಮನೆಗೆ ಕರೆಸಿಕೊಂಡು ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸಿದ, ಅಲ್ಲದೇ ತನಗೆ ಮಾಟಮಂತ್ರ (Black Magic) ಗೊತ್ತು, ಜನರ ಮನಸ್ಸನ್ನು ಹತೋಟಿಯಲ್ಲಿಡಲು ಗೊತ್ತು ಎಂದು ಭಯಪಡಿಸಿದ್ದಾನೆ. ಇದರಿಂದ ಹೆದರಿದ ಬಾಲಕಿ ಈ ವಿಚಾರ ಎಲ್ಲೂ ಹೇಳಿಕೊಂಡಿರಲಿಲ್ಲ. ವಿದ್ಯಾರ್ಥಿಯ ಪ್ರಕಾರ ಈ ವಿಚಾರ ಬಹಿರಂಗಪಡಿಸಲು ಯೋಚಿಸಿದಾಗೆಲ್ಲಾ ಆರೋಪಿ ಪ್ರೊಫೆಸರ್ ತಾನು ಶಾಲಾ ವ್ಯವಸ್ಥಾಪಕ ದಿನೇಶ್ ಚಂದ್ರ ಶರ್ಮಾ ಆಪ್ತ, ಅವರಿಗೆ ಹೇಳಿ ಕಾಲೇಜಿನಿಂದ ಹೊರಹಾಕುವಂತೆ ಬೆದರಿಕೆ ಹಾಕಿದ್ದರೆನ್ನಲಾಗಿದೆ.
ಪತ್ನಿಗೆ ಭೂಗತ ಜಗತ್ತಿನೊಂದಿಗೆ ನಂಟು
ಇನ್ನು ಪ್ರೊಫೆಸರ್ ಬಗ್ಗೆ ದೂರು ನೀಡಿರುವ ವಿದ್ಯಾರ್ಥಿನಿ 'ಶಿಕ್ಷಕ ಕಮ್ರಾನ್ ತನ್ನ ಹೆಂಡತಿ ಭೂಗತ ಜಗತ್ತಿನೊಂದಿಗೆ (Underworld) ಸಂಪರ್ಕ ಹೊಂದಿದ್ದು, ಅದನ್ನು ಎಲ್ಲಿಂದಲಾದರೂ ಕಿಡ್ನ್ಯಾಪ್ ಮಾಡಿಸಬಹುದು. ನಿನ್ನ ಕುಟುಂಬಕ್ಕೆ ಏನು ಬೇಕಾದರೂ ಆಗಬಹುದು ಎಂದು ವಿದ್ಯಾರ್ಥಿನಿಗೆ ಬೆದರಿಕೆ ಹಾಕಲಾಗಿದೆ. ಈತನಿಗೆ ಶಾಲೆಯ ಕೆಲ ವಿದ್ಯಾರ್ಥಿಗಳು ಬೆಂಬಲ ನೀಡುತ್ತಿದ್ದು, ಶಿಕ್ಷಕನ ಪರವಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರೂ ಕಮ್ರಾನ್ ಬೆಂಬಲಿಸುತ್ತಿದ್ದಾರೆ, ಇವರ ಬೆಂಬಲದಿಂದಲೇ ಶಾಲೆಯಲ್ಲಿ ಸೆಕ್ಸ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ತಾನು ಭಯಗೊಂಡಿದ್ದು, ತನ್ನ ಕುಟುಂಬಕ್ಕೆ ಏನೂ ಆಗಬಾರದುಎಂದೂ ಆಗ್ರಹಿಸಿದ್ದಾಳೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಿ ಕಾಲೇಜಿನಲ್ಲಿ ನಡೆಯುತ್ತಿರುವ ಸೆಕ್ಸ್ ದಂಧೆಯನ್ನು ಬಯಲುಗೊಳಿಸುವಂತೆಯೂ ಮನವಿ ಮಾಡಿದ್ದಾಳೆ.
ಲೈವ್ ಸ್ಟ್ರೀಮಿಂಗ್‌ನಲ್ಲಿ ಎಲ್ಲವನ್ನೂ ತೋರಿಸ್ತಿದ್ದ ಜೋಡಿಗಳಿಗೆ ಸಂಕಟ!
ಪ್ರಾಧ್ಯಾಪಕರ ವಿರುದ್ಧ ಪ್ರಕರಣ ದಾಖಲು
ಈ ಬಗ್ಗೆ ಮಾಹಿತಿ ನೀಡಿದ ಪಿಲಿಭಿತ್‌ನ ಸಿಒ ಸಿಟಿ ಸುನೀಲ್ ದತ್, ವಿದ್ಯಾರ್ಥಿನಿಯು ಪೊಲೀಸ್ ವರಿಷ್ಠಾಧಿಕಾರಿಯ ಮುಂದೆ ಹಾಜರಾಗಿ ಕ್ರಮಕ್ಕೆ ಒತ್ತಾಯಿಸಿದ್ದು, ಬಾಲಕಿಯ ದೂರಿನ ಆಧಾರದ ಮೇಲೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.