ಉರಿ ಬಿಸಿಲಿಗೆ ತತ್ತರಿಸಿದ ಹಲವು ರಾಜ್ಯ, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

By Suvarna News  |  First Published Mar 6, 2023, 7:43 PM IST

ಬೇಸಗೆ ಬಿಸಿ ಶುರುವಾಗಿದೆ. ಉರಿ ಬಿಸಿಲು, ಬಿಸಿ ಗಾಳಿಗೆ ಹಲವು ರಾಜ್ಯಗಳು ತತ್ತರಿಸಿದೆ. ಇದೀಗ ಬಿಸಿ ವಾತಾವರಣ ಹಾಗೂ ಜನರ ಆರೋಗ್ಯ ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರದ ತಯಾರಿಗಳು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ವೇಳೆ ಹಲವು ನಿರ್ದೇಶನ ನೀಡಿದ್ದಾರೆ.


ನವದೆಹಲಿ(ಮಾ.06); ಭಾರತದ ಸೇರಿದಂತೆ ಹಲವು ದೇಶಗಳಲ್ಲಿ ಉರಿ ಬಿಸಿಲು ಆರಂಭಗೊಂಡಿದೆ. ಕಳೆದ ಬಾರಿಗಿಂತ ಹೆಚ್ಚಿನ ಬಿಸಿ ವಾತಾವರಣ ಈ ಬಾರಿ ಇರಲಿದೆ ಅನ್ನೋ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ಹಲವು ರಾಜ್ಯಗಳು ಉರಿ ಬಿಸಿಲು ಹಾಗೂ ತೀವ್ರ ತಾಪಮಾನದಿಂದ ತತ್ತರಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈಸಭೆಯಲ್ಲಿ ಮೋದಿ ಬಿಸಿ ವಾತಾರವಣ ಹಾಗೂ ಇದನ್ನು ಎದುರಿಸಲು ಕೇಂದ್ರ ಸರ್ಕಾರಿ ತಯಾರಿಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಆಸ್ಪತ್ರೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ, ಮಕ್ಕಳು , ವಿದ್ಯಾರ್ಥಿಗಳ ಆರೋಗ್ಯ, ಮುಂಬರುವ ಮುಂಗಾರು, ಬೆಳೆಗಳ ಮೇಲೆ ಹವಾಮಾನದ ಪರಿಣಾಮ ಸೇರಿದಂತೆ ಸಮಗ್ರ ಚರ್ಚೆ ನಡೆಸಲಾಗಿದೆ. ಇದೇ ವೇಳೆ ಮೋದಿ, ಹಲವು ಸೂಚನೆಯನ್ನು ನೀಡಿದ್ದಾರೆ.

ಉರಿ ಬಿಸಿಲಿನ ವಾತಾವರಣ ಇರುವುದರಿಂದ ಕುಡಿಯುವ ನೀರು, ಬೆಳೆಗಳಿಗೆ ನೀರು ಸೇರಿದಂತೆ ನೀರಿನ ಪೂರೈಕೆ ಯಾವುದೇ ಕಾರಣಕ್ಕೂ ವ್ಯತ್ಯಯವಾಗಬಾರದು ಎಂದು ಮೋದಿ ಸೂಚಿಸಿದ್ದಾರೆ. ಇದೇ ವೇಳೆ ತುರ್ತು ಪರಿಸ್ಥಿತಿಗಳಿಗೆ ರಾಜ್ಯಗಳು ಯಾವ ರೀತಿ ತಯಾರಿ ಮಾಡಿಕೊಂಡಿದೆ? ಉರಿ ಬಿಸಿಲಿನ ವಾತಾರಣವಕ್ಕೆ ಸಂಬಂಧಿಸಿ, ವಿಪತ್ತುಗಳಿಗೆ ದೇಶಾದ್ಯಂತ ನಡೆಯುತ್ತಿರುವ ಹಲವು ಪ್ರಯತ್ನ ಹಾಗೂ ತಯಾರಿಗಳ ಕುರಿತು ಪ್ರಧಾನಿ ಮೋದಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

Tap to resize

Latest Videos

 

Heat Wave: ಹೆಚ್ಚುವ ತಾಪಮಾನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು ?

ವೈದ್ಯಕೀಯ ತಂಡ, ಆಸ್ಪತ್ರೆ, ಅಗ್ನಿಶಾಮಕ, ವಿಪತ್ತು ತಂಡಗಳು ಸದಾ ಕಲಾ  ಸನ್ನದ್ಧವಾಗಿರುವಂತೆ ಮೋದಿ ಸೂಚಿಸಿದ್ದಾರೆ. ಬಿಸಿ ವಾತಾವರಣ ಹೆಚ್ಚಿರುವ ಕಾರಣ ಕಾಡ್ಗಿಚ್ಚು ಸೇರಿದಂತೆ ಹಲವು ಸಮಸ್ಯೆಗಳು ತಲೆದೋರುವ ಸಾಧ್ಯತೆ ಇದೆ. ಹೀಗಾಗಿ ಈ ಕುರಿತು ಪ್ರಧಾನಿ ಮೋದಿ ತಯಾರಿಗಳನ್ನು ಪರಿಶೀಲಿಸಿದರು. ವಿಪರೀತ ಬಿಲಿಲಿನ ವಾತಾವರಣ ಮಕ್ಕಳಲ್ಲಿ ತೀವ್ರ ಸಮಸ್ಯೆತರಲಿದೆ. ಹೀಗಾಗಿ ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆಗೆ ಕಡಿವಾಣ ಹಾಕಲು ಮೋದಿ ಸೂಚಿಸಿದ್ದಾರೆ.

ಬಿಸಿ ವಾತಾವರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ(IMD) ಪ್ರತಿ ದಿನ ಹವಾಮಾನ ಕುರಿತು ವರದಿ ನೀಡಬೇಕು. ಇದರಿಂದ ವಾತಾವರಣದಲ್ಲಿನ ಬದಲಾವಣೆ, ತಾಪಮಾನ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ. ಇಷ್ಟೇ ಅಲ್ಲ ಈ ವರದಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಿದೆ ಎಂದಿದ್ದಾರೆ.ಟಿವಿ ವಾಹಿನಿ, ರೇಡಿಯಾ, ಪತ್ರಿಕೆಗಳಲ್ಲಿ ಹವಾಮಾನ ಮಾಹಿತಿಗಳನ್ನು ಜನರಿಗೆ ನೀಡಬೇಕು ಎಂದು ಸೂಚಿಸಿದ್ದಾರೆ.

ಮಾನವ ಬದುಕುಳಿಯುವ ಮಿತಿಗಿಂತ ಹೆಚ್ಚಿನ ಶಾಖದ ಅಲೆಗಳನ್ನು ಭಾರತ ಅನುಭವಿಸಬಹುದು: ವಿಶ್ವ ಬ್ಯಾಂಕ್

ಎಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ನಿರ್ವಹಣೆ ಕುರಿತು ಪರಿಶೀಲನೆ ನಡೆಸಬೇಕು. ಅಗ್ನಿಶಾಮಕ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಿರಬೇಕು. ಈ ಮೂಲಕ ಪರಿಸ್ಥಿತಿ ಎದುರಿಸಲು ಸದಾ ಕಾಲ ಸನ್ನದ್ದವಾಗಿರಬೇಕು ಎಂದು ಸೂಚಿಸಿದರು. ಇತ್ತ ಅರಣ್ಯ ಇಲಾಖೆ ಜೊತೆ ನಿಕಟ ಸಂಪರ್ಕ ಬೇಕು.ಆಹಾರ ಸಂಗ್ರಹಣೆ ಸವಾಲುಗಳ ಕುರಿತು ಮೋದಿ ಚರ್ಚಿಸಿದರು.  
 

click me!