ಸಿಡಿಲು ಬಡಿದು ಒಂದೇ ಕಡೆ 18 ಆನೆಗಳು ದುರಂತ ಸಾವು

By Kannadaprabha News  |  First Published May 14, 2021, 9:03 AM IST
  • ಸಿಡಿಲು ಬಡಿದು 18 ಆನೆಗಳು ಒಂದೆ ಕಡೆ ದುರಂತ ಸಾವು
  • ಅಸ್ಸಾಂನಲ್ಲಿ ನಗಾಂವ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ  ಘಟನೆ
  • ಬುಧವಾರ ತಡರಾತ್ರಿ ಸಂಭವಿಸಿದ ಗುಡುಗು ಸಿಡಿಲಿನಿಂದ ಈ ದುರ್ಘಟನೆ  

ಗುವಾಹಟಿ (ಮೇ.14): ಸಿಡಿಲಿನ ಹೊಡೆತಕ್ಕೆ 18 ಆನೆಗಳು ಸಾವಿಗೀಡಾಗಿರುವ ದುರಂತ ಘಟನೆ ಅಸ್ಸಾಂ ನಗಾಂವ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ  ಸಂಭವಿಸಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 

ಈ ಬಗ್ಗೆ ಗುರುವಾರ ಮಾತನಾಡಿದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್ ಸಹಾಯ್  ಅವರು ಕಥಿಯಾಟೋಲಿ ವ್ಯಾಪ್ತಿಯ ಪ್ರಸ್ತಾಪುತ ಕುಂಡೋಲಿ ರಕ್ಷಿತಾರಣ್ಯದಲ್ಲಿನ ಗುಡ್ಡದಲ್ಲಿ  ಬುಧವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ ಎಂದು ಹೇಳಿದರು. 

Tap to resize

Latest Videos

ನಾಗರಹೊಳೆಯಲ್ಲಿ ಆನೆಗಳ ಕಾಳಗ : 35 ವರ್ಷದ ಗಂಡಾನೆ ಸಾವು ...

ಗುರುವಾರ ಮಧ್ಯಾಹ್ನ ನಮ್ಮ ತಂಡ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು 14 ಗಜಗಳು ಗುಡ್ಡದ ಮೇಲೆ ಮತ್ತು ಉಲಿದ ನಾಲ್ಕು ಆನೆಗಳು ಗುಡ್ಡದ ಕೆಲಗೆ ಸತ್ತು ಬಿದ್ದಿರುವುದು ಕಂಡು ಬಂದಿದೆ. 

ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್ .

ಪ್ರಾಥಮಿಕ ತನಿಖೆಯಲ್ಲಿ ಸಿಡಿಲಿನ ಹೊಡೆತದಿಂದ ಆನೆಗಳು ಸಾವಿಗೀಡಾಗಿವೆ ಎಂದು ಗೊತ್ತಾಗಿದೆ. ಆನೆಗಳ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಈ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ. 

click me!