ತಿರುಪತಿ ಲಡ್ಡು ವಿವಾದ: ಯುಪಿ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಯೋಗಿ ಸರ್ಕಾರ ಆದೇಶ

By Kannadaprabha News  |  First Published Sep 26, 2024, 9:19 AM IST

ಉತ್ತರ ಪ್ರದೇಶದಲ್ಲಿನ ಎಲ್ಲ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಬಾಣಸಿಗರು ಮತ್ತು ಸಪ್ಪೆಯರ್‌ಗಳು ಕೆಲಸದ ಅವಧಿಯಲ್ಲಿ ಮಾಸ್ಕ್ ಮತ್ತು ಕೈಗೆ ಗೌಸ್ ಧರಿಸಬೇಕು. ಹೋಟೆಲ್‌ನಲ್ಲಿ ಸಿಸಿಟೀವಿಗಳನ್ನು ಅಳವಡಿಸಬೇಕು. ಬಾಣಸಿಗರು ಮತ್ತು ಸಪ್ಲೈರ್‌ಗಳ ಜೊತೆಗೆ ನಿರ್ವಾಹಕರು, ಮಾಲೀಕರು ಮತ್ತು ವ್ಯವಸ್ಥಾಪಕರು ತಮ್ಮ ಹೆಸರುಗಳನ್ನು ಮತ್ತು ವಿಳಾಸಗಳನ್ನು ಹೋಟೆಲ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದ ಯೋಗಿ ಸರ್ಕಾರ 


ಲಖನೌ/ಶಿಮ್ಲಾ(ಸೆ.26): ತಿರುಮಲ ಲಡ್ಡು ಕಲಬೆರಕೆ ವಿವಾದ ಹಾಗೂ ಉತ್ತರ ಪ್ರದೇಶದ ವಿವಿಧೆಡೆ ತಿಂಡಿ/ಪಾನೀಯಗಳಲ್ಲಿ ಮೂತ್ರ ಬೆರೆಸಿದ ವಿವಾದ ಉಂಟಾದ ಕಾರಣ ಅವರ ಹೊಣೆಗಾರಿಕೆ ಹೆಚ್ಚಿಸಲು ಹಾಗೂ ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಲು ಕಡ್ಡಾಯವಾಗಿ ಮಾಲೀಕರು/ ನೌಕರರ ಹೆಸರು ಪ್ರದರ್ಶನಕ್ಕೆ ಬಿಜೆಪಿ ಆಡಳಿ ತದ ಉ.ಪ್ರದೇಶ, ಕೈ ಆಡಳಿತದ ಹಿಮಾಚಲ ಪ್ರದೇಶ ಸರ್ಕಾರಗಳು ಆದೇಶಿಸಿವೆ.

'ಉತ್ತರ ಪ್ರದೇಶದಲ್ಲಿನ ಎಲ್ಲ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಬಾಣಸಿಗರು ಮತ್ತು ಸಪ್ಪೆಯರ್‌ಗಳು ಕೆಲಸದ ಅವಧಿಯಲ್ಲಿ ಮಾಸ್ಕ್ ಮತ್ತು ಕೈಗೆ ಗೌಸ್ ಧರಿಸಬೇಕು. ಹೋಟೆಲ್‌ನಲ್ಲಿ ಸಿಸಿಟೀವಿಗಳನ್ನು ಅಳವಡಿಸಬೇಕು. ಬಾಣಸಿಗರು ಮತ್ತು ಸಪ್ಲೈರ್‌ಗಳ ಜೊತೆಗೆ ನಿರ್ವಾಹಕರು, ಮಾಲೀಕರು ಮತ್ತು ವ್ಯವಸ್ಥಾಪಕರು ತಮ್ಮ ಹೆಸರುಗಳನ್ನು ಮತ್ತು ವಿಳಾಸಗಳನ್ನು ಹೋಟೆಲ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು' ಎಂದು ಯೋಗಿ ಸರ್ಕಾರ ಸೂಚಿಸಿದೆ.

Tap to resize

Latest Videos

ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬೆರಕೆ ತಪ್ಪು: ಅಸಾದುದ್ದೀನ್ ಒವೈಸಿ

ಹಿಮಾಚಲದಲ್ಲೂ ಆದೇಶ: 

ಬುಧವಾರ ಇದೇ ಮಾದರಿಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಕೂಡ ಆದೇಶ ಹೊರಡಿಸಿದ್ದು, ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ಹೋಟೆಲ್/ ಅಂಗಡಿ ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಎಲ್ಲ ಬೀದಿ ಬದಿ ವ್ಯಾಪಾರಿಗಳು ತಮ್ಮ ಐಡೆಂಟಿಟಿ ಕಾರ್ಡ್ ಪ್ರದರ್ಶಿಸಬೇಕು ಎಂದು ಆದೇಶಿಸಿದೆ.

click me!