ಜನಪ್ರಿಯ ಶೆಫ್, ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ದಾಮು ಅಲಿಯಾಸ್ ದಾಮೋದರನ್ ನಿಧನ, ಗಣ್ಯರಿಂದ ಸಂತಾಪ

Published : Oct 25, 2026, 01:49 PM ISTUpdated : Oct 25, 2026, 02:25 PM IST
Renowned Chef Damodharan Passes Away

ಸಾರಾಂಶ

ಪದ್ಮಶ್ರೀ ಪ್ರಶಸ್ತಿ ವಿಜೇತ ಖ್ಯಾತ್ ಶೆಫ್ ದಾಮು ಅಲಿಯಾಸ್ ದಾಮೋದರನ್ ಕೋದಂಡರಾಮನ್ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲಿದ ದಾಮು ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ

ಚೆನ್ನೈ (ಅ.25) ಅಸಾಧ್ಯ ಕುಕಿಂಗ್ ಸ್ಕಿಲ್, ಟಿವಿ ಕಾರ್ಯಕ್ರಮಗಳ ಮೂಲಕ ಅತ್ಯಂತ ಜನಪ್ರಿಯರಾಗಿರುವ ಖ್ಯಾತ ಶೆಪ್ ದಾಮು ಅಲಿಯಾಸ್ ದಾಮೋದರ್ ಕೋದಂಡರಾಮನ್ ನಿಧನರಾಗಿದ್ದಾರೆ. ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಶೆಫ್ ದಾಮು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ದಾಮು ಆರೋಗ್ಯ ಬಿಗಡಾಯಿಸಿತ್ತು. ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ದಾಮು ನಿಧನ ಸುದ್ದಿ ಹೊರಬೀಳುತ್ತಿದ್ದಂತೆ ಕುಕಿಂಗ್ ಕ್ಷೇತ್ರದ ದಿಗ್ಗಜರು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

25ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದ ದಾಮು ಅಪ್ಪ

ಕುಕ್ ವಿತ್ ಕೋಮಾಲಿ ರಿಯಾಲಿಟಿ ಶೋ ಮೂಲಕ ದಾಮು ಅತ್ಯಂತ ಜನಪ್ರಿಯರಾಗಿದ್ದರು. ದೇಶದಲ್ಲೇ ಶೆಫ್ ದಾಮು ಜನಪ್ರಿಯರಾಗಿದ್ದರು. 25ಕ್ಕೂ ಹೆಚ್ಚು ಪುಸ್ತಕ ಬರೆದಿರುವ ದಾಮು ಅಗಲಿಕೆಗೆ ನೋವನ್ನು ಮತ್ತೊರ್ವ ಖ್ಯಾತ ಶೆಫ್ ವೆಂಕಟೇಶ್ ಭಟ್ ಹಂಚಿಕೊಂಡಿದ್ದಾರೆ. ಸಾಂಪ್ರಾದಾಯಿಕ ತಮಿಳು ಅಡುಗೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದು ಪ್ರಚಾರ ಮಾಡಿದ ಹಾಗೂ ತಮಿಳು ನಾಡಿನ ವಿಶೇಷ ಖಾದ್ಯ, ಭಾರತದ ಪಾಕ ಪರಂಪರೆಯನ್ನು ಜಗತ್ತಿಗೆ ಸಾರಿದ ಕೆಲವೇ ಕೆಲವು ಶೆಫ್ ಪೈಕಿ ದಾಮು ಕೂಜ ಒಬ್ಬರಾಗಿದ್ದಾರೆ ಎಂದು ವಂಕಟೇಶ್ ಭಟ್ ಹೇಳಿದ್ದಾರೆ.

ಭಾರತೀಯ ಅಡುಗೆಯನ್ನು ಸರಳವಾಗಿ, ಸುಲಭವಾಗಿ, ಸಂಪ್ರದಾಯಬದ್ಧವಾಗಿ ಹಾಗೂ ಶುಚಿಯಾಗಿ ಜನರಿಗೆ ತಲುಪಿಗೆ ಮೇರು ವ್ಯಕ್ತಿತ್ವ ಎಂದು ಹಲವರು ದಾಮು ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ದಾಮು ಪಾಕ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ. ಅವರ ಸಲಹೆಗಳು, ಪಾಕ ವಿಧಾನ ಅಡುಗಮನೆಯಲ್ಲಿ ನಿರಂತವಾಗಲಿ ಸಾಗಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಟೆಲ್ ಮ್ಯಾನೇಜ್‌ಮೆಂಟ್ ಪದವಿ ಬಳಿಕ ಪ್ರವಾಸೋದ್ಯ ಇಲಾಖೆಯಲ್ಲಿ ಸೇವೆ ಆರಂಭಿಸಿದ ದಾಮು, ತಮ್ಮ ಆಸಕ್ತಿಯ ಕುಕಿಂಗ್ ಕ್ಷೇತ್ರಕ್ಕೆ ಮರಳಲು ಕಾತರಗೊಂಡಿದ್ದರು. ಹೀಗಾಗಿ 2004ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಹೊಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಕ್ಯಾಟರಿಂಗ್ ಕ್ಷೇತ್ರದಲ್ಲಿ ಪಿಹೆಚ್‌ಡಿ ಪದವಿ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಶೆಫ್ ಅನ್ನೋ ಹೆಗ್ಗಳಿಕೆಗೂ ದಾಮು ಪಾತ್ರರಾಗಿದ್ದಾರೆ. ತಮಿಳುನಾಡಿನ ಶಾಲೆಗಳಲ್ಲಿ ಮಕ್ಕಳ ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ಸುಧಾರಣೆಗೆ ಸಲಹೆ, 1.4 ಲಕ್ಷ ಕಾರ್ಮಿಕರಿಗೆ ತರಬೇತಿ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ದಾಮು ಅಪ್ಪ ಎಂದೇ ಗುರುತಿಸಿಕೊಂಡಿದ್ದ ದಾಮೋದರನ್ ದೇಶಾದ್ಯಂತ ಅಭಿಮಾನಿ ಬಳಗ ಹೊಂದಿದ್ದರು. ಒಬ್ಬ ಶೆಫ್ ಈ ಮಟ್ಟಿಗೆ ಜನಪ್ರಿಯರಾಗಬಹುದು ಅನ್ನೋದು ತೋರಿಸಿಕೊಟ್ಟಿದ್ದೆ ದಾಮು ಅನ್ನೋ ಮಾತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಿನ್ನೆಸ್ ದಾಖಲೆ, ಪದ್ಮಶ್ರೀ ಗೌರವ ಪಡೆದಿದ್ದ ಖ್ಯಾತ ಬಾಣಸಿಗ 'ಕುಕ್ ವಿತ್ ಕೋಮಾಲಿ' ಖ್ಯಾತಿಯ ಚೆಫ್ ದಾಮುಗೆ ಏನಾಗಿತ್ತು?
ಗಾಂಧೀಜಿಯ '5ನೇ ಮಗ' ಕಟ್ಟಿದ 14 ಲಕ್ಷ ಕೋಟಿಯ ಸಾಮ್ರಾಜ್ಯ! ಅಪ್ಪನ ಮಾತಿಗೆ ಸಿಟ್ಟಾಗಿ ಆಸ್ತಿ ತ್ಯಜಿಸಲು ಮುಂದಾಗಿದ್ರು