
ಶ್ರೀನಗರ[ಜ.25]: ಕಾಶ್ಮೀರ ಕಣಿವೆಯಲ್ಲಿ ಚಳಿಗಾಲದ ಶೀತಗಾಳಿಯ ತೀವ್ರತೆ ದಿನೇ ದಿನೇ ಏರುತ್ತಿದೆ. ಜೊತೆಗೆ ಭಾರೀ ಉಷ್ಣಾಂಶ ಕುಸಿದ ಪರಿಣಾಮ ಶನಿವಾರದ ಬಳಿಕ ಕೆಲ ದಿನಗಳ ಕಾಲ ಸಣ್ಣ ಮಳೆ ಅಥವಾ ಹಿಮಪಾತ ಹೆಚ್ಚಾಗಲಿದೆ ಎಂದು ಹವಮಾನ ಇಲಾಖೆ ಭವಿಷ್ಯ ನುಡಿದಿದೆ.
ಮಂಜುಗಡ್ಡೆಯಾದ ನಯಾಗರಾ: ವೈರಲ್ ಆಯ್ತು ಫಾಲ್ಸ್ ಬ್ಯೂಟಿ!
ಈ ನಡುವೆ ಲಡಾಖ್‌ನ ದ್ರಾಸ್‌ನಲ್ಲಿ ಉಷ್ಣಾಂಶ ಬರೋಬ್ಬರಿ -30 ಡಿಗ್ರಿಗೆ ಕುಸಿದಿದೆ.ಈ ಹಿಂದೆ 1995 ಜನವರಿ 9 ರಂದು -60 ಡಿಗ್ರಿ ದಾಖಲಿಸುವ ಮೂಲಕ ದ್ರಾಸ್ ದಾಖಲೆ ಬರೆದಿತ್ತು.
ಇನ್ನು-20.1 ಡಿಗ್ರಿ ದಾಖಲಿಸುವ ಮೂಲಕ ಲೇಹ್ ಎರಡನೇ ಸ್ಥಾನದಲ್ಲಿದೆ. ಶ್ರೀನಗರದಲಿ -6.1 ಡಿ. ಸೆ., ಪಹಲ್ಗಾಂನಲ್ಲಿ 13.4 ಡಿ.ಸೆ., ಗುಲ್ಮಾರ್ಗ್‌ನಲ್ಲಿ -11.2 ಡಿ.ಸೆ.ಕ್ಕೆ ಇಳಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸೌಂದರ್ಯವೇ ಧರೆಗಿಳಿದಂತೆ: ಹಿಮದ ಹೊದಿಕೆ ಹೊದ್ದ ಹಿಮಾಚಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ