ಪ್ರಧಾನಿಗೆ ಝಲ್ಮುರಿ ಕೊಟ್ಟವನಿಗೆ ಪಾಕ್​, ಬಾಂಗ್ಲಾದಿಂದ ಜೀವ ಬೆದರಿಕೆ: ಬಾಂಬ್​ ಸ್ಫೋಟಿಸುವ ಭಯ

Published : May 23, 2026, 06:06 PM IST
Vikram Sahu

ಸಾರಾಂಶ

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿಗೆ ಝಲ್ಮುರಿ ನೀಡಿದ್ದ ಅಂಗಡಿ ಮಾಲೀಕ ವಿಕ್ರಮ್ ಸಾಹುಗೆ ಈಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಕೊಲೆ ಬೆದರಿಕೆಗಳು ಬರುತ್ತಿವೆ. ಶಸ್ತ್ರಾಸ್ತ್ರಗಳನ್ನು ತೋರಿಸಿ, ಬಾಂಬ್ ಸ್ಫೋಟಿಸುವುದಾಗಿ ಬೆದರಿಸುತ್ತಿದ್ದು, ಈ ಘಟನೆಯಿಂದ ಭಯಭೀತರಾದ ವಿಕ್ರಮ್ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಝಲ್ಮುರಿ (ಚುರುಮುರಿ) ನೀಡಿದ್ದ ಅಂಗಡಿಯ ಮಾಲೀಕ ವಿಕ್ರಮ್ ಸಾಹು ರಾತ್ರೋರಾತ್ರಿ ಸಂಚಲನ ಮೂಡಿಸಿದರು. ಸಾಹು ಮತ್ತು ಪ್ರಧಾನಿ ಮೋದಿ ನಡುವಿನ ಸಂಭಾಷಣೆ ಚುನಾವಣೆಯ ಉದ್ದಕ್ಕೂ ಚರ್ಚೆಯ ವಿಷಯವಾಯಿತು. ಕೊನೆಗೆ ಕಾಂಗ್ರೆಸ್​ ಸೇರಿ ವಿರೋಧ ಪಕ್ಷಗಳ ಬೆಂಬಲಿಗರು ಈ ಅಂಗಡಿಯವ ಮೋದಿಯ ಭದ್ರತಾ ಸಿಬ್ಬಂದಿ ಎನ್ನುವ ಸುಳ್ಳು ವಿಷಯವನ್ನೂ ಹರಡಿದ್ದರು. ಏನೋ ಸುಳ್ಳು ಸುದ್ದಿ ಹರಡಿದರೂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಬಹುಮತದಿಂದ ಗೆಲ್ಲುವುದನ್ನು ಯಾರಿಂದಲೂ ತಡೆಯಲು ಆಗಲಿಲ್ಲ.

ಮಮತಾ ಹೋದ ಮೇಲೆ ಪಾಕಿಗಳು ತಲ್ಲಣ

ಆದರೆ, ಇದೀಗ ಈ ಯುವಕನಿಗೆ ಜೀವ ಬೆದರಿಕೆ ಬರುತ್ತಿವೆ. ಅದು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ. ಅಷ್ಟಕ್ಕೂ ಮಮತಾ ಬ್ಯಾನರ್ಜಿ ಅವರ ಆಡಳಿತ ಅವಧಿಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರು ಪಶ್ಚಿಮ ಬಂಗಾಳವೂ ತಮ್ಮದೇ ಎನ್ನುವ ರೀತಿಯಲ್ಲಿ ಖುಷಿಯಿಂದ ಅಧಿಕಾರ ಚಲಾಯಿಸುತ್ತಿದ್ದರು. ಅದಕ್ಕೆ ದೀದೀ ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದರು. ಆದರೆ ಇದೀಗ ಎಲ್ಲವೂ ಬದಲಾಗಿದೆ. ನುಸುಳುಕೋರರನ್ನು ಬಹುತೇಕಮಟ್ಟಿಗೆ ಹೊರಗಟ್ಟಲಾಗಿದೆ. ಇತ್ತ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ದೇಶದ ಒಳಗಿರುವವರಿಗೇ ಉರಿ ಹೊತ್ತಿದ್ದರೆ ಇನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರ ಗತಿ ಏನಾಗಿರಬೇಡ. ಏನೂ ಮಾಡದ ಸ್ಥಿತಿಯಲ್ಲಿ ಇರುವ ಅವರ ಸಿಟ್ಟು ಈಗ ಮೋದಿ ಝಲ್ಮುರಿ ತಿನ್ನಿಸಿದವನ ಮೇಲೆ ಹೋಗಿದೆ.

ಶಸ್ತ್ರಾಸ್ತ್ರ ತೋರಿಸಿ ಬೆದರಿಕೆ

ಯುವಕ ವಿಕ್ರಮ್ ಸಾಹು ಹಾಗೂ ಅವರ ಕುಟುಂಬದವರು ಭಯಭೀತನಾಗಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ನನಗೆ ವಿಡಿಯೋ ಮತ್ತು ಫೋನ್ ಕರೆಗಳ ಮೂಲಕ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ವಿಕ್ರಮ್ ಸಾಹು ಹೇಳಿದ್ದಾರೆ. ಅವರು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಕರೆ ಮಾಡುವ ಜನರು ಬೆದರಿಕೆ ಸನ್ನೆಗಳನ್ನು ಮಾಡುತ್ತಿದ್ದಾರೆ ಮತ್ತು ಬೆದರಿಸಲು ಶಸ್ತ್ರಾಸ್ತ್ರಗಳನ್ನು ಸಹ ತೋರಿಸುತ್ತಿದ್ದಾರೆ ಎಂದಿದ್ದಾರೆ. ನಾನು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ನನಗೆ ಎಚ್ಚರಿಸಿರುವುದಾಗಿ ಭಯದಿಂದ ನುಡಿಯುತ್ತಿದ್ದಾರೆ.

ಬಾಂಬ್​ ಬೆದರಿಕೆ

ನಾನು ಹಲವಾರು ಕರೆಗಳಿಗೆ ಉತ್ತರಿಸಲಿಲ್ಲ. ಆದರೆ ಫೋನ್ ರಿಂಗಣಿಸುತ್ತಲೇ ಇರುತ್ತದೆ. ಕರೆ ಮಾಡಿದವರು ನಿಂದಿಸುತ್ತಿದ್ದಾರೆ ಮತ್ತು ಅಸಭ್ಯ ಭಾಷೆ ಬಳಸುತ್ತಿದ್ದಾರೆ. ನೀನಿನ್ನೂ ಜೀವಂತವಾಗಿ ಇದ್ದೀಯಾ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಭಯದಿಂದ ನುಡಿದಿದ್ದಾರೆ ವಿಕ್ರಮ್. ಬಾಂಬ್ ಸ್ಫೋಟದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕುವ ವಾಟ್ಸಾಪ್ ಸಂದೇಶಗಳು ಸಹ ಬಂದಿವೆ. ಆದರೆ ಪ್ರಧಾನಿ ಅವರು ತಮ್ಮ ಅಂಗಡಿಗೆ ಬಂದಿರುವುದಕ್ಕೆ ಈ ಬೆದರಿಕೆ ಎಂದು ಅವರು ಹೇಳುತ್ತಿಲ್ಲ. ಆದರೆ ಈ ಘಟನೆ ಬಳಿಕ ಹೀಗೆಲ್ಲಾ ಆಗುತ್ತಿದೆ ಎಂದಿದ್ದಾರೆ.

ಸಾಕಷ್ಟು ಭದ್ರತೆ

ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬಂದ ಈ ಬೆದರಿಕೆಗಳಿಂದ ಅವರು ಮತ್ತು ಅವರ ಕುಟುಂಬ ತೀವ್ರವಾಗಿ ಭಯಭೀತರಾಗಿದ್ದಾರೆ. ಆದಾಗ್ಯೂ, ವಿಷಯದ ಗಂಭೀರತೆಯನ್ನು ಗಮನಿಸಿದರೆ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ವಿಕ್ರಮ್‌ಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಮತ್ತು ಅವರ ಕಾವಲು ಕಾಯಲು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರಧಾನಿಗೆ ಯಾವುದೇ ನಿರ್ದಿಷ್ಟ ವಿನಂತಿಗಳನ್ನು ಮಾಡಲು ಇದೆಯೇ ಎಂದು ಕೇಳಿದಾಗ, ಸರ್ಕಾರವು ಅವರಿಗೆ ಸಾಕಷ್ಟು ಭದ್ರತೆಯನ್ನು ಒದಗಿಸಬೇಕು ಎಂದು ವಿಕ್ರಮ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
ಪೆಟ್ರೋಲ್ ದರ ₹108ಕ್ಕೆ ಏರಿಕೆ: ನಮ್ಮದೇ ದೇಶದ ಈ ಭಾಗದಲ್ಲಿ ಪ್ರತಿ ಲೀ. ಪೆಟ್ರೋಲ್‌ಗೆ ಕೇವಲ 86 ರೂ. ಬೆಲೆ!