ತಂದೆ ಹೆಸರಿನ ಗೊಂದಲದಲ್ಲಿ ಜಿರಳೆ ಲೀಡರ್​ ಸೌರವ್​ ದಾಸ್​: SIR ವಿರೋಧದ ಕಾರಣ ಹೆಕ್ಕಿ ತೆಗೆದರು- ಅಪ್ಪ ಯಾರು

Published : Oct 25, 2026, 02:14 PM IST
Sourav Das

ಸಾರಾಂಶ

ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸೌರವ್ ದಾಸ್ ನ್ಯಾಯಾಂಗ ಬಂಧನದಲ್ಲಿದ್ದರು. ತಂದೆಯ ಹೆಸರಿನ ಗೊಂದಲದಿಂದ ಜಾಮೀನು ನಿರಾಕರಿಸಲಾಗಿತ್ತು ಎನ್ನಲಾಗಿದ್ದು, ಅವುಗಳ ದಾಖಲೆ ವೈರಲ್​ ಆಗಿದೆ. ಅವರ ತಾಯಿ ನೇಪಾಳಿ ಮೂಲದವರಾಗಿದ್ದು, ತಂದೆ ಹೆಸರಿನಲ್ಲಿ, ಸುಬೀರ್ ದಾಸ್ ಹೆಸರನ್ನು ಬಳಸಿರುವುದೂ ಚರ್ಚೆಗೆ ಗ್ರಾಸವಾಗುತ್ತಿದೆ. ಸೌರವ್ ಅವರ ಭಾರತೀಯ ಪೌರತ್ವದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಮುಂಬೈ: ಕಾಕ್ರೋಚ್​ ಜನತಾ ಪಕ್ಷ (CJP)ಯ ಸಂಸ್ಥಾಪಕ ಅಭಿಜೀತ್​ ದೀಪ್ಕೆ ಇದಾಗಲೇ ಪ್ರತಿಭಟನೆಯ ಮುಂದಾಳತ್ವ ವಹಿಸಿದೋನು ನಾನಲ್ಲ, ಅದೇನಿದ್ದರೂ ಸೌರವ್​ ದಾಸ್​ ಮತ್ತು ಅಶುತೋಷ್​ ರಾಂಕಾ ಎಂದು ವಿಡಿಯೋ ಮಾಡುವ ಮೂಲಕ ನುಣುಚಿಕೊಳ್ಳುವ ಯತ್ನ ಮಾಡಿರುವುದು ಇದಾಗಲೇ ಸಾಕಷ್ಟು ಟ್ರೋಲ್​ ಆಗಿದೆ. ದೆಹಲಿಯಲ್ಲಿ ನಡೆದ ಘಟನೆಯ ತನಿಖೆಯನ್ನು ಕ್ರೈಂಬ್ರ್ಯಾಂಚ್​ನವರು ವಹಿಸಿಕೊಂಡ ಬೆನ್ನಲ್ಲೇ ದೀಪ್ಕೆ ವಿಡಿಯೋ ಮಾಡಿ, ಉಳಿದಿಬ್ಬರ ಹೆಸರು ಹೇಳಿ ನಾನು ಅವರು ಹೇಳಿದಂತೆ ಕೇಳುವವ ಅಷ್ಟೇ ಅಂದಿದ್ದಾರೆ! ಇದೇ ಘಟನೆಗೆ ಸಂಬಂಧಿಸಿದಂತೆ ದೀಪ್ಕೆ ಹೊರಕ್ಕೆ ಇದ್ದರೆ, ಸೌರವ್​ ದಾಸ್​ ಮತ್ತು ಅಶುತೋಷ್​ ರಾಂಕಾ ಅವರು ಏಳು ದಿನ ನ್ಯಾಯಾಂಗ ಬಂಧನದಲ್ಲಿ ಇದ್ದರು.

ಈ ಮಧ್ಯೆ, ಸೌರವ್​ ದಾಸ್​ ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದರ ಹಿಂದಿರುವ ಕೋರ್ಟ್​ ಆದೇಶದ ಪ್ರತಿ ಇದೀಗ ವೈರಲ್ ಆಗಿದೆ. ಇದಕ್ಕೆ ಕಾರಣ, ಅರ್ಜಿಯಲ್ಲಿ ಕೆಲವೊಂದು ಲೋಪ ಇರುವುದು ಒಂದೆಡೆಯಾದರೆ, ಅವರು ತಮ್ಮ ತಂದೆಯ ಹೆಸರನ್ನು ಸರಿಯಾಗಿ ನೀಡಲು ಸೌರವ್​ ದಾಸ್​ ವಿಫಲವಾಗಿರುವುದು ಎಂದು ಬರೆಯಲಾಗಿದೆ. ಎಸ್‌ಇಎಂ ನ್ಯಾಯಾಲಯದ ದಾಖಲೆಗಳಿಗಾಗಿ ಸೌರವ್ ಅವರು ತಂದೆಯ ಹೆಸರು ಮತ್ತು ವಿಳಾಸವನ್ನು ನೀಡಲು ಸಾಧ್ಯವಾಗದಿದ್ದಾಗ ಬಹಳಷ್ಟು ತೊಂದರೆಗೆ ಸಿಲುಕಿದರು. ಕೊನೆಗೂ ಅವರು ದೆಹಲಿಯ ಒಂದು ಅಡ್ರೆಸ್​ ಕೊಟ್ಟು ತಂದೆಯ ಹೆಸರನ್ನು ಸುಬೀರ್​ ದಾಸ್​ ಎಂದು ಬರೆದರು.

ಆದರೆ ಸಮಸ್ಯೆ ಶುರುವಾಗಿದ್ದು, ಅಲ್ಲಿಂದಲೇ, 2023 ರ ಮದ್ರಾಸ್ ಹೈಕೋರ್ಟ್ ಆದೇಶದ ಪ್ರತಿಯೊಂದರಲ್ಲಿ ಸೌರವ್​ ಅವರು ಸೀಮಾ ಛೆಟ್ರಿ ಅವರ ಪುತ್ರ ಎಂದು ಉಲ್ಲೇಖಿಸುತ್ತದೆ. ಅಲ್ಲಿ ಪಾಂಡಿಚೇರಿ ವಿಳಾಸ ನೀಡಲಾಗಿದೆ. ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಹಾಗಾದರೆ ಸತ್ಯವೇನು?

ಸದ್ಯ ಎಲ್ಲೆಡೆ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಸೌರವ್​ ದಾಸ್​ ಅವರು "ಪ್ರಮುಖ ರಾಜಕಾರಣಿ"ಯ ಮಗ ಎಂದು ಹೇಳಲಾಗುತ್ತದೆ. ಅವರ ಹೆತ್ತ ತಂದೆಯ ಹೆಸರು ಸದ್ಯ ಬೆಳಕಿಗೆ ಬಂದಿಲ್ಲ. ವಾಸ್ತವವೆಂದರೆ ಅವರ ತಂದೆ ನೇಪಾಳಿಯಾಗಿದ್ದು, ಸೌರವ್ 3 ವರ್ಷದವನಿದ್ದಾಗ ಅವರನ್ನು ತ್ಯಜಿಸಿದ್ದರು. ಕೆಲವು ವರ್ಷಗಳ ನಂತರ, ಅವರ ತಾಯಿ ಸುಬೀರ್ ದಾಸ್ ಅವರನ್ನು ಭೇಟಿಯಾಗಿ ಅವರ ಜೊತೆ ನೆಲೆಸಿದ್ದಾರೆ. ಸುಬೀರ್ ಸೌರವ್ ಅವರು ಸೌರವ್​ ಅವರನ್ನು ಕಾನೂನುಬದ್ಧವಾಗಿ ದತ್ತು ಪಡೆದಿಲ್ಲ. ಆದರೆ ಸೌರವ್​ ಅವರು ದಾಸ್​ ಎನ್ನುವ ಸರ್​ನೇಮ್​ನಿಂದ ಗುರುತಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಕೆಲವು ಕಡೆಗಳಲ್ಲಿ ತಾಯಿಯ ಹೆಸರು ಸೂಚಿಸುತ್ತಿದ್ದಾರೆ. ಆಗಿದ್ದು ಇಷ್ಟೇ. ಆದರೆ ಇದೇ ಈಗ ಬಹುದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ ಅಷ್ಟೇ.

ನೇಪಾಳದಿಂದ ಭಾರತಕ್ಕೆ ದಿಢೀರ್​ ಬಂದ ಅಮ್ಮ

2019 ರಲ್ಲಿ CAA/NRC ಜಾರಿಗೆ ಬರುವವರೆಗೂ, ಸೀಮಾ ಛೆಟ್ರಿ ತಮ್ಮನ್ನು ನೇಪಾಳಿ ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಿದ್ದರು. CAA/NRC ನಂತರ, ಅವರ ಮೂಲ ಸ್ಥಳವು ನಿಗೂಢವಾಗಿ ಪಶ್ಚಿಮ ಬಂಗಾಳದ ಸಿಲಿಗುರಿಗೆ ಬದಲಾಯಿತು. ಇದು ಸೌರವ್ ಅವರನ್ನು ಸ್ವಲ್ಪ ಮಟ್ಟಿಗೆ ಗೊಂದಲಕ್ಕೀಡು ಮಾಡುತ್ತಿದೆ ಎಂದೂ ಹೇಳಲಾಗುತ್ತಿದೆ. ಅವರ ಜೈವಿಕ ಪೋಷಕರು ಇಬ್ಬರೂ ನೇಪಾಳಿ ಮೂಲದವರು ಎಂದು ಕಂಡುಬಂದರೆ, ಅವರು ಭಾರತದಲ್ಲಿ ಜನಿಸಿದರೂ ಸಹ, ಅವರು ಭಾರತೀಯ ಪ್ರಜೆಯಾಗುವುದಿಲ್ಲ. ಭಾರತೀಯ ಕಾನೂನಿನ ಪ್ರಕಾರ, 1987 ಮತ್ತು 2004 ರ ನಡುವೆ ಭಾರತದಲ್ಲಿ ಜನಿಸಿದ ವ್ಯಕ್ತಿಯು ಸ್ವಯಂ ಆಗಿ ಭಾರತೀಯ ಪ್ರಜೆಯಾಗುತ್ತಾನೆ, ಅವರ ಜೈವಿಕ ಪೋಷಕರಲ್ಲಿ ಕನಿಷ್ಠ ಒಬ್ಬರು ಭಾರತೀಯ ಪ್ರಜೆಯಾಗಿದ್ದರೆ ಮಾತ್ರ.

ಸೌರವ್​ ದಾಸ್ 2000 ರಲ್ಲಿ ಜನಿಸಿದ ಕಾರಣ, ಈ ಸಂಗತಿ (ನಿಜವಾಗಿದ್ದರೆ) ಅವರು ಭಾರತೀಯ ಪ್ರಜೆ ಆಗುವುದಿಲ್ಲ. ಮತ್ತು ಇದು ಅವರ ಜೀವನವನ್ನು ಕಷ್ಟಕರವಾಗಿಸಬಹುದು. ಅವರು ಆರಂಭದಲ್ಲಿ RTI ಕಾರ್ಯಕರ್ತನಾಗಿ ಖ್ಯಾತಿಯನ್ನು ಗಳಿಸಿದ್ದರಿಂದ ಮತ್ತು ಈಗ ರಾಜಕೀಯ ಸವಾಲುಗಳನ್ನು ಎದುರಿಸುತ್ತಿರುವುದರಿಂದ ಅವರಿಗೆ ಇನ್ನೂ ಹೆಚ್ಚಿನ ಕಷ್ಟವಾಗಬಹುದು. ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತಪಟ್ಟಿಲ್ಲ ಎನ್ನುವುದು ಕೂಡ ಗಮನಿಸಬೇಕಾದ ಅಂಶ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ಟೋಬರ್ 31ರಿಂದ ವಾರಣಸಿಗೆ ವಂದೇ ಭಾರತ್ ಸ್ಲೀಪರ್ ರೈಲು ಸಂಪರ್ಕ, ಇಲ್ಲಿದೆ ವೇಳಾಪಟ್ಟಿ
ನೆಲದಿಂದ 100 ಅಡಿ ಆಳದಲ್ಲಿ ನಿಲ್ದಾಣ, ಸಮುದ್ರದ ಕೆಳಗೆ 7KM ಸುರಂಗ! ದೇಶದ ಮೊದಲ ಬುಲೆಟ್ ರೈಲು ಬಗ್ಗೆ ಕೇಂದ್ರದಿಂದ ಬಿಗ್‌ ಅಪ್‌ಡೇಟ್ಸ್