Cockroach Janata Party ಅಸಲಿ ಮುಖ ಬಯಲು?: ಪ್ರಧಾನಿ ಮೋದಿ ವಿರುದ್ಧ ಸಂಚಿಗೆ ಗಡಿಯಾಚೆ ಪ್ಲಾನ್? ರಾಜೀವ್ ಚಂದ್ರಶೇಖರ್ ಸ್ಫೋಟಕ ಹೇಳಿಕೆ!

Kannadaprabha News   | Kannada Prabha
Published : May 24, 2026, 09:55 AM IST
Rajeev chandrashekha on cocroach janata party

ಸಾರಾಂಶ

ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರು, 'ಕಾಕ್ರೋಚ್‌ ಜನತಾ ಪಾರ್ಟಿ'ಯು ಭಾರತವನ್ನು ಅಸ್ಥಿರಗೊಳಿಸಲು ಮತ್ತು ಪ್ರಧಾನಿ ಮೋದಿಯವರನ್ನು ಗುರಿಯಾಗಿಸಲು ನಡೆಸುತ್ತಿರುವ ಗಡಿಯಾಚೆಗಿನ ಕಾರ್ಯಾಚರಣೆಯ ಭಾಗವಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ವಿಪಕ್ಷಗಳ ಕೆಲವು ವಿಪಕ್ಷಗಳ ಕುಮ್ಮಕ್ಕು?

ತಿರುವನಂತಪುರಂ: ‘ಕಾಕ್ರೋಚ್‌ ಜನತಾ ಪಾರ್ಟಿಯು ಗಡಿಯಾಚೆಗಿನ ಪ್ರಭಾವಿ ಕಾರ್ಯಾಚರಣೆಯ ಒಂದು ಭಾಗ. ಇದು ಭಾರತವನ್ನು ಅಸ್ಥಿರಗೊಳಿಸುವ ಉದ್ದೇಶ ಹೊಂದಿದೆ. ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು ಇದನ್ನು ನಡೆಸಲಾಗುತ್ತಿದೆ’ ಎಂದು ಕೇರಳ ಬಿಜೆಪಿ ಅಧ್ಯಕ್ಷ, ಶಾಸಕ ರಾಜೀವ್‌ ಚಂದ್ರಶೇಖರ್‌ ಶನಿವಾರ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಕಾಕ್ರೋಚ್‌ ಪಾರ್ಟಿಯು ಗಡಿಯಾಚೆಗಿನ ಕಾರ್ಯಾಚರಣೆಯ ಒಂದು ಭಾಗ. ವಿಪಕ್ಷಗಳ ಕೆಲವು ಭಾಗಗಳಿಂದ ಇದಕ್ಕೆ ಸಹಾಯ ದೊರೆಯುತ್ತಿದೆ. ಸಾಮಾಜಿಕ ಮಾಧ್ಯಮ, ಬಾಟ್‌ಗಳು, ಎಐ ಮತ್ತು ಅದರ ಶಸ್ತ್ರಾಸ್ತ್ರೀಕರಣದ ಯುಗದಲ್ಲಿ, ಇಂಥ ಕಾರ್ಯತಂತ್ರಗಳು ದೇಶವನ್ನು ಅಸ್ಥಿರಗೊಳಿಸುವ ಅಪಾಯಕಾರಿ ಮಾರ್ಗಗಳಾಗಿವೆ. ಯಾವುದೇ ಜಿರಳೆ, ವಿಪಕ್ಷದ ರಾಜಕಾರಣಿ, ಮೋದಿ ದ್ವೇಷಿ ಜೋಕರ್ ಅಥವಾ ವಿದೇಶಿ ಹಿತಾಸಕ್ತಿ ದೇಶವನ್ನು ‘ವಿಕಸಿತ ಭಾರತ’ವನ್ನಾಗಿಸುವ ಸಂಕಲ್ಪವನ್ನು ಹಳಿತಪ್ಪಿಸಲು ಸಾಧ್ಯವಿಲ್ಲ’ ಎಂದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: Cockroach Janata Party ಅಸಲಿ ಮುಖ ಬಯಲು? - ಪ್ರಧಾನಿ ಮೋದಿ ವಿರುದ್ಧ ಸಂಚಿಗೆ ಗಡಿಯಾಚೆ ಪ್ಲಾನ್? ರಾಜೀವ್ ಚಂದ್ರಶೇಖರ್ ಸ್ಫೋಟಕ ಹೇಳಿಕೆ!
ಇರಾನ್-ಅಮೇರಿಕಾ ಶಾಂತಿ ಒಪ್ಪಂದದ ವೇಳೆ ವೈಟ್‌ಹೌಸ್‌ ಮೇಲೆ ಗುಂಡಿನದಾಳಿ; ಟೇಬಲ್ ಕೆಳಗೆ ಅಡಗಿಕೊಂಡ ಟ್ರಂಪ್ ಸೇಫ್!