ಮತ್ತಿ, ಬಾಂಗ್ಡಾ ಮೀನು ಪ್ರಿಯರಿಗೆ ಶಾಕ್, ಇನ್ನುಮುಂದೆ ನೆಚ್ಚಿನ ಫಿಶ್ ಸಿಗುವುದು ಅನುಮಾನ

Published : Oct 14, 2026, 11:35 AM IST
sardine

ಸಾರಾಂಶ

ಮೀನು ಆಹಾರ ಪ್ರಿಯರಿಗೆ ಅತೀ ದೊಡ್ಡ ಶಾಕ್ ಎದುರಾಗಿದೆ. ಮೀನುಗಳಲ್ಲಿ ಭೂತಾಯಿ ಹಾಗೂ ಬಾಂಗ್ಡಾ ಮೀನು ಇನ್ಮುಂದೆ ಸಿಗುವುದು ಅನುಮಾನವಾಗಿದೆ. ಈ ಎರಡು ಮೀನು ಮಾತ್ರವಲ್ಲ, ಬಹುತೇಕ ಮೀನುಗಳ ಲಭ್ಯತೆ ಕಡಿಮೆಯಾಗಲಿದೆ. ಬೆಲೆ ನಾಲ್ಕು ಪಟ್ಟು ಹೆಚ್ಚಾಗಲಿದೆ.

ನವದೆಹಲಿ (ಅ.14) ಮಾಂಸಾಹಾರ ಪ್ರಿಯರಿಗೂ ಶಾಕ್ ಎದುರಾಗಿದೆ. ಈ ಬಾರಿ ತರಕಾರಿಗಳ ಬೆಲೆ ದುಪ್ಪಟ್ಟಾಗಲಿದೆ ಅನ್ನೋ ವರದಿ ಈಗಾಗಲೇ ಪ್ರಕಟಗೊಂಡಿದೆ. ಈ ವೇಳೆ ಮಾಂಸ ಪ್ರಿಯರು ಕೋಳಿ, ಮೀನು ಸೇರಿದಂತೆ ಇತರ ಮಾಂಸಾಹಾರ ಲಭ್ಯತೆ ಕುರಿತು ಯಾವುದೇ ಆತಂತಕವಿಲ್ಲದೆ ದಿನದೂಡಿದ್ದರು. ಇದೀಗ ಮಾಂಸಾಹಾರ ಪ್ರಿಯರಿಗೂ ಶಾಕ್ ಎದುರಾಗಿದೆ. ಈ ಬಾರಿ ಮೀನುಗಳ ಲಭ್ಯತೆ ಬಾರಿ ಇಳಿಕೆಯಾಗಲಿದೆ. ಈ ಪೈಕಿ ಮತ್ತಿ, ಬಾಂಗ್ಡಾ ಸೇರಿದಂತೆ ಹಲವು ಮೀನುಗಳು ಬಹುತೇಕ ಸಿಗುವುದಿಲ್ಲ. ಇತರ ಮೀನುಗಳ ಲಭ್ಯತೆಯೂ ಕಡಿಮೆಯಾಗಲಿದೆ. ಹೀಗಾಗಿ ಮೀನುಗಳು ಬೆಲೆ ನಾಲ್ಕು ಪಟ್ಟು ಹೆಚ್ಚಾಗಲಿದೆ.

ಮತ್ತಿ, ಬಾಂಗ್ಡಾ ಮೀನು ಇಲ್ಲ

ಮೀನುಗಳು ಪೈಕಿ ಮತ್ತಿ ಹಾಗೂ ಬಾಂಗ್ಡಾ ಅತೀ ಹೆಚ್ಚಿನ ಮಂದಿ ಇಷ್ಟಪಡುವ ಮೀನು. ಆದರೆ ಈ ಎರಡು ಮೀನುಗಳು ಈ ಬಾರಿ ಸಿಗುವುದಿಲ್ಲ. ಇದಕ್ಕೆ ಕಾರಣ ಎಲ್ ನಿನೋ ಪರಿಣಾಮ. ಎಲ್ ನಿನೋದಿಂದ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಅಕ್ಟೋಬರ್ ತಿಂಗಳಲ್ಲೇ ಬಿಸಿಲು ತೀವ್ರಗೊಂಡಿದೆ. ಕರ್ನಾಟಕದ ಹಲೆವೆಡೆ 38 ಡಿಗ್ರಿ ಸೆಲ್ಶಿಯಸ್ ಮೀರಿದೆ. ಎಲ್ ನಿನೋದಿಂದ ವಾತಾವರಣ ಬಿಸಿಯಾಗಿರುವ ಕಾರಣ ಪೆಸಿಫಿಕ್ ಸಾಗರದ ನೀರಿನ ಮಲ್ಮೆ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಸಾಗರ, ಮೀನುಗಾರಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಭಾರತದಲ್ಲಿ ತೀವ್ರ ಪರಿಣಾಮ

2027ರಲ್ಲಿ ಮತ್ತಿ ಹಾಗೂ ಭೂತಾಯಿ ಲಭ್ಯವಾಗುವುದಿಲ್ಲ. ಇದರಿಂದ ಸಾಗರದಲ್ಲಿ ಮೀನಿನ ಸಮತೋಲನ ನಶಿಸಲಿದೆ. ಹಲವು ಮೀನುಗಳು ನಶಿಸಿ ಹೋಗಲಿದೆ ಎಂದು ವರದಿ ಹೇಳುತ್ತಿದೆ. ಅಂದರೆ ಜನವರಿಯಿಂದ ಮೇ ತಿಂಗಳವರೆಗೆ ಮೀನು ಆಹಾರ ಅತೀ ಹೆಚ್ಚು ವಹಿವಾಟು ನಡೆಸಲಿದೆ. ಆದರೆ ಈ ಬಾರಿ ಭಾರಿ ಹೊಡೆತ ಬೀಳಲಿದೆ. ಭಾರತದಲ್ಲಿ ಮತ್ತಿ ಹಾಗೂ ಬಾಂಗ್ಡಾ ಮೀನಿನ ಕೊರತೆ ಎದುರಾಗಲಿದೆ.

ಹಲವು ಪ್ರಭೇದಗಳು ನಶಿಸಿ ಹೋಗಲಿದೆ. ಭಾರತದಲ್ಲಿ ಹೆಚ್ಚು ಲಭ್ಯವಿರುವ ಮತ್ತಿ ಹಾಗೂ ಬಾಂಗ್ದಾ ಮೀನುಗಳು ಆಳ ಸಮುದ್ರದಲ್ಲಿ ವಾಸಿಸುವ ಮೀನುಗಳಲ್ಲ. ಆದರೆ ಸಮುದ್ರದ ನೀರಿನ ಮೇಲ್ಮೈ ಬಿಸಿಯಾಗುವ ಕಾರಣ ಹಲವು ಮೀನುಗಳು ತಮ್ಮ ಆವಾಸ ಸ್ಥಾನ ಬದಲಿಸಲಿದೆ. ಹಲವು ಇಲ್ಲವಾಗಲಿದೆ. ಸಮುದ್ರದ ಹಲವು ಜೀವಿಗಳ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಸಮುದ್ರ ಜೀವಿಗಳು ನಶಿಸಲಿದೆ. ಇದು ನೇರವಾಗಿ ಪರಿಸರದ ಮೇಲೂ ಪರಿಣಾಮ ಬೀರಲಿದೆ.

2026ರ ಸಿಎಂಎಫ್‌ಆರ್‌ಐ ಎಲ್‌ನಿನೋ ಸಾಗರದ ತಾಪಮಾನ ಏರಿಕೆ ಮಾಡಿದೆ. ಇದರಿಂದ ಎಪ್ರಿಲ್ ಮೇ ತಿಂಗಳಲ್ಲಿ ಭಾರತದಲ್ಲಿ ಮತ್ತಿ ಹಾಗೂ ಬಾಂಗ್ಡಾ ಮೀನು ಈಗಾಗಲೇ ಕೊರತೆ ಎದುರಿಸುತ್ತಿದೆ. ಉತ್ತರ ಭಾರತ ಮಹಾಸಾಗರದಲ್ಲಿ ಎಲ್ ನಿನೋ ಪರಿಣಾಮ ತೀವ್ರಗೊಳ್ಳಲಿದೆ. ಇದು ಭಾರತದ ಬಹುತೇಕ ಕಡೆಗಳಲ್ಲಿನ ಮತ್ತಿ ಹಾಗೂ ಬಾಂಗ್ಡಾ ಮೀನಿನ ಮೇಲೆ ಹೊಡೆತ ನೀಡಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘8 ತಿಂಗಳ ಪರಿಶ್ರಮ ವ್ಯರ್ಥವಾಯಿತು’… ನದಿಯ ಇಂದಿನ ಸ್ಥಿತಿ ಕಂಡು ಮನನೊಂದ ಬಿಟ್ಟು ತಬಾಹಿ!
CJP Protest: ಆಶುತೋಷ್ ರಾಂಕಾ, ಸೌರವ್ ದಾಸ್‌ಗೆ 5 ದಿನಗಳ ನ್ಯಾಯಾಂಗ ಬಂಧನ; ಪ್ರಧಾನಿ ಮೋದಿಗೆ ದೀಪ್ಕೆ ಹಾಕಿದ ಸವಾಲೇನು?