
20ರ ಹರೆಯದ ಗರ್ಭಿಣಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದ್ದು, ಮಹಿಳೆಯ ಕುಟುಂಬದವರು ಆಕೆಯ ಪತಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. 20ರ ಹರೆಯದ ಅರ್ಚನಾ ಸಾವಿಗೆ ಶರಣಾದವರು. ಪತಿಯ ಮನೆಯ ಹಿತ್ತಲಿನಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಆಕೆ ಬೆಂಕಿ ಹಚ್ಚಿಕೊಂಡು ಆತ್ಮ8ತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ತಮ್ಮ ಮಗಳ ಸಾವಿಗೆ ಅರ್ಚನಾಳ ಗಂಡನ ಮನೆಯವರೇ ಕಾರಣ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಬುಧವಾರ ಮಧ್ಯಾಹ್ನ ಅರ್ಚನಾಳ ಅತ್ತೆ ಮೊಮ್ಮಗನನ್ನು ಅಂಗನವಾಡಿಯಿಂದ ಕರೆದುಕೊಂಡು ಬರುವುದಕ್ಕಾಗಿ ತಮ್ಮ ಮನೆಯಿಂದ ಹೊರಟಾಗ ಮನೆಯ ಹಿಂಬದಿಯ ಕಾಂಕ್ರೀಟ್ ಶೆಡ್‌ನಲ್ಲಿ ಸೊಸೆ ಅರ್ಚನಾ ಶವವಾಗಿರುವುದು ಕಂಡು ಬಂದಿದೆ. ಕೇರಳದ ತ್ರಿಶೂರ್‌ನಲ್ಲಿ ಈ ಘಟನೆ ನಡೆದಿದೆ. ಅರ್ಚನಾ ಅವರು ಆರು ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದರು. ಶರೋನ್ ಎಂಬುವವರನ್ನು ಅವರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯ ನಂತರ ಶರೋನ್ ದಿನವೂ ಆಕೆಯನ್ನು ಥಳಿಸುತ್ತಿದ್ದ. ಅಲ್ಲದೇ ಆಕೆಯ ಮನೆಯವರೊಂದಿಗೆ ಮಾತನಾಡುವುದಕ್ಕೂ ಆತ ಬಿಡುತ್ತಿರಲಿಲ್ಲ. ಹೀಗಾಗಿ ಅರ್ಚನಾ ಮನೆಯವರೊಂದಿಗೂ ಮಾತನಾಡುವುದು ನಿಂತು ಹೋಗಿತ್ತು.
ಮದ್ವೆಯ ನಂತರ ತವರು ಮನೆಯವರೊಂದಿಗೆ ಮಾತನಾಡಲು ಬಿಡದ ಪತಿ:
ಶರೋನ್ ಓರ್ವ ಕ್ರೂರ ವ್ಯಕ್ತಿ. ಒಂದು ದಿನ ಅವನು ಅವಳನ್ನು ಅವಳ ಕಾಲೇಜಿನ ಹೊರಗೆಯೇ ಸರಿಯಾಗಿ ಹೊಡೆದಿದ್ದ. ಈ ವೇಳೆ ನಾನು ಆತನ ವಿರುದ್ಧ ದೂರು ದಾಖಲಿಸಿದ್ದೆ. ಆ ನಂತರ ಅವನು, ಅರ್ಚನಾ ನಮ್ಮ ಜೊತೆ ಮಾತನಾಡುವುದಕ್ಕೆ ಸಾಧ್ಯವಾಗದಂತೆ ಮಾಡಿದ್ದ. ನಮ್ಮನ್ನು ಫೋನ್ ಮೂಲಕ ಸಂಪರ್ಕಿಸಲು ನಿರ್ಬಂಧ ವಿಧಿಸಿದ್ದ ಎಂದು ಮಗಳನ್ನು ಕಳೆದುಕೊಂಡ ಅರ್ಚನಾಳ ತಂದೆ ಹರಿದಾಸ್ ದುಃಖ ತೋಡಿಕೊಂಡಿದ್ದಾರೆ. ಅರ್ಚನಾಳ ಸೋದರಿ ಅನು ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ್ದು, ತನ್ನ ಅಕ್ಕ ಬಿಟೆಕ್ ಮುಗಿಸಿ ವಿದೇಶದಲ್ಲಿ ನೆಲೆಸಬೇಕು ಎಂದು ಕನಸು ಕಂಡಿದ್ದಳು. ಆದರೆ ಆತ, ಆಕೆ ವಿದೇಶಕ್ಕೆ ಹೋಗುವುದನ್ನು ತಡೆದ ಜೊತೆಗೆ ಶರೋನ್ ಆಕೆಯನ್ನು ಭಯದಲ್ಲೇ ಬದುಕುವಂತೆ ಮಾಡಿದ್ದ. ಅಲ್ಲದೇ ಆಕೆಗೆ ಕುಟುಂಬದ ಜೊತೆ ಮಾತುಕತೆಯನ್ನೇ ನಿರ್ಬಂಧಿಸಿದ್ದ ಎಂದು ಅನು ಹೇಳಿದ್ದಾರೆ.
ಮಾದಕ ವ್ಯಸನಿಯಾಗಿದ್ದ ಶರೋನ್:
ಅವನು ನಮಗೆ ಅವಳ ಜೊತೆ ಸಂಪರ್ಕ ಸಾಧಿಸಲು ಬಿಡಲಿಲ್ಲ. ಕೊನೆಯ ಬಾರಿ ನಾನು ಅವಳನ್ನು ರೈಲ್ವೆ ನಿಲ್ದಾಣದಲ್ಲಿ ನೋಡಿದೆ. ಆಗಲೂ ಆತ ಆಕೆಯನ್ನು ನನ್ನ ಜೊತೆ ಮಾತನಾಡಲು ಬಿಡಲಿಲ್ಲ ಎಂದು ಸೋದರಿ ಅನು ಹೇಳಿದ್ದಾರೆ. ಅರ್ಚನಾ ಪೋಷಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಶರೋನ್‌ನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಶರೋನ್ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಯಾಗಿದ್ದ ಎಂದು ಪೊಲೀಸರು ದೃಢಪಡಿಸಿದ್ದಾರೆ.
ತನಿಖಾ ತಂಡವು ಶರೋನ್ ಮತ್ತು ಆತನ ತಾಯಿಯ ವಿರುದ್ಧ ಆತ್ಮಹ8ಗೆ ಪ್ರಚೋದನೆ ನೀಡಿದ ಆರೋಪದ ಜೊತೆಗೆ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದ್ದಾರೆ. ಅರ್ಚನಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಮಹಿಳೆ ಮೇಲೆ ಸಾಕು ನಾಯಿ ದಾಳಿ: ಕ್ಷಮೆ ಬದಲು ಸಂತ್ರಸ್ತೆಯ ಕೆನ್ನೆಗೆ ಹೊಡೆದ ನಾಯಿ ಮಾಲಕಿ
ಇದನ್ನೂ ಓದಿ: 90 ಕೋಟಿ ರೂಪಾಯಿಯ ಸೈಬರ್ ವಂಚನೆ: ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ