ಚುನಾವಣೆಗೆ 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಟಿಎಂಸಿ, ಸಿಎಂ ಮಮತಾ ನಿರ್ಧಾರಕ್ಕೆ ಕಾಂಗ್ರೆಸ್ ಕೆಂಡ!

By Suvarna NewsFirst Published Mar 10, 2024, 3:48 PM IST
Highlights

ಲೋಕಸಭಾ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದಂತೆ ಮೈತ್ರಿ ಮುರಿದು ಏಕಾಂಗಿ ಸ್ಪರ್ಧೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಈ ನಿರ್ಧಾರ ಕಾಂಗ್ರೆಸ್ ಕೆರಳಿಸಿದೆ. 
 

ನವದೆಹಲಿ(ಮಾ.10) ಇಂಡಿಯಾ ಮೈತ್ರಿ ಕೂಟದಿಂದ ಹೊರಬಂದ ಪಕ್ಷಗಳ ಪೈಕಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪ್ರಮುಖ ಪಕ್ಷವಾಗಿದೆ. ಮೊದಲೇ ಘೋಷಿಸಿದಂತೆ ಇದೀಗ ಟಿಎಂಸಿ ಲೋಕಸಭಾ ಚುನಾವಣೆಗೆ ಏಕಾಂಗಿ ಸ್ಪರ್ಧೆ ರೆಡಿಯಾಗಿದೆ. ಇಂದು ಬಂಗಾಳದ ಎಲ್ಲಾ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ, ಲೋಕಸಭಾ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಕಣಕ್ಕಿಳಿಸಿ ಠಕ್ಕರ್ ನೀಡಿದೆ. ಮೈತ್ರಿ ಮುರಿದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವುದು ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಇಂಡಿಯಾ ಒಕ್ಕೂಟ ಸಂಘಟಿತ ಹೋರಾಟ ಮಾಡಲು ಕಾಂಗ್ರೆಸ್ ಬಯಸುತ್ತಿದೆ. ಆದರೆ ಮಮತಾ ಬ್ಯಾನರ್ಜಿ ಏಕಾಂಗಿ ಸ್ಪರ್ಧೆ ಘೋಷಿಸಿ ಮೈತ್ರಿ ವಿರುದ್ದ ನಿಂತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಮಾತುಕತೆ ಮೂಲಕ ಸೀಟು ಹಂಚಿಕೆ ಅಂತಿಮಗೊಳಿಸಲು ಕಾಂಗ್ರೆಸ್ ಬಯಸಿತ್ತು. ಟಿಎಂಸಿ ಬೇಡಿಕೆಯನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲು ಕಾಂಗ್ರಸ್ ನಿರ್ದರಿಸಿತ್ತು. ಮಾತುಕತೆ ನಡೆಸಿ ಎರಡೂ ಪಕ್ಷಗಳ ಬೇಡಿಕೆಯನ್ನು ಚರ್ಚಿಸಿ ಒಂದು ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಬಯಸಿತ್ತು. ಟಿಎಂಸಿ ಎಲ್ಲಾ ಬೇಡಿಕೆಯನ್ನು ಪುರಸ್ಕರಿಸಿ ಚರ್ಚಿಸುವ ಒಲವನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ಮಮತಾ ಬ್ಯಾನರ್ಜಿ ಏಕಾಂಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

 

 

ಕೊನೆಗೂ ಸಂದೇಶ್‌ಖಾಲಿ ಆರೋಪಿ ಶೇಖ್‌ ಸಿಬಿಐ ವಶಕ್ಕೆ: ರೇಪ್ ಸಂತ್ರಸ್ತರಿಗೆ ಮೋದಿ ಸಂತೈಕೆ

ಕಾಂಗ್ರೆಸ್ ಈಗಾಗಲೇ ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಇದೇ ರೀತಿ ಸೀಟು ಹಂಚಿಕೆ ಮಾಡಿದೆ. ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ ನೀಡಿ ಸೀಟು ಹಂಟಿಕೆ ಮಾಡಲಾಗಿದೆ. ಆದರೆ ಟಿಎಂಸಿ ಈ ನಿರ್ಧಾರದ ಹಿಂದೆ ಯಾವ ಒತ್ತಡವಿದೆ ಅನ್ನೋದು ನನಗೆ ಗೊತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಬಯಸಿದ್ದೆವು. ಆದರೆ ಮಮತಾ ಬ್ಯಾನರ್ಜಿ ನಿರ್ಧಾರ ಬದಲಿಸಿದ್ದಾರೆ. ಮುಂದೇನಾಗುತ್ತೇ ನೋಡೋಣ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಇಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಬಂಗಾಳದ 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ. ಅಭ್ಯರ್ಥಿಗಳು ಹಾಗೂ ಕ್ಷೇತ್ರದ ವಿವರ ಇಲ್ಲಿದೆ.
ಡೈಮಂಡ್ ಹಾರ್ಬರ್: ಅಭಿಷೇಕ್ ಬ್ಯಾನರ್ಜಿ
ಬಹರಂಪುರ: ಯೂಸುಫ್ ಪಠಾಣ್
ಶ್ರೀರಾಂಪುರ: ಕಲ್ಯಾಣ್ ಬ್ಯಾನರ್ಜಿ
ಅಸನ್ಸೋಲ್: ಶತ್ರುಘ್ನ ಸಿನ್ಹಾ
ಅಲಿಪುರ್ದೂರ್: ಪ್ರಕಾಶ್ ಚಿಕ್ಕ ಬರೈಕ್
ಜಲ್ಪೈಗುರಿ: ನಿರ್ಮಲ್ ಚಂದ್ರ ರಾಯ್
ಡಾರ್ಜಿಲಿಂಗ್: ಗೋಪಾಲ್ ಲಾಮಾ
ರಾಯಗುಂಜ್: ಕೃಷ್ಣ ಕಲ್ಯಾಣಿ
ಬಲೂರ್ಘಾಟ್: ಬಿಪ್ಲಬ್ ಮಿತ್ರ
ಮಾಲ್ಡಾ ಉತ್ತರ: ಪ್ರಸೂನ್ ಬ್ಯಾನರ್ಜಿ
ಮಾಲ್ಡಾ ದಕ್ಷಿಣ: ಶಹನವಾಜ್ ಅಲಿ ರೈಹಾನ್

ಲೋಕಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನ ಗೆಲ್ಲುವುದು ಅನುಮಾನ, ಭವಿಷ್ಯ ನುಡಿದ ಸಿಎಂ ಮಮತಾ!

ಜಂಗೀಪುರ: ಖಲೀಲುರ್ ರೆಹಮಾನ್
ಮುರ್ಷಿದಾಬಾದ್: ಅಬು ತೆಹರ್ ಖಾನ್
ಕೃಷ್ಣನಗರ: ಮಹುವಾ ಮೊಯಿತ್ರಾ
ರಣಘಾಟ್: ಮುಕುಟ್ಮಣಿ ಅಧಿಕಾರಿ
ಬಂಗಾವ್: ಬಿಸ್ವಜಿತ್ ದಾಸ್
ಬ್ಯಾರಕ್‌ಪುರ: ಪಾರ್ಥ ಭೌಮಿಕ್
ದಮ್ ದಮ್: ಸೌಗತ ರಾಯ್
ಬರಾಸತ್: ಕಾಕಲಿ ಘೋಷ್ ದಸ್ತಿದಾರ
ಬಸಿರ್ಹತ್: ಹಾಜಿ ನೂರುಲ್ ಇಸ್ಲಾಂ
ಜೋಯನಗರ: ಪ್ರತಿಮಾ ಮೊಂಡಲ್
ಮಥುರಾಪುರ: ಬಾಪಿ ಹಲ್ದಾರ್
ಜಾದವ್ಪುರ್: ಸಯೋನಿ ಘೋಷ್
ಕೋಲ್ಕತ್ತಾ ದಕ್ಷಿಣ: ಮಾಲಾ ರಾಯ್
ಕೋಲ್ಕತ್ತಾ ಉತ್ತರ: ಸುದೀಪ್ ಬಂಡೋಪಾಧ್ಯಾಯ
ಹೌರಾ: ಪ್ರಸೂನ್ ಬಂದೋಪಾಧ್ಯಾಯ
ಉಲುಬೇರಿಯಾ: ಸಜ್ದಾ ಅಹ್ಮದ್
ಹೂಗ್ಲಿ: ರಚನಾ ಬ್ಯಾನರ್ಜಿ
ಮೇದಿನಿಪುರ: ಜೂನ್ ಮಾಲಿಯಾ
ಪುರುಲಿಯಾ: ಶಾಂತಿರಾಮ್ ಮಹತೋ
ಬಂಕುರಾ: ಅರೂಪ್ ಚಕ್ರವರ್ತಿ
ಬರ್ಧಮಾನ್ ಉತ್ತರ: ಡಾ.ಶರ್ಮಿಳಾ ಸರ್ಕಾರ್
ಬರ್ಧಮಾನ್-ದುರ್ಗಾಪುರ: ಕೀರ್ತಿ ಆಜಾದ್
ಬೋಲ್ಪುರ್: ಅಸಿತ್ ಕುಮಾರ್ ಮಲ್
ಬಿರ್ಭುಮ್: ಶತಾಬ್ದಿ ರಾಯ್
ಬಿಷ್ಣುಪುರ: ಸುಜಾತಾ ಖಾನ್
ಕೂಚ್‌ಬೆಹರ್: ಜಗದೀಶ್ ಚಂದ್ರ ಬಸುನಿಯಾ
 

click me!