
ನವದೆಹಲಿ (ನ.27) ಈ ವರ್ಷ ಭಾರತದಲ್ಲಿ ಮಳೆ ಭಾರಿ ಅವಾಂತರಗಳನ್ನೇ ಮಾಡಿದೆ. ಹಲವೆಡೆ ಪ್ರವಾಹ, ಭೂಕುಸಿತಗಳು ಸಂಭವಿಸಿದೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಎಲ್ಲಾ ಜಲಾಶಗಳು ಭರ್ತಿಯಾಗಿತ್ತು. ಮಳೆಗಾಲ ಮುಗೀತು ಅನ್ನೋವಷ್ಟರಲ್ಲೇ ಚಂಡಮಾರುತಗಳಿಂದ ಮತ್ತೆ ಮತ್ತೆ ಮಳೆಯಾಗುತ್ತಿದೆ. ಇದೀಗ ಮತ್ತೆ ಜನಜೀವನ ಅಸ್ತವ್ಯಸ್ತಗೊಳಿಸಲು ದಿತ್ವಾ ಚಂಡಮಾರುತ ರೆಡಿಯಾಗಿದೆ. ನವೆಂಬರ್ 30 ರಂದು ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶದ ಕರಾವಳಿ ತೀರಕ್ಕೆ ದಿತ್ವಾ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಿತ್ವಾ ಚಂಡಮಾರುತ ತಮಿಳುನಾಡಿನ ಚೆನ್ನಿಂದ 750 ಕಿಲೋಮೀಟರ್ ದೂರದ ಪುಟ್ಟುವಿಲ್ ಬಳಿ ರೂಪುಗೊಂಡಿದೆ. ದಿತ್ವಾ ಚಂಡಮಾರುತ ಉತ್ತರ ತಮಿಳುನಾಡು ಕರಾವಳಿ ತೀರ ಭಾಗ ಹಾಗೂ ದಕ್ಷಿಣ ಆಂಧ್ರದ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ. ನವೆಂಬರ್ 30ರಿಂದ ದಿತ್ವಾ ಮಳೆ ಅಬ್ಬರ ಆರಂಭಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ತಮಿಳುನಾಡು, ಆಂಧ್ರ ಪ್ರದೇಶ ಕರಾವಳಿ ತೀರ ಪ್ರದೇಶಗಳಿಗೆ ಅಪ್ಪಳಿಸುವ ಕಾರಣ ಇದರ ಪರಿಣಾಮ ಬೆಂಗಳೂರು ಕರ್ನಾಟಕದ ಮೇಲೂ ಇರಲಿದೆ. ಈಗಾಗಲೇ ತಮಿಳುನಾಡು ಹಾಗೂ ಆಂದ್ರ ಪ್ರದೇಶದ ಕೆಲೆವೆಡೆ ಮಳೆಯಾಗುತ್ತಿದೆ.ನವೆಂಬರ್ 30 ರಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ.
ಕಾರ್ ನಿಕೋಬಾರ್ ವಲಯದಲ್ಲಿ ಸೆನ್ಯಾರ್ ಚಂಡಮಾರುತ ರೂಪುಗೊಂಡಿದೆ. ಸೆನ್ಯಾರ್ ಚಂಡಮಾರುತದ ವೇಗ ಕ್ಷೀಣಗೊಳ್ಳುತ್ತಿದೆ. ಹೀಗಾಗಿ ಇದು ಕರಾವಳಿ ತೀರ ಪ್ರದೇಶದಲ್ಲಿ ಯಾವುದೇ ಅನಾಹುತ ಸಷ್ಟಿಸುವ ಸಾಧ್ಯತೆ ಇಲ್ಲ. ಆದರೆ ತಮಿಳುನಾಡು, ಆಂಧ್ರ ಪ್ರದೇಶ , ಕರ್ನಾಟಕದ ಹಲವು ಭಾಗದಲ್ಲಿ ಈಗಾಗಲೇ ಪರಿಣಾಮ ಬೀರಿದೆ. ತಮಿಳುನಾಡಿನ ಹಲವು ಭಾಗದಲ್ಲಿ ಮಳೆಯಾಗುತ್ತಿದೆ. ಇತ್ತ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ದಿತ್ವಾ ಚಂಡಮಾರುತ ಅಪ್ಪಳಿಸಲು ರೆಡಿಯಾಗಿದೆ ಎಂದು ಐಎಂಡಿ ಹೇಳಿದೆ.
ದಿತ್ವಾ ಹೆಸರನ್ನು ಯೆಮೆನ್ ದೇಶ ಸಲ್ಲಿಕೆ ಮಾಡಿದೆ. ಪ್ರಮುಖವಾಗಿ ಭಾರತದ ಸಮುದ್ರದ ಉತ್ತರ ಭಾಗದಲ್ಲಿ ರೂಪುಗೊಂಡಿರುವ ಚಂಡಮಾರುತಕ್ಕೆ ಧಿತ್ವಾ ಎಂದು ಹೆಸರಿಡಲಾಗಿದೆ. ಬಂಗಾಳ ಕೊಲ್ಲಿಯ 6.9°N/81.9°Eರಲ್ಲಿ ಈ ಚಂಡಮಾರುತ ರೂಪುಗೊಂಡಿದೆ. ತಮಿಳುನಾಡಿನ ಚೆನನೈ, ನಾಗಪಟ್ಟಿಣಂ, ತಿರುವಲ್ಲೂರು, ತಂಜಾವೂರು ಸೇರಿದಂತೆ ಹಲವು ಭಾಗದಲ್ಲಿ ನವೆಂಬರ್ 27, 28 ಹಾಗೂ 29 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ