ಮಣಿಪುರದ ಬೆನ್ನಲ್ಲೇ ಮೇಘಾಲಯದಲ್ಲಿ ಹಿಂಸಾಚಾರ, ಕುಕಿ, ಮೀಟಿ ಹೋರಾಟಕ್ಕೆ ಶಿಲ್ಲಾಂಗ್ ಭಸ್ಮ!

By Suvarna News  |  First Published May 6, 2023, 10:30 AM IST

ಈಶಾನ್ಯ ರಾಜ್ಯ ಹಿಂಸಾಚಾರದಲ್ಲಿ ಧಗಧಗಿಸುತ್ತಿದೆ. ಮಣಿಪುರದಲ್ಲಿನ ಹಿಂಸಾಚಾರಕ್ಕೆ ಹಲವು ಜಿಲ್ಲೆಗಳು ಸುಟ್ಟು ಭಸ್ಮವಾಗಿದೆ. ಮಣಿಪುರದಲ್ಲಿ ಪರಿಸ್ಥಿತಿ ಹತೋಟಿಗೆ ಬರುತ್ತಿದ್ದಂತೆ ಇದೀಗ ಮೇಘಾಲಯದಲ್ಲಿ ಗಲಭೆ ಶುರುವಾಗಿದೆ. ಕುಕಿ ಹಾಗೂ ಮಿಟಿ ಸಮುದಾಯದ ಹೋರಾಟಕ್ಕೆ ಶಿಲ್ಲಾಂಗ್ ಸುಟ್ಟು ಭಸ್ಮವಾಗಿದೆ. 
 


ಶಿಲ್ಲಾಂಗ್(ಮೇ.06): ದಕ್ಷಿಣ ಭಾರತದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದರೆ, ಈಶಾನ್ಯ ಭಾರತ ಹೊತ್ತಿ ಉರಿಯುತ್ತಿದೆ. ಕುಕಿ ಹಾಗೂ ಮೀಟಿ ಸಮುದಾಯದ ಆಕ್ರೋಶಕ್ಕೆ ಮಣಿಪುರದ ಹಲವು ಜಿಲ್ಲೆಗಳು ಸುಟ್ಟು ಭಸ್ಮವಾಗಿದೆ. ಮಣಿಪುರದಲ್ಲಿ ಕಂಡಲ್ಲಿ ಗುಂಡು ಆದೇಶ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮೇಘಾಲಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕುಕಿ ಹಾಗೂ ಮೀಟಿ ಸಮುದಾಯ ಶಿಲ್ಲಾಂಗ್‌ನಲ್ಲಿ ನಾನಗ್ರಿಮ್ ಹಿಲ್ಸ್ ಬಳಿಯ ಬಹುತೇಕ ಪ್ರದೇಶಗಳು ಸುಟ್ಟು ಭಸ್ಮವಾಗಿದೆ. ತಕ್ಷಣ ಕಾರ್ಯಪ್ರವೃತ್ತವಾಗಿರುವ ಪೊಲೀಸರು ಹಿಂಸಾಚಾರ ನಡೆಸಿದ ಸಮುದಾಯದ ಆಕ್ರೋಶಿತ ಗುಂಪಿನ 16 ಮಂದಿಯನ್ನು ಬಂಧಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಹಾಳು ಮಾಡುವ ಯಾವುದೇ ಪ್ರಯತ್ನ ನಡೆಸಿದರೂ ಪರಿಣಾಮ ಎದುರಿಸಬೇಕಾಗುತ್ತದೆ. ನಿಮ್ಮ ಪ್ರತಿಭಟನೆಗೆ ಅವಕಾಶವಿದೆ. ಅದರೆ ಅದಕ್ಕೆ ಒಂದು ಮಾರ್ಗವಿದೆ. ಆದರೆ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವುದು, ಹಿಂಸಾಚಾರ ನಡೆಸಿದರೆ ಪರಿಣಾಣ ಕಠಿಣವಾಗಲಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

Tap to resize

Latest Videos

ಮಣಿಪುರದಲ್ಲಿ ಕಂಡಲ್ಲಿ ಗುಂಡು ಆದೇಶ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರಚಾರ ದಿಢೀರ್‌ ರದ್ದು!

ಶಿಲ್ಲಾಂಗ್ ನಗರದ ನಾನ್‌ಗ್ರಿಮ್ ಹಿಲ್ಸ್ ಬಿಳಿಯ ಮಿಜೋರಾಮ್ ಶಾಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹಿಂಸಾಚಾರ ನಡದಿದೆ. ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಟ್ಟಗಳು, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸದ್ಯ ಪೊಲೀಸರು ಸುತ್ತುವರಿದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ. 

ಈಶಾನ್ಯ ರಾಜ್ಯ ಮಣಿಪುರದಲ್ಲಿ ‘ಮೀಟಿ’ ಸಮುದಾಯಕ್ಕೆ ಪರಿಶಿಷ್ಟಪಂಗಡ (ಎಸ್‌ಟಿ) ಸ್ಥಾನಮಾನ ನೀಡುವ ಮತ್ತು ಅರಣ್ಯ ಪ್ರದೇಶದಿಂದ ತಮ್ಮನ್ನು ಒಕ್ಕಲೆಬ್ಬಿಸುವ ಸರ್ಕಾರದ ಕ್ರಮದ ವಿರುದ್ಧ ಕ್ರಿಶ್ಚಿಯನ್ ಆದಿವಾಸಿಗಳು ಆರಂಭಿಸಿದ ಪ್ರತಿಭಟನೆ ಭಾರೀ ಹಿಂಸಾಚಾರಕ್ಕೆ ತಿರುಗಿದೆ. ಮಣಿಪುರದ ಹಲವು ಜಿಲ್ಲೆಗಳಲ್ಲಿ ಮನೆ, ಸರ್ಕಾರಿ, ಖಾಸಗಿ ಕಟ್ಟಡಗಳಿಗೆ ಬೆಂಕಿ ಹಚ್ಚುವ, ವಸ್ತುಗಳನ್ನು ದೋಚುವ ಘಟನೆ ನಡೆದಿದೆ. ಘಟನೆಯಲ್ಲಿ ಕೋಟ್ಯಂತರ ರು. ಆಸ್ತಿಪಾಸ್ತಿಗೆ ಹಾನಿಯಾಗಿದೆ.

ಹೊತ್ತಿ ಉರಿಯುತ್ತಿದೆ ಮಣಿಪುರ: ದಯವಿಟ್ಟು ಸಹಾಯ ಮಾಡಿ ಎಂದು ಮೋದಿ, ಅಮಿತ್ ಶಾ ನೆರವು ಕೇಳಿದ ಮೇರಿ ಕೋಮ್

 ಸುಮಾರು 9000 ಜನರನ್ನು ರಕ್ಷಿಸಲಾಗಿದೆ. ಪರಿಸ್ಥಿತಿ ತಹಬದಿಗೆ ತರಲು ಸೇನೆ ಹಾಗೂ ಅಸ್ಸಾಂ ರೈಫಲ್ಸ್‌ ಪಡೆಗಳ 55 ತುಕಡಿಗಳನ್ನು ನಿಯೋಜಿಸಲಾಗಿದೆ. ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಲಾಗಿದೆ. ಹಿಂಸಾಚಾರದಲ್ಲಿ ಅನೇಕರು ಸಾವನ್ನಪ್ಪಿರುವ ಶಂಕೆ ಇದೆಯಾದರೂ ಮಾಹಿತಿ ಲಭ್ಯವಿಲ್ಲ.

ತಾವು ವಾಸಿಸುವ ಅರಣ್ಯ ಪ್ರದೇಶವನ್ನು ಸಮೀಕ್ಷೆ ಮಾಡುವ ಸರ್ಕಾರದ ನಿರ್ಧಾರ ವಿರೋಧಿಸಿ 4 ದಿನಗಳ ಹಿಂದೆ ಆದಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆ ತಣ್ಣಗಾಗುವ ಹೊತ್ತಿನಲ್ಲಿ, ಮೀಟಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡಿಕೆ ವಿರೋಧಿಸಿ ಮಣಿಪುರ ಅಖಿಲ ಆದಿವಾಸಿ ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆಗೆ ಕರೆ ನೀಡಿತ್ತು.

ಈ ವೇಳೆ ಮೊದಲು ಚುರಾಚಂದಪುರ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಮೀಟಿ ಸಮುದಾಯದ ಜನರ ಮೇಲೆ ದಾಳಿ ಮಾಡಿದ್ದಾರೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಕಣಿವೆ ಜಿಲ್ಲೆಗಳಾದ್ಯಂತ ಹಿಂಸೆ ಭುಗಿಲೆದ್ದಿದೆ. ನೂರಾರು ಮನೆಗಳು ಹಾಗೂ ಅಂಗಡಿಗಳನ್ನು ಪುಡಿಗಟ್ಟಿಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಿಸಲು 5 ಆದಿವಾಸಿಯೇತರ ಜಿಲ್ಲೆಗಳು ಹಾಗೂ 3 ಆದಿವಾಸಿ ಪ್ರಾಬಲ್ಯದ ಜಿಲ್ಲೆಗಳಲ್ಲಿ ಕಫä್ರ್ಯ ಹೇರಲಾಗಿದೆ. ರಾಜ್ಯಾದ್ಯಂತ ಮೊಬೈಲ್‌ ಇಂಟರ್ನೆಟ್‌ ನಿರ್ಬಂಧಿಸಲಾಗಿದೆ.

click me!