
ನವದೆಹಲಿ (ಅ.14) ಕಾಕ್ರೋಚ್ ಜನತಾ ಪಾರ್ಟಿ ನಾಯಕ ಅಭಿಜಿತ್ ದೀಪ್ಕೆ ಸಂಕಷ್ಟ ಹೆಚ್ಚಾಗುತ್ತಿದೆ. ಅಜ್ಜಿ ನಿಧನ ವಿಚಾರ ಮುಂದಿಟ್ಟು ದೀಪ್ಕೆ ಹೇಳಿದ ಸುಳ್ಳುಗಳನ್ನು ದಿಲ್ಲಿ ಪೊಲೀಸರು ವಿಡಿಯೋ ಸಮೇತ ಬಿಡುಗಡೆ ಮಾಡಿದ್ದರು. ಈ ಮುಖಭಂಗದಿಂದ ಹೊರಬರುವಷ್ಟರಲ್ಲೇ ಇದೀಗ ದೀಪ್ಕೆಗೆ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಬೋಸ್ಟನ್ ಯೂನಿವರ್ಸಿ ಕಾಲೇಜ್ ಮೇಟ್ ಎಂದು ಪರಿಚಯ ಮಾಡಿಕೊಂಡ ಯುವಕ ವಿಡಿಯೋ ಮೂಲಕ ದೀಪ್ಕೆ ಕುರಿತು ಕೆಲ ಸ್ಫೋಟಕ ಮಾಹಿತಿ ನೀಡಿದ್ದಾನೆ. ಅಭಿಜಿತ್ ದೀಪ್ಕೆ ಅತೀ ದೊಡ್ಡ ದೇಶ ವಿರೋಧಿ ಎಂದಿದ್ದಾನೆ.
ಅಭಿಜಿತ್ ದೀಪ್ಕೆ ಹೇಳಿಕೊಂಡ ಬಾಸ್ಟನ್ ಯೂನಿವರ್ಸಿಟಿ ಕಾಲೇಜು ಮೇಟ್ ಎಂದು ಹೇಳಿಕೊಂಡಿರುವ ಈ ಯುವಕ, ತಾನು ಕಲಿಯುತ್ತಿದ್ದ ಕಾಲೇಜಿನಲ್ಲಿ ದೀಪ್ಕೆ ಕೂಡ ಇದ್ದ ಎಂದಿದ್ದಾನೆ. ಒಂದು ಪಾರ್ಟಿಯಲ್ಲಿ ನಾನು ಅಭಿಜಿತ್ ದೀಪ್ಕೆಯನ್ನು ಭೇಟಿ ಮಾಡಿದ್ದೆ ಎಂದು ಮಾಹಿತಿ ನೀಡಿದ್ದಾನೆ. ಅಭಿಜಿತ್ ದೀಪ್ಕೆ ದೇಶದ ವಿರುದ್ದವೇ ಮಾತನಾಡುತ್ತಾನೆ. ಅತೀ ದೊಡ್ಡ ದೇಶ ವಿರೋಧಿಯಾಗಿದ್ದಾನೆ. ಅಭಿಜಿತ್ ದೀಪ್ಕೆ ಭಾರತದಲ್ಲಿ ಆಗುತ್ತಿರುವ ಎಲ್ಲಾ ಅಭಿವೃದ್ಧಿ, ಬೆಳವಣಿಗೆಯನ್ನು ವಿರೋಧಿಸುತ್ತಿದ್ದ. ದೀಪ್ಕೆ ಹಿಂದೂಗಳನ್ನು ವಿರೋಧಿಸುತ್ತಿದ್ದ ಎಂದು ಯುವಕ ತನ್ನ ವಿಡಿಯೋದಲ್ಲಿ ಹೇಳಿದ್ದಾನೆ.
ದೀಪ್ಕೆ ಜೊತೆ ಮಾತನಾಡಿದ ಬಳಿಕ ನಮ್ಮ ತಲೆಯಲ್ಲಿ ದೇಶ ವಿರೋಧಿ ಚಿಂತನೆ ಬರುವಂತೆ ಮಾಡುತ್ತಾನೆ. ಪಾರ್ಟಿಯಿಂದ ಹಿಂದಿರುಗುವಾಗ ನನ್ನ ಗೆಳತಿ ಜೊತೆ ಈ ಕುರಿತು ಮಾತನಾಡಿದ್ದೆ. ದೀಪ್ಕೆ ಅತ್ಯಂತ ನೆಗಟೀವ್ ವ್ಯಕ್ತಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ದೀಪ್ಕೆ ಎಲ್ಲರ ತಲೆಯಲ್ಲಿ ಭಾರತ ವಿರೋಧಿ ಚಿಂತನೆ ತುಂಬುತ್ತಿದ್ದ ಎಂದು ಯುವಕ ಹೇಳಿದ್ದಾನೆ. ಸದ್ಯ ಭಾರತದಲ್ಲಿ ಬಿಜೆಪಿ ಸರ್ಕಾರವಿದೆ, ಪ್ರಧಾನಿಯಾಗಿ ಮೋದಿ ಆಡಳಿತ ನಡೆಸುತ್ತಿದ್ದಾರೆ. ಇದು ನಮ್ಮ ಅದೃಷ್ಠ ಎಂದು ಯುವಕ ಹೇಳಿದ್ದಾನೆ. ದೀಪ್ಕೆಗೆ ಭಾರತವನ್ನು ಒಡೆಯಬೇಕು, ಈತನ ಜೊತೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಹೆಸರುಗಳು ಮುನ್ನಲೆಗೆ ಬರುತ್ತದೆ. ದೀಪ್ಕೆ ಒಬ್ಬ ದ್ವೇಷಿ, ಆತ ವಂಚಕ ಎಂದು ಯುವಕ ವಿಡಿಯೋ ಮೂಲಕ ಹೇಳಿದ್ದಾನೆ.
ಅಭಿಜಿತ್ ದೀಪ್ಕೆ ಕಾಲೇಜ್ ಮೇಟ್ ಎಂದು ಹೇಳಿಕೊಂಡ ಈ ಯುವಕ ವಿಡಿಯೋವನ್ನು ರೆಡ್ಡಿಟ್ ಮೂಲಕ ಪೋಸ್ಟ್ ಮಾಡಿದ್ದಾನೆ. ಇದೀಗ ಈ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ಅಭಿಜಿತ್ ದೀಪ್ಕೆ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿರುವಾಗಲೇ ಕಾಲೇಜಿನ ಭಾರತೀಯ ವಿದ್ಯಾರ್ಥಿಗಳ ತಲೆಯಲ್ಲಿ ತಪ್ಪು ಮಾಹಿತಿ ತುಂಬಿ ದೇಶದ ಬಗ್ಗೆ ಆಕ್ರೋಶ ಬರುವಂತೆ ಮಡುತ್ತಿದ್ದ ಅನ್ನೋ ಆರೋಪಗಳಿಗೆ ಈ ವಿಡಿಯೋ ಪುಷ್ಠಿ ನೀಡಿದೆ ಎಂದು ಚರ್ಚೆಗಳು ನಡೆಯುತ್ತಿದೆ.
ಈ ವಿಡಿಯೋದ ಸತ್ಯಾಸತ್ಯತೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಖಚಿತಪಡಿಸುತ್ತಿಲ್ಲ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಪರ ವಿರೋಧ ಕಮೆಂಟ್ಸ್ಗಳು ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ