ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜೈಲೇ ಗತಿ, ಸುಪ್ರೀಂ ಕೋರ್ಟ್‌ನಲ್ಲೂ ಆಪ್‌ಗೆ ಹಿನ್ನಡೆ!

By Suvarna NewsFirst Published Apr 15, 2024, 3:37 PM IST
Highlights

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೋಸ್ ಅವೆನ್ಯೂ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎರಡಲ್ಲೂ ಹಿನ್ನಡೆಯಾಗಿದೆ. ಕೇಜ್ರಿವಾಲ್‌ಗೆ ರಿಲೀಫ್ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ, ಅವೆನ್ಯೂ ಕೋರ್ಟ್ ಎಪ್ರಿಲ್ 23ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ.
 

ನವದೆಹಲಿ(ಏ.15) ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಇದೀಗ ಅತೀ ದೊಡ್ಡ ಹಿನ್ನಡೆಯಾಗಿದೆ. ಒಂದೆಡೆ ರೋಸ್ ಅವೆನ್ಯೂ ಕೋರ್ಟ್ ಕೇಜ್ರಿವಾಲ್ ಬಂಧನ ಅವಧಿಯನ್ನು ಏಪ್ರಿಲ್ 23ರ ವರೆಗೆ ವಿಸ್ತರಿಸಿದೆ. ಇತ್ತ ಸುಪ್ರೀಂ ಕೋರ್ಟ್, ಕೇಜ್ರಿವಾಲ್‌ಗೆ ರಿಲೀಫ್ ನೀಡಲು ನಿರಾಕರಿಸಿದೆ. ಚುನಾವಣೆ ವೇಳೆ ಕೇಜ್ರಿವಾಲ್ ಬಂಧಿಸಿರುವ ಇಡಿ ಅಧಿಕಾರಿಗಳು ಅಸಂವಿದಾನಿಕ ಕ್ರಮ ಕೈಗೊಂಡಿದ್ದಾರೆ. ಚುನಾವಣೆ ಕಾರಣದಿಂದ ಕೇಜ್ರಿವಾಲ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಅನ್ನೋ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್ ಇಡಿ ಅದಿಕಾರಿಗಳ ಪ್ರತಿಕ್ರಿಯೆ ನೋಟಿಸ್ ನೀಡಿದೆ. ಪ್ರಕರಣವನ್ನು ಏಪ್ರಿಲ್ 29ಕ್ಕೆ ವಿಚಾರಣೆ ನಡೆಸುವುದಾಗಿ ಮುಂದೂಡಿದೆ. 

ಸುಪ್ರೀಂ ಕೋರ್ಟ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಪರ ಅಭಿಷೇಕ್ ಮನು ಸಿಂಗ್ವಿ ಹಾಜರಾಗಿ ವಾದ ಮಂಡಿಸಿದರು. ಕೇಜ್ರಿವಾಲ್ ಅವರನ್ನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಂತೆ ತಡೆಯಲು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದು ರಾಜಕೀಯ ಪಿತೂರಿ ಎಂದು ಸಿಂಗ್ವಿ ವಾದಿಸಿದ್ದಾರೆ. ಹೀಗಾಗಿ ತಕ್ಷಣವೇ ಕೇಜ್ರಿವಾಲ್ ಅವರನ್ನು ಬಂಧನದಿಂದ ಬಿಡುಗಡ ಮಾಡಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸುಪ್ರೀಂ ಕೋರ್ಟ್ ಅವಕಾಶ ನೀಡಬೇಕು ಎಂದು ಸಿಂಗ್ವಿ ವಾದಿಸಿದ್ದಾರೆ. ಇದೇ ವೇಳೆ ಈ ವಿಚಾರಣೆಯನ್ನು ತ್ವರಿತವಾಗಿ ಮಾಡಲು ಮನವಿ ಮಾಡಿದ್ದಾರೆ.

ಪಕ್ಷ ತೊರೆದ ರಾಜ್‌ಕುಮಾರ್ ಆನಂದ ಮನೆ ಮುಂದೆ ಆಪ್ ಕಾರ್ಯಕರ್ತರ ಪ್ರತಿಭಟನೆ

ಕೇಜ್ರಿವಾಲ್ ವಾದವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ತ್ವರಿತ ವಿಚಾರಣೆಯನ್ನೂ ಅಲ್ಲಗೆಳೆದಿದೆ. ಈ ಕುರಿತು ಇಡಿ ಅಧಿಕಾರಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಜೊತೆಗೆ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದೆ. ಇಡಿ ಅಧಿಕಾರಿಗಳು ಚುನಾವಣೆ ಸಮಯ ನೋಡಿ ಬಂಧಿಸಿದ್ದಾರೆ. ಬಂಧನ ಸಮಯ ಹಾಗೂ ಪರಿಸ್ಥತಿಯನ್ನು ಕೋರ್ಟ್ ಪರಿಗಣಿಸಬೇಕು ಅನ್ನೋ ಕೇಜ್ರಿವಾಲ್ ವಾದವನ್ನು ಆಲಿಸಿದ ಕೋರ್ಟ್, ಈ ಕುರಿತು ಇಡಿಗೆ ಪ್ರತಿಕ್ರಿಯೆ ನೀಡಲು ಸೂಚಿಸಿದೆ.  

ಇತ್ತ ಕೇಜ್ರಿವಾಲ್ ಬಂಧನ ಅವಧಿಯನ್ನು ಏಪ್ರಿಲ್ 15ರ ವರೆಗೆ ರೋಸ್ ಅವೆನ್ಯೂ ಕೋರ್ಟ್ ವಿಸ್ತರಿಸಿತ್ತು. ಇಂದು ಅವಧಿ ಅಂತ್ಯಗೊಳ್ಳುತ್ತಿರುವ ಕಾರಣ ಇಡಿ ಅದಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು. ಮತ್ತೆ ಇದೇ ವಾದ ಮಂಡಿಸಿದ್ದ ಕೇಜ್ರಿವಾಲ್ ಪರ ವಕೀಲರು, ಬಿಡುಗೆಡೆಗ ಆಗ್ರಹಿಸಿದ್ದರು. ಆದರೆ ರೋಸ್ ಅವೆನ್ಯೂ ಕೋರ್ಟ್ ಕೂಡ ಕೇಜ್ರಿವಾಲ್‌ಗೆ ರಿಲೀಫ್ ನೀಡಲಿಲ್ಲ. ಎಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ.

ಆಮ್‌ ಆದ್ಮಿ ಪಕ್ಷದ ಭ್ರಷ್ಟಾಚಾರಕ್ಕೆ ‘ಬೇಸತ್ತು’ ದೆಹಲಿ ಮಂತ್ರಿ ರಾಜೀನಾಮೆ

click me!