ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷ, 'ದಿ ಕೇರಳ ಸ್ಟೋರಿ' ಚಿತ್ರ ರಾಜ್ಯದಲ್ಲಿ ಬ್ಯಾನ್ ಆಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಅದಲ್ಲದೆ, 2016ರಲ್ಲಿ ಕೇರಳದ ನಾಲ್ವರು ಮಹಿಳೆಯರು ದೇಶವನ್ನು ತೊರೆದು ಅಫ್ಘಾನಿಸ್ತಾನದಲ್ಲಿ ಐಸಿಸ್ ಸೇರಿದ್ದರು ಅನ್ನೋದನ್ನೂ ಒಪ್ಪೋಕೆ ತಯಾರಿಲ್ಲ. ಆದರೆ, ಇದು ನಿಜ. ನಾಲ್ವರು ಭಾರತೀಯ ಮಹಿಳೆಯರು ತಮ್ಮ ಪತಿಯ ಜೊತೆ ಐಸಿಸ್ ಸೇರಿದ್ದರು. ಆದರೆ, 2021ರಲ್ಲಿ ಈ ನಾಲ್ವರಿಗೆ ಭಾರತಕ್ಕೆ ವಾಪಾಸ್ ಆಗುವ ಅವಕಾಶವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ನವದೆಹಲಿ (ಮೇ.5): ಸತ್ಯದ ಮೇಲೆ ನೀವೆಷ್ಟೇ ಕಲ್ಲುಚಪ್ಪಡಿ ಎಳೆದು ಹುದುಗಿಸಿಇಟ್ಟರೂ, ಒಂದಲ್ಲ ಒಂದು ದಿನ ಅದು ಹೊರಬಂದೇ ಬರುತ್ತದೆ. 'ದಿ ಕೇರಳ ಸ್ಟೋರಿ' ಚಿತ್ರ ಮೂವರು ಕೇರಳ ಮಹಿಳೆಯರು ತನ್ನ ಪತಿಯ ಜೊತೆ ದೇಶವನ್ನು ತೊರೆದು ಅಫ್ಘಾನಿಸ್ತಾನದಲ್ಲಿ ಐಸಿಸ್ ಸೇರಿದ್ದ ವಿಚಾರವನ್ನು ಚಿತ್ರಿಸಿದೆ. ಇದು ಕಟ್ಟುಕಥೆ, ಆರೆಸ್ಸೆಸ್‌ನ ಸುಳ್ಳಿನ ಫ್ಯಾಕ್ಟರಿಯಿಂದ ಬಂದ ಕಥೆ ಎಂದು ಕೇರಳದ ಆಡಳಿತಾರೂಢ ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷ ಹೇಳುತ್ತಿವೆ. ಆದರೆ, ಇದು ನಿಜಕಥೆ. ತನ್ನ ಪತಿಯರ ಜೊತೆ ಭಾರತವನ್ನು ತೊರೆದು ಅಫ್ಘಾನಿಸ್ತಾನದಲ್ಲಿ ಕೇರಳದ ನಾಲ್ವರು ಮಹಿಳೆಯರು ಐಸಿಸ್ ಸೇರಿದ್ದರು. ಇವರೆಲ್ಲರೂ ಈಗ ಅಫ್ಘಾನಿಸ್ತಾನದ ಜೈಲಿನಲ್ಲಿ ದಿನದೂಡುತ್ತಿದ್ದಾರೆ. ಭಾರತದ ಪ್ರಜೆಗಳಾಗಿದ್ದರೂ, ದೇಶಕ್ಕೆ ಮರಳು ಇವರಿಗೆ ಸ್ವತಃ ಕೇಂದ್ರ ಸರ್ಕಾರವೇ ಬಿಡುತ್ತಿಲ್ಲ. ಭಯೋತ್ಪಾದನೆ ಹಾಗೂ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರ ಬಗ್ಗೆ ಸರ್ಕಾರ ಅಂಥದ್ದೊಂದು ಖಡಕ್ ನಿರ್ಧಾರವನ್ನು ತೆಗೆದುಕೊಂಡಿದೆ. 2016-18ರಲ್ಲಿ ಈ ಮಹಿಳೆಯರು ಅಫ್ಘಾನಿಸ್ತಾನದ ನಂಗರ್‌ಹಾರ್‌ಗೆ ಪ್ರಯಾಣಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ವಿವಿಧ ದಾಳಿಗಳಲ್ಲಿ ಅವರ ಗಂಡಂದಿರು ಸಾವು ಕಂಡಿದ್ದರೆ, ಅಧಿಕಾರಿಗಳ ಮುಂದೆ ಶರಣಾದ ಸಾವಿರಾರು ಐಸಿಸ್ ಭಯೋತ್ಪಾದಕರಲ್ಲಿ ಈ ಮಹಿಳೆಯರು ಸೇರಿದ್ದಾರೆ.
ಕೆಲವು ವಾರಗಳ ಹಿಂದೆ, ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮುಖ್ಯಸ್ಥ ಅಹ್ಮದ್ ಜಿಯಾ ಸರಾಜ್ ಕಾಬೂಲ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ, 13 ದೇಶಗಳ 408 ಇಸ್ಲಾಮಿಕ್ ಸ್ಟೇಟ್ ಸದಸ್ಯರು ಅಫ್ಘಾನಿಸ್ತಾನದ ಜೈಲುಗಳಲ್ಲಿದ್ದಾರೆ. ಇದರಲ್ಲಿ ನಾಲ್ವರು ಭಾರತೀಯರು, 16 ಚೀನಿಯರು, 299 ಪಾಕಿಸ್ತಾನಿಗಳು, ಇಬ್ಬರು ಬಾಂಗ್ಲಾದೇಶಿಗಳು, ಇಬ್ಬರು ಮಾಲ್ಡೀವ್ಸ್ ದೇಶದವರಾಗಿದ್ದಾರೆ ಎಂದು ತಿಳಿಸಿದ್ದರು. ಕೈದಿಗಳನ್ನು ಗಡಿಪಾರು ಮಾಡಲು ಅಫ್ಘಾನಿಸ್ತಾನ ಸರ್ಕಾರವು ಆಯಾ ದೇಶಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸಿದೆ ಎಂದು ಸರಾಜ್ ತಿಳಿಸಿದ್ದರು.
ಆದರೆ, ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಈ ನಾಲ್ವರು ಮಹಿಳೆಯರಿಗೆ ಮತ್ತೆ ಭಾರತ ಪ್ರವೇಶಕ್ಕೆ ಅನುಮತಿ ಸಿಗುವುದು ಅನುಮಾನ ಎನ್ನಲಾಗಿದೆ.ಶರಣಾದ ಒಂದು ತಿಂಗಳ ನಂತರ, ಡಿಸೆಂಬರ್ 2019 ರಲ್ಲಿ ಕಾಬೂಲ್‌ನಲ್ಲಿ ತಮ್ಮ ಮಕ್ಕಳೊಂದಿಗೆ ಮಹಿಳೆಯರನ್ನು ಭಾರತೀಯ ಭದ್ರತಾ ಏಜೆನ್ಸಿಗಳು ಸಂದರ್ಶನ ಮಾಡಿದ್ದವು. ಈ ವೇಳೆಯೇ ಅವರಿಗೆ ಇದರ ಮಾಹಿತಿ ತಿಳಿಸಲಾಗಿದೆ. ಮಾರ್ಚ್ 2020 ರಲ್ಲಿ, ಅಂತರರಾಷ್ಟ್ರೀಯ ವೆಬ್‌ಸೈಟ್ ಕೂಡ ಈ ಮಹಿಳೆಯರ ವೀಡಿಯೊವನ್ನು ಪ್ರಕಟಿಸಿತ್ತು. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ನಾಲ್ವರು ಮಹಿಳೆಯರನ್ನು ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯಿಷಾ, ರಫೀಲಾ, ಮೆರಿನ್ ಜಾಕೋಬ್ ಅಲಿಯಾಸ್ ಮರಿಯಮ್ ಮತ್ತು ನಿಮಿಷಾ ಅಲಿಯಾಸ್ ಫಾತಿಮಾ ಇಸಾ ಎಂದು ಗುರುತಿಸಲಾಗಿದೆ.
ಸೆಬಾಸ್ಟಿಯನ್ ಸೇರಿದಂತೆ ಕೇರಳದ 21 ಪುರುಷರು ಮತ್ತು ಮಹಿಳೆಯರ ಗುಂಪು 2016 ರಲ್ಲಿ ಅಫ್ಘಾನಿಸ್ತಾನದಲ್ಲಿ ಐಎಸ್‌ಕೆಪಿಗೆ ಸೇರಲು ಬ್ಯಾಚ್‌ಗಳಲ್ಲಿ ಭಾರತವನ್ನು ತೊರೆದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2017 ರಲ್ಲಿ ಇವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.
ತನ್ನ ಚಾರ್ಜ್‌ಶೀಟ್‌ನಲ್ಲಿ ಈ ಮಹಿಳೆಯರ ಬಗ್ಗೆ ಸಂಪೂರ್ಣ ವಿವರವನ್ನು ಎನ್‌ಐಎ ದಾಖಲು ಮಾಡಿತ್ತು. ಕೇರಳದ ಕಾಸರಗೋಡಿನವರಾದ ಸೆಬಾಸ್ಟಿಯನ್ 2016ರ ಮೇ 31 ರಂದು ದೇಶವನ್ನು ತೊರೆದಿದ್ದಳು. ಈಕೆಯೊಂದಿಗೆ ಗಂಡ ಅಬ್ದುಲ್ ರಶೀದ್ ಅಬ್ದುಲ್ಲಾ ಕೂಡ ಪ್ರಯಾಣ ಮಾಡಿದ್ದ. ಇಂಜಿನಿಯರಿಂಗ್ ಪದವೀಧರೆಯಾಗಿದ್ದ ಸೆಬಾಸ್ಟಿಯನ್ ರಂಜಾನ್ ತಿಂಗಳ ಕೊನೆಯ ಹಂತದಲ್ಲಿ ತನ್ನ ಗಂಡನ ಜೊತೆ ಐಸಿಸ್‌ನ ಸೀಕ್ರೆಟ್ ಕ್ಲಾಸ್‌ಗಳನ್ನು ತೆಗೆದುಕೊಂಡಿದ್ದಳು.
The Kerala Story ಸಂಘ ಪರಿವಾರದ ಸುಳ್ಳಿನ ಫ್ಯಾಕ್ಟರಿಯ ಉತ್ಪನ್ನ: ಕೇರಳ ಸಿಎಂ!
ಮೆರಿನ್ ಜೇಕಬ್ ಅಲಿಯಾಸ್ ಮರಿಯಮ್ ಪಾಲಕ್ಕಾಡ್ ನಿವಾಸಿ ಬೆಸ್ಟಿನ್ ವಿನ್ಸೆಂಟ್‌ನನ್ನು ವಿವಾಹವಾಗಿದ್ದಳು. ಇಬ್ಬರೂ ಐಸಿಸ್ ಸೇರುವ ಸಲುವಾಗಿ 2016ರಲ್ಲಿ ಅಫ್ಘಾನಿಸ್ತಾನಕ್ಕೆ ಹೋಗಿದ್ದರು ಹಾಗೂ ಅಲ್ಲಿಯೇ ಇಸ್ಲಾಂಗೆ ಮತಾಂತರಗೊಂಡಿದ್ದರು. ಇಬ್ಬರೂ ಐಎಸ್ ನಿಯಂತ್ರಿತ ಪ್ರದೇಶದಲ್ಲಿ ವಾಸಿಸಲು 2016 ರಲ್ಲಿ ಅಫ್ಘಾನಿಸ್ತಾನಕ್ಕೆ ತಪ್ಪಿಸಿಕೊಂಡು ಇಸ್ಲಾಂಗೆ ಮತಾಂತರಗೊಂಡರು. ವಿನ್ಸೆಂಟ್ ಅವರ ಸಹೋದರ ಬೆಕ್ಸನ್ ಮತ್ತು ಆತನ ಪತ್ನಿ ನಿಮಿಷಾ ಅಲಿಯಾಸ್ ಫಾತಿಮಾ ಕೂಡ ಇಸ್ಲಾಂಗೆ ಮತಾಂತರಗೊಂಡಿದ್ದಲ್ಲದೆ, ಅಫ್ಘಾನಿಸ್ತಾನಕ್ಕೆ ಹೋಗಿದ್ದರು.
The Kerala Story Review: ಬರಿ ಸಿನಿಮಾವಲ್ಲ, ಹೆಣ್ಣು ಮಕ್ಕಳ ಬದುಕು ಬದಲಿಸೋ ನೈಜಕಥೆ!
2020ರ ಆಗಸ್ಟ್‌ನಲ್ಲಿ ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿರುವ ಜೈಲಿಗೆ ನುಗ್ಗಿದ ಐಎಸ್ ಭಯೋತ್ಪಾದಕರಲ್ಲಿ ಒಬ್ಬರೆಂದು ಗುರುತಿಸಲಾಗಿರುವ ಕಾಸರಗೋಡಿನ ವೈದ್ಯ ಇಜಾಸ್ ಕಲ್ಲುಕೆಟ್ಟಿಯ ಪುರಯಿಲ್ (37) ಅವರನ್ನು ರೆಫೆಲಾ ವಿವಾಹವಾಗಿದ್ದಳು. ದಾಳಿಯಲ್ಲಿ ಸುಮಾರು 30 ಜನರು ಸಾವನ್ನಪ್ಪಿದರು.