
ನವದೆಹಲಿ (ಜು.17): ಈಗಾಗಲೇ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿದ್ದ ಉತ್ತರ ಭಾರತದ ರಾಜ್ಯಗಳಿಗೆ ಸೋಮವಾರ ಮತ್ತೊಂದು ಆಘಾತಕಾರಿ ಸುದ್ದು ಬಂದಿದೆ. ಹಿಮಾಚಲ ಪ್ರದೇಶ ಕುಲು ಜಿಲೆಯ ಕಯಾಸ್‌ನಲ್ಲಿ ಮೇಘಸ್ಪೋಟವಾಗಿದ್ದು, ಭಾರೀ ಪ್ರಮಾಣದ ಮಳೆ ಆಗುತ್ತಿದೆ. ಒಬ್ಬ ವ್ಯಕ್ತಿ ಸಾವು ಕಂಡಿದ್ದಾರೆ. ಹಿಮಾಚಲ ಪ್ರದೇಶ ಮಾತ್ರವಲ್ಲದೆ, ಉತ್ತರಾಖಂಡ್‌ನಲ್ಲೂ ಮಳೆ ಸಾಧ್ಯತೆ ಇದೆ ಎನ್ನಲಾಗಿದೆ. ಹವಾಮಾನ ಇಲಾಖೆಯಿಂದ ಈ ಎಚ್ಚರಿಕೆ ನೀಡಲಾಗಿದ್ದು, ಉತ್ತರಾಖಂಡನ 14 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಆಗಿದೆ. ಹರಿದ್ವಾರದಲ್ಲಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ಪಾತ್ರದ ಜನರು ಬೇರೆಡೆಗೆ ಸ್ಥಳಾಂತರವಾಗಲು ಸೂಚನೆ ನೀಡಲಾಗಿದೆ. ಒಟ್ಟು ಎರಡು ದಿನಗಳಕಾಲ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಿಮಾಚಲ ಪ್ರದೇಶದ ಐದು ಜಿಲ್ಲೆಗಳಲ್ಲೂ ಮಳೆ ಮುನ್ಸೂಚನೆ ನೀಡಲಾಗಿದೆ. ಹಿಮಾಚಲ ಪ್ರದೇಶದ ಕುಲುವಿನ ಕಯಾಸ್ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಮೇಘಸ್ಫೋಟ ಸಂಭವಿಸಿದೆ. ಇದರಿಂದ ಒಬ್ಬರು ಸಾವನ್ನಪ್ಪಿದ್ದು, 3 ಮಂದಿ ಗಾಯಗೊಂಡಿದ್ದಾರೆ. 9 ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕುಲುವಿನ ಖಾರಹಾಲ್‌ನಲ್ಲಿ ಮಧ್ಯರಾತ್ರಿ ಮೋಡ ಕವಿದಿದ್ದು, ನೆಯುಲಿ ಶಾಲೆ ಸೇರಿ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ವಾಹನಗಳು ಕೂಡ ಭಾರೀ ನೀರಿನ ಹಿಡಿತಕ್ಕೆ ಸಿಲುಕಿದೆ.
ಇನ್ನೊಂದೆಡೆ ದೆಹಲಿಯಲ್ಲಿ ಯಮುನಾ ನದಿಯ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಮತ್ತೊಂದೆಡೆ, ಉತ್ತರಾಖಂಡ ಮತ್ತು ಯುಪಿಯ ಹಲವು ಜಿಲ್ಲೆಗಳಲ್ಲಿ ಗಂಗಾ ನದಿಯ ನೀರಿನ ಮಟ್ಟವು ಈಗ ಅಪಾಯದ ಮಟ್ಟವನ್ನು ತಲುಪಿದೆ. ಭಾನುವಾರ ಹರಿದ್ವಾರದಲ್ಲಿ ಗಂಗಾನದಿಯ ನೀರಿನ ಮಟ್ಟ 293.15 ಮೀಟರ್‌ನಷ್ಟಿದ್ದರೆ, ಅಪಾಯದ ಮಟ್ಟ 294 ಮೀಟರ್‌ನಷ್ಟಿದೆ. ನದಿಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಬಾಗೇಶ್ವರ ಧಾಮದಲ್ಲಿ ಸಪ್ತಪದಿ ತುಳಿಯುವ ಇಚ್ಛೆ ವ್ಯಕ್ತಪಡಿಸಿದ ಪಬ್‌ಜಿ ಲವರ್ಸ್!
ದೇವಪ್ರಯಾಗದಲ್ಲಿ ಗಂಗಾನದಿಯು 20 ಮೀಟರ್‌ನಷ್ಟು ಎತ್ತರಕ್ಕೆ ಏರಿದ್ದರೆ, ಋಷಿಕೇಶ ತಲುಪುವ ವೇಳೆಗೆ ಮತ್ತೆ 10 ಸೆಂಮೀಟರ್ ಏರಿಕೆಯಾಗಿತ್ತು. ವಾರಣಾಸಿ ಹಾಊ ಪ್ರಯಾಗ್‌ರಾಜ್‌ನ ಘಾಟ್‌ಗಳು ಮುಳುಗಲು ಆರಂಭವಾಗಿದೆ. ಕೆಲವು ಸಣ್ಣ ದೇವಾಲಯಗಳು ಈಗಾಗಲೇ ನೀರಿನಿಂದ ತುಂಬಿವೆ. ಮತ್ತೊಂದೆಡೆ, ಸೋಮವಾರ ಬೆಳಿಗ್ಗೆ 8 ಗಂಟೆಗೆ ಯಮುನಾ ನೀರಿನ ಮಟ್ಟ ದೆಹಲಿಯಲ್ಲಿ 205.50 ಮೀಟರ್ ತಲುಪಿದೆ. ಕಳೆದ ಮೂರು ಗಂಟೆಗಳಲ್ಲಿ 205.45ರ ಮಟ್ಟಕ್ಕೆ ದಾಖಲಾಗಿತ್ತು.
ಪರ್ಫೆಕ್ಟ್ ಫಿಗರ್‌ಗಾಗಿ ಫೋಟೋ ಎಡಿಟ್ ಮಾಡಿದ ಜಾನ್ವಿ ಕಪೂರ್ ಟ್ರೋಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ