
ಸುರಿ(ಮೇ.10): ರೈಲ್ವೆ ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಜನ ಸಾವನ್ನಪ್ಪಿದ ಮಾರನೇ ದಿನವೇ ಮತ್ತೊಂದು ಅಂಥದ್ದೇ ಸಂಭಾವ್ಯ ಅಪಘಾತ ಅದೃಷ್ಟವಶಾತ್ ತಪ್ಪಿದೆ.
ಮಹಿಳೆಯರು, ಮಕ್ಕಳನ್ನು ಒಳಗೊಂಡ 20 ಜನರ ವಲಸಿಗರ ತಂಡ ಜಾರ್ಖಂಡ್‌ನಿಂದ ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಗೆ ಮರಳುತ್ತಿತ್ತು. ಶುಕ್ರವಾರ ರಾತ್ರಿ ಈ ಕಾರ್ಮಿಕರು ಗುಂಪು ಬ್ರಾಂಭನಿ ನದಿಯ ಸೇತುವೆ ಮೇಲೆ ತೆರಳುತ್ತಿದ್ದ ವೇಳೆ ಏದುರಿನಿಂದ ಏಕಾಏಕಿ ತಪಾಸಣಾ ರೈಲೊಂದು ಎದುರಾಗಿದೆ.
ರೈಲಿಲ್ಲವೆಂದು ಹಳಿ ಮೇಲೆ ಮಲಗಿದ್ದ 17 ಮಂದಿ ರೈಲಿಗೆ ಸಿಲುಕಿ ಸಾವು....
ಅದೃಷ್ಟವಶಾತ್ ರೈಲಿನ ಚಾಲಕ, ಇವರನ್ನು ಗಮನಿಸಿ ರೈಲನ್ನು ನಿಲ್ಲಿಸ ಸಂಭಾವ್ಯ ಅವಘಢ ತಪ್ಪಿಸಿದ್ದಾರೆ. ಬಳಿಕ ರೈಲಿನ ಚಾಲಕ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಬಳಿಕ ಇವರನ್ನೆಲ್ಲಾ ರಕ್ಷಿಸಿ ಕರೆದೊಯ್ಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ