ಮಂಗಳೂರು, ಕೊಯಮತ್ತೂರು ಬಾಂಬ್‌ ಸ್ಫೋಟ ಕೇಸ್‌: ಐಸಿಸ್‌ ಕೈವಾಡದ ಬಗ್ಗೆ ತನಿಖೆ

Published : Mar 07, 2023, 12:30 PM ISTUpdated : Mar 07, 2023, 12:35 PM IST
ಮಂಗಳೂರು, ಕೊಯಮತ್ತೂರು ಬಾಂಬ್‌ ಸ್ಫೋಟ ಕೇಸ್‌: ಐಸಿಸ್‌ ಕೈವಾಡದ ಬಗ್ಗೆ ತನಿಖೆ

ಸಾರಾಂಶ

ಈ ಸಂಘಟನೆಯು ತನ್ನ ಮುಖವಾಣಿ ವಾಯ್ಸ್‌ ಆಫ್‌ ಖೋರಾಸಾನ್‌ ನಿಯತಕಾಲಿಕೆಯಲ್ಲಿ ಕರ್ನಾಟಕದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಪ್ರತ್ಯೇಕ ಬಾಂಬ್‌ ಸ್ಫೋಟ ಪ್ರಕರಣಗಳ ಹೊಣೆ ಹೊತ್ತಿಕೊಂಡಿತ್ತು.

ಕೊಯಮತ್ತೂರು (ಮಾಚ್‌ 7, 2023): ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಬೆನ್ನಲ್ಲೇ ಶಂಕಿತ ಉಗ್ರ ಶಾರೀಕ್‌ನನ್ನು ಬೆಂಬಲಿಸಿ ಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ (ಐಆರ್‌ಸಿ) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು. ಶಂಕಿತ ಉಗ್ರ ಶಾರೀಕ್‌ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಸ್ಫೋಟದಲ್ಲಿ ನಮ್ಮ ಉದ್ದೇಶ ಈಡೇರದಿದ್ದರೂ ಮುಂದಿನ ದಿನಗಳಲ್ಲಿ ಯಶಸ್ವಿ ದಾಳಿ ಮಾಡುವುದಾಗಿ ಹೇಳಿತ್ತು.

ಈ ಮೂಲಕ ಐಸಿಸ್‌-ಖೋರಾಸಾನ್‌ ಎಂಬ ಉಗ್ರ ಸಂಘಟನೆ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ (Mangaluru Cooker Bomb Blast) ಹೊಣೆ ಹೊತ್ತುಕೊಂಡಿದೆ. ಈ ಸಂಘಟನೆಯು ತನ್ನ ಮುಖವಾಣಿ ವಾಯ್ಸ್‌ ಆಫ್‌ ಖೋರಾಸಾನ್‌ ನಿಯತಕಾಲಿಕೆಯಲ್ಲಿ ಕರ್ನಾಟಕದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಪ್ರತ್ಯೇಕ ಬಾಂಬ್‌ ಸ್ಫೋಟ ಪ್ರಕರಣಗಳ ಹೊಣೆ ಹೊತ್ತಿಕೊಂಡಿತ್ತು. ದಕ್ಷಿಣ ಭಾರತದಲ್ಲಿ ಸಂಘಟನೆಯ ಉಗ್ರರು ಸಕ್ರಿಯರಾಗಿದ್ದಾರೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಶಂಕಿತ ಉಗ್ರ ಶಾರೀಕ್‌ನನ್ನು ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಸೇರಿದಂತೆ ಉಗ್ರ ಚಟುವಟಿಕೆಗಳ ಬಗ್ಗೆ ವಿಚಾರಣೆ ಒಳಪಡಿಸಿದ್ದಾರೆ.

ಇದನ್ನು ಓದಿ: ಮಂಗಳೂರು ಕುಕ್ಕರ್‌ ಬಾಂಬ್‌, ಕೊಯಮತ್ತೂರು ಕಾರ್‌ ಬಾಂಬ್‌ ಸ್ಫೋಟಕ್ಕೆ ನಾವೇ ಕಾರಣ ಎಂದ ಐಸಿಸ್‌!

ಇನ್ನೊಂದೆಡೆ, ಕೊಯಮತ್ತೂರು ಪೊಲೀಸರು ತಮ್ಮ ನಗರದಲ್ಲಿ ನಡೆದ ಕಾರು ಸ್ಫೋಟದಲ್ಲಿ ಇಸ್ಲಾಮಿಕ್ ಸ್ಟೇಟ್ ಕೈವಾಡದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕರು ದಕ್ಷಿಣ ಭಾರತದಲ್ಲಿದ್ದಾರೆ ಮತ್ತು ಕಳೆದ ವರ್ಷ ಕೊಯಮತ್ತೂರು ಕಾರು ಸ್ಫೋಟ (Coimbatore Car Blast) ಮತ್ತು ಮಂಗಳೂರಿನ ಕುಕ್ಕರ್ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎಂದು ಖೊರಾಸಾನ್ ಪ್ರಾಂತ್ಯದಲ್ಲಿರುವ ಇಸ್ಲಾಮಿಕ್‌ ಸ್ಟೇಟ್‌ನ (Islamic State in Khorasan Province) 'ವಾಯ್ಸ್ ಆಫ್ ಖುರಾಸನ್' (Voice of Khurasan) ನಿಯತಕಾಲಿಕದ ಮುಖವಾಣಿಯ ಮೂಲಕ ಹೇಳಿಕೆ ನೀಡಿರುವ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ISKP ಶನಿವಾರ ನೀಡಿದ ಹೇಳಿಕೆಯ ನಂತರ, ಕೊಯಮತ್ತೂರು ನಗರ ಪೊಲೀಸರು ಐಎಸ್ ಸಹಾನುಭೂತಿ ಹೊಂದಿರುವವರು ಮತ್ತು ಸ್ವಯಂ  - ಮೂಲಭೂತವಾದಿಗಳ ಮೇಲೆ ತಮ್ಮ ನಿಗಾವನ್ನು ಹೆಚ್ಚಿಸಿದ್ದಾರೆ. "ನಾವು ವಿವಿಧ ಮೂಲಗಳೊಂದಿಗೆ ಐಎಸ್‌ಕೆಪಿ ನೀಡಿದ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯೊಂದಿಗೆ ಸಂಪರ್ಕದಲ್ಲಿದ್ದೇವೆ, ಅವರು ಸತ್ಯಾಸತ್ಯತೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ನಾವು ನಗರದಲ್ಲಿ ಸುಮಾರು 200 ಜನರ ಮೇಲೆ ನಿಗಾ ಇರಿಸುತ್ತಿದ್ದೇವೆ. ನಗರ ಪೊಲೀಸರ ಗುಪ್ತಚರ ವಿಭಾಗ (ಐಎಸ್) ಮತ್ತು ವಿಶೇಷ ಗುಪ್ತಚರ ಕೋಶ (ಎಸ್‌ಐಸಿ) ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಗುಜರಾತ್‌ ಚುನಾವಣೆಗೆ ಅಡ್ಡಿ ಮಾಡಲು ಐಸಿಸ್‌ನಿಂದ ಗಲಭೆ?

ಇನ್ನು, ಕೊಯಮತ್ತೂರು ಪೊಲೀಸರು ಕೆಲವು ಮೂಲಭೂತವಾದಿಗಳು ಮತ್ತು ಐಎಸ್ ಸಹಾನುಭೂತಿ ಹೊಂದಿರುವವರನ್ನು ಸಹ ಗುರುತಿಸಿದ್ದಾರೆ. "ನಾವು ಅವರ ಕರೆ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಅವರ ಸಾಮಾಜಿಕ ಮಾಧ್ಯಮ ಮತ್ತು ದೈಹಿಕ ಚಟುವಟಿಕೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಾವು ನಮ್ಮ ಗುಪ್ತಚರ ಸಂಸ್ಥೆಗಳನ್ನು ಬಲಪಡಿಸಿದ್ದೇವೆ ಹಾಗೂ ಅವರ ಮೇಲೆ ನಿಗಾ ಇಡಲು ಕೆಲವು ಜನರಿಗೆ ಗುಪ್ತಚರ ಅಧಿಕಾರಿಗಳನ್ನು ನಿಯೋಜಿಸಿದ್ದೇವೆ" ಎಂದೂ ಅಧಿಕಾರಿ ಹೇಳಿದರು.

ಅಕ್ಟೋಬರ್ 23 ರಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಕೊಟ್ಟೈಮೇಡುವಿನ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರು ಬಾಂಬ್ ಸ್ಫೋಟದಲ್ಲಿ ನಗರದ ಎಚ್‌ಎಂಪಿಆರ್ ಸ್ಟ್ರೀಟ್‌ನ ಜಮೇಶ ಮುಬೀನ್ (29) ಮೃತಪಟ್ಟಿದ್ದರು. ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಕೊಯಮತ್ತೂರು ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿದ್ದು, ಬಳಿಕ ಸಂಸ್ಥೆಯು ಇನ್ನೂ ಐದು ಜನರನ್ನು ಬಂಧಿಸಿತ್ತು.

ಇದನ್ನೂ ಓದಿ: ಕೇರಳದ ಹಲವು ಪಿಎಫ್‌ಐ ನಾಯಕರಿಗೆ ಐಸಿಸ್‌, ಅಲ್‌ಖೈದಾ ನಂಟು: ಎನ್‌ಐಎ

ಆರೋಪಿಗಳ ಆಪ್ತ ಸ್ನೇಹಿತರಾಗಿದ್ದ 50ಕ್ಕೂ ಹೆಚ್ಚು ಜನರ ನಿವಾಸಗಳಲ್ಲಿ ಪೊಲೀಸರು ಈ ಹಿಂದೆ ಶೋಧ ನಡೆಸಿದ್ದರು. ಐಎಸ್ ಸಹಾನುಭೂತಿ ಹೊಂದಿರುವ ವ್ಯಕ್ತಿಗಳ ಕಚೇರಿಗಳು ಮತ್ತು ನಿವಾಸಗಳಲ್ಲಿ ಸಹ ಕೊಯಮತ್ತೂರು ಪೊಲೀಸರು ಶೋಧ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು