ಕೊರೋನಾದೊಂದಿಗೆ ಬದುಕು, ತಾಯಿ ಔಷಧಿಗೋಸ್ಕರ ಹುಡುಗ ಮಾಡ್ತಿರುವ ಕೆಲಸ!

Published : Jun 17, 2020, 08:39 PM ISTUpdated : Jun 17, 2020, 08:41 PM IST
ಕೊರೋನಾದೊಂದಿಗೆ ಬದುಕು, ತಾಯಿ ಔಷಧಿಗೋಸ್ಕರ ಹುಡುಗ ಮಾಡ್ತಿರುವ ಕೆಲಸ!

ಸಾರಾಂಶ

ಕೊರೊನಾದಿಂದ ಪಾರಾಗಲು ದಾರಿ ಇದೆ, ಆದರೆ ಹಸಿವಿನಿಂದ ಪಾರಾಗಲು/ ಕುಟುಂಬ ನಿರ್ವಹಣೆಗೆ ಅತಿ ರಿಸ್ಕಿನ ಕೆಲಸ ಆರಿಸಿಕೊಂಡ ಹುಡುಗ/ ಕಣ್ಣಲ್ಲಿದೆ ಮೆಡಿಕಲ್ ಓದುವ ಕನಸು

ನವದೆಹಲಿ(ಜೂ. 17)  'ಕೊರೋನಾ ವೈರಸ್ ನಿಂದ ಪಾರಾಗಲು ಹಲವು ದಾರಿಗಳಿವೆ. ಆದರೆ ಹಸಿವಿಂದ ಪಾರಾಗಲು ಯಾವುದೇ ದಾರಿ ಇಲ್ಲ' ಹೌದು  20  ವರ್ಷದ ಚಾಂದ್ ಮೊಹಮದ್ ಈ ಮಾತನ್ನು ಹೇಳುತ್ತಾರೆ. ಅವರ ಜೀವನಾನುಭವವೇ ಈ  ಮಾತನ್ನು ಹೇಳಿಸುತ್ತಿದೆ.

ಮೆಡಿಕಲ್ ಓದಬೇಕು ಎಂಬ ಆಸೆಯಲ್ಲಿಒರುವ ಕ್ಲಾಸ್  2  ವಿದ್ಯಾರ್ಥಿ  ತನ್ನ ಅಮ್ಮನ ಟ್ರೀಟ್ ಮೆಂಟ್ ಮತ್ತು ಸಹೋದರಿಯರ ವಿದ್ಯಾಭ್ಯಾಸಕ್ಕಾಗಿ ಕೆಲಸವೊಂದನ್ನು ಆರಿಸಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಹೇಳುವುದಾದರೆ ಇದಕ್ಕಿಂತ ರಿಸ್ಕಿನ ಕೆಲಸ ಇನ್ನೊಂದು ಇರಲಿಕ್ಕಿಲ್ಲ.

ಅಂದು ಭಿಕ್ಷುಕ, ಇಂದು ಕೊರೋನಾ ಅನಾಥರ ಪಾಲಿನ ಭಗವಂತ

ಚಾಂದ್ ಆಯ್ಕೆ ಮಾಡಿಕೊಂಡಿರುವುದು ಕೊರೋನಾದಿಂದ ಸಾವಿಗೀಡಾದವರ ಶವದ ಸಾಗಾಟದ ಕೆಲಸ.  ಥೈರ್ಯಾಡ್ ಸಮಸ್ಯೆಯಿಂದ ಬಳಲುತ್ತಿರುವ ಚಾಂದ್ ತಾಯಿಗೆ ಟ್ರೀಟ್ ಮೆಂಟ್ ಅಗತ್ಯವಿದೆ. ಬಡತನದ ಕುಟುಂಬದ ಜವಾಬ್ದಾರಿ ಚಾಂದ್ ನದ್ದು.

ಲಾಕ್ ಡೌನ್  ಆರಂಭದ ಸಂದರ್ಭದಲ್ಲಿ ನನ್ನ ಮನೆಯವರನ್ನು ಕೊನೆಯದಾಗಿ ನೋಡಿದ್ದೇನೆ. ನನ್ನ ಅಣ್ಣ ಮಾರುಕಟ್ಟೆಯಲ್ಲಿ ಕೆಲಸ ಕಳೆದುಕೊಂಡು ಒಬ್ಬಂಟಿಯಾಗಿ ನಿಂತಿದ್ದ.

ಅಕ್ಕಪಕ್ಕದವರು ನೀಡಿದ ರೇಶನ್ ಈ ಕುಟುಂಬಕ್ಕೆ ಆಧಾರ. ವಾರಗಳ ಹಿಂದೆ ಚಾಂದ್ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ ಸ್ವಚ್ಛತಾ ಕರ್ಮಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅನಿವಾರ್ಯವಾಗಿ ಕೊರೋನಾ ಶವಗಳನ್ನು ಹ್ಯಾಂಡಲ್ ಮಾಡಲೇಬೇಕಾಗಿದೆ.

ಕೊರೋನಾದಿಂದ ಸಾವನ್ನಪ್ಪಿದರ ಹೆಣವನ್ನು ಆಂಬುಲೆನ್ಸ್ ಗೆ ತುಂಬಬೇಕು, ಅಲ್ಲಿಂದ ಅಂತ್ಯಸಂಸ್ಕಾರದ ಜಾಗಕ್ಕೆ ಕೊಂಡೊಯ್ಯಬೇಕು. ಇದೆಲ್ಲಾ ಅತಿ ರಿಸ್ಕ್ ನ ಕೆಲಸ ಎಂಬುದು ಗೊತ್ತಿದೆ, ಆದರೆ ಹೊಟ್ಟೆ ಕೇಳಬೇಕಲ್ಲ ಎಂದು ಚಾಂದ್ ಹೇಳುತ್ತಾರೆ.

ಹಣ ಹೊಂದಿಸಲು ಹರಸಾಸಹ ಮಾಡಿದೆ. ನನ್ನ ದಾಖಲಾತಿ ಹಿಡಿದುಕೊಂಡು ಕೆಲವರ ಬಳಿ ತೆರಳಿದೆ ಆದರೆ ಎಲ್ಲಿಯೂ ದುಡ್ಡು ಹುಟ್ಟಲಿಲ್ಲ ಎಂದು ಚಾಂದ್ ವಾಸ್ತವವನ್ನು ಮುಂದೆ ಬಿಚ್ಚಿಡುತ್ತಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ