
ಪಿಟ್‌ಬುಲ್‌ಗಳು ತಳಿಯ ಶ್ವಾನಗಳು ಅತ್ಯಂತ ಅಪಾಯಕಾರಿ ಶ್ವಾನಗಳು. ಹಲವು ದೇಶಗಳಲ್ಲಿ ಇವುಗಳನ್ನು ಸಾಕುವುದಕ್ಕೆ ನಿಷೇಧವಿದೆ. ಆದರೂ ಜನ ಸಾಕುತ್ತಾರೆ. ಜೊತೆಗೆ ಜೀವ ಬಲಿ ಕೊಡುತ್ತಾರೆ. ಹೌದು ಪಿಟ್‌ಬುಲ್ ಶ್ವಾನದ ದಾಳಿಗೆ ಬಲಿಯಾದವರು ಒಬ್ಬರೋ ಇಬ್ಬರೋ ಅಲ್ಲ, ಅನೇಕ ಜನರು ಪಿಟ್‌ಬುಲ್ ಶ್ವಾನದ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ತನಗೆ ಅನ್ನ ಹಾಕಿ ಮುದ್ದಾಗಿ ಸಾಕಿದವವರನ್ನೇ ಈ ಶ್ವಾನಗಳು ಬಿಡುವುದಿಲ್ಲ, ಅವುಗಳ ವರ್ತನೆ ಹೇಗೆ ಬದಲಾಗುತ್ತದೆ ಎಂದು ಹೇಳಲಾಗದು ಹೀಗಿದ್ದರೂ ಕೂಡ ಜನಕ್ಕೆ ಮಾತ್ರ ಬುದ್ದಿಯಂತು ಬರುವುದಿಲ್ಲ. ಅವುಗಳನ್ನು ಸಾಕಲು ಹೋಗಿ ಅವುಗಳಿಗೆ ಆಹಾರವಾಗುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಕಾಲೇಜು ಓದುವ ಯುವತಿಯೊಬ್ಬಳು ತಾನೇ ಸಾಕಿದ ಪಿಟ್‌ಬುಲ್ ಶ್ವಾನದ ದಾಳಿಗೆ ಬಲಿಯಾಗಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರುವುದು ಅಮೆರಿಕಾದ ಟೆಕ್ಸಾಸ್‌ನಲ್ಲಿ.
ಇದನ್ನೂ ಓದಿ: ಮಹಿಳೆ ಮೇಲೆ ಸಾಕು ನಾಯಿ ದಾಳಿ: ಕ್ಷಮೆ ಬದಲು ಸಂತ್ರಸ್ತೆಯ ಕೆನ್ನೆಗೆ ಹೊಡೆದ ನಾಯಿ ಮಾಲಕಿ
ಮ್ಯಾಡಿಸನ್ ರಿಲೇ ಹಲ್ ಎಂಬ 23ರ ಹರೆಯದ ಯುವತಿ ತಾನೇ ಸಾಕಿದ ಪಿಟ್‌ಬುಲ್ ಶ್ವಾನಗಳ ದಾಳಿಗೆ ಪ್ರಾಣ ಬಿಟ್ಟಿದ್ದಾರೆ. ಈಕೆಯ ಟೈಲರ್‌ನಲ್ಲಿರುವ ನಿವಾಸದಲ್ಲೇ ಈ ಘಟನೆ ನಡೆದಿದೆ. ನವೆಂಬರ್ 21ರಂದು ಈ ಘಟನೆ ನಡೆದಿದೆ. ಮ್ಯಾಡಿಸನ್ ರಿಲೇ ಹಲ್ ಸಂಜೆ 4.15ರ ಸುಮಾರಿಗೆ ಮನೆಯ ಹಿತ್ತಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆ ನಾಯಿಗಳು ಆಕೆಯನ್ನು ಪ್ರೀತಿಸುವಂತೆ ಕಾಣುತ್ತಿದ್ದವು. ಹಲವಾರು ವಾರಗಳಿಂದ ಅವುಗಳನ್ನು ಆಕೆಯೇ ನೋಡಿಕೊಳ್ಳುತ್ತಿದ್ದಳು ಎಂದು ಯುವತಿ ರಿಲೇ ಹಲ್ ತಾಯಿ ಜೆನ್ನಿಫರ್ ಹಬ್ಬೆಲ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಅಲ್ಲಿನ ಸ್ಥಳೀಯ ಮಾಧ್ಯಮಗಳ ಪ್ರಕಾರ, ತುರ್ತು ಕರೆಗೆ ಸ್ಪಂದಿಸಿದ ಅಧಿಕಾರಿ ಒಂದು ಪಿಟ್‌ಬುಲ್ ಶ್ವಾನಕ್ಕೆ ಗುಂಡಿಕ್ಕಿದ ನಂತರವೇ ಯುವತಿ ರಿಲೇ ಹಲ್ ಬಳಿ ತಲುಪಲು ಅವರಿಗೆ ಸಾಧ್ಯವಾಗಿದೆ. ಹಾಗೂ ಇತರ ಎರಡು ಶ್ವಾನಗಳನ್ನು ವಶಕ್ಕೆ ಪಡೆಯಲಾಗಿದೆ. ಟೆಕ್ಸಾಸ್‌ನ ಟೈಲರ್‌ನಲ್ಲಿರುವ ವಸತಿ ಮನೆಯಲ್ಲಿ ಈ ದಾಳಿ ನಡೆದಿದ್ದು, ಘಟನೆ ನಡೆಯುವ ವೇಳೆ ಮನೆ ಮಾಲೀಕರು ಪಟ್ಟಣದಿಂದ ಹೊರಗಿದ್ದರು.
ನಾಯಿಗಳನ್ನು ಗೂಡೊಳಗೆ ಬಿಡಲು ಹೋದಾಗ ದುರಂತ:
ಟೈಲರ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹಲ್, ಆರು ತಿಂಗಳಲ್ಲಿ ಬಾಲ್ಯ ಶಿಕ್ಷಣದ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲಿದ್ದರು. ಕೆಲವು ವಾರಗಳ ಹಿಂದೆ ಕುಟುಂಬದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು ಮತ್ತು ನಾಯಿಗಳನ್ನು ನೋಡಿಕೊಳ್ಳುವುದಕ್ಕೆ ಬಯಸಿದ್ದರು.. ಮೂರು ಪಿಟ್ ಬುಲ್‌ಗಳು ಹಿತ್ತಲಿನಲ್ಲಿ ದಾಳಿ ಮಾಡಿದಾಗ ಹಲ್ ಅವರು ನಾಯಿಗಳನ್ನು ಒಳಗೆ ಬಿಡುವುದಕ್ಕೆ ಹೋಗಿದ್ದರು. ನಂತರ ಬೊಬ್ಬೆ ಕೇಳಿ ನೆರೆಹೊರೆಯವರು ತುರ್ತು ಸೇವೆಗಳಿಗೆ ಕರೆ ಮಾಡಿದ್ದಾರೆ.
ಇದನ್ನೂ ಓದಿ: ಗರ್ಭಿಣಿ, 6 ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದ ಯುವತಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣು
ತುರ್ತು ಕರೆಯ ನಂತರ ಸ್ಥಳಕ್ಕೆ ಬಂದ ಸ್ಮಿತ್ ಕೌಂಟಿ ಶೆರಿಫ್‌ನ ಡೆಪ್ಯೂಟಿಯೊಬ್ಬರು ಹಿತ್ತಲಿನಲ್ಲಿ ಹಲ್ ಅವರನ್ನು ನೋಡಿದ್ದಾರೆ ಈ ವೇಳೆ ನಾಯಿಗಳು ಅವರತ್ತ ಬಂದಿವೆ ಈ ವೇಳೆ ಅವರು ಒಂದು ನಾಯಿಗೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಉಳಿದೆರಡು ನಾಯಿಗಳು ಓಡಿ ಹೋಗಿವೆ. ನಂತರವೇ ಅವರು ಹಲ್ ಅವರನ್ನು ತಲುಪಿದರು. ಆದರೆ ಇದಾಗಿ ಸ್ವಲ್ಪ ಸಮಯದ ನಂತರ ಅವರು ಗಾಯಗಳಿಂದ ಸಾವನ್ನಪ್ಪಿದ್ದಾರೆ. ಇದಾದ ನಂತರ ಮತ್ತೆರಡು ಶ್ವಾನಗಳು ಅವರತ್ತ ಬಂದಿದ್ದು, ಈ ವೇಳೆ ಅವರು ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ ಎಂದು ಸ್ಮಿತ್ ಕೌಂಟಿ ಶೆರಿಫ್ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸಾರ್ಜೆಂಟ್ ಲ್ಯಾರಿ ಕ್ರಿಶ್ಚಿಯನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ