ಕೇರಳ ಕ್ರೈಸ್ತರೂ ಲವ್ ಜಿಹಾದ್ ಬಲೆಗೆ!| ಕೇರಳದ ಕ್ಯಾಥೋಲಿಕ್ ಬಿಷಪ್‌ಗಳ ಪರಮೋಚ್ಚ ಸಂಸ್ಥೆ ಸೈರೋ-ಮಲಬಾರ್ ಚಚ್‌ರ್ ಮಂಡಳಿ ಹೇಳಿಕೆ| ಯೋಜಿತವಾಗಿ ಕ್ರೈಸ್ತ ಯುವತಿಯರ ಮತಾಂತರ| ಪೊಲೀಸರು ಏನೂ ಮಾಡ್ತಿಲ್ಲ: ಪ್ರಭಾವಿ ಕ್ರೈಸ್ತ ಮಂಡಳಿ
ಕೊಚ್ಚಿ[ಜ.16]: ಯುವತಿಯರನ್ನು ಪ್ರೀತಿ- ಪ್ರೇಮದ ಹೆಸರಿನಲ್ಲಿ ನಂಬಿಸಿ ವಿವಾಹವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ, ಭಯೋತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಹಿಂದು ಸಂಘಟನೆಗಳ ನಿರಂತರ ಆರೋಪಕ್ಕೆ ಇದೀಗ ಮತ್ತಷ್ಟುಬಲ ಬಂದಿದೆ. ಲವ್ ಜಿಹಾದ್ ಕಲ್ಪನೆಯಲ್ಲ, ವಾಸ್ತವ. ಕ್ರೈಸ್ತ ಯುವತಿಯರನ್ನೂ ಪ್ರೀತಿ ಹೆಸರಲ್ಲಿ ನಂಬಿಸಿ ಲವ್ ಜಿಹಾದ್ ಮಾಡಲಾಗುತ್ತಿದೆ ಎಂದು ಕೇರಳದ ಪ್ರಭಾವಿ ಕ್ಯಾಥೋಲಿಕ್ ಚಚ್‌ರ್‍ವೊಂದು ಆರೋಪಿಸಿರುವುದು ಸಂಚಲನಕ್ಕೆ ಕಾರಣವಾಗಿದೆ.
ಕ್ಯಾಥೋಲಿಕ್ ಬಿಷಪ್‌ಗಳ ಪರಮೋಚ್ಚ ಸಂಸ್ಥೆಯಾಗಿರುವ ಸೈರೋ- ಮಲಬಾರ್ ಚರ್ಚ್ ಮಂಡಳಿಯು ಮಂಗಳವಾರ ಕಾರ್ಡಿನಲ್ ಜಾಜ್‌ರ್ ಆಲೆಂಚೇರಿ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಲವ್ ಜಿಹಾದ್ ವಿರುದ್ಧ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.
undefined
'ಕುಂಕುಮ ಇಟ್ಕೋಬೇಡ, ಓಂ ಟ್ಯಾಟೂ ತೆಗೆಸು' ಲವ್ ಜಿಹಾದ್.. ಕಾಸರಗೋಡು ಟು ಬೆಂಗಳೂರು!
ಆದರೆ ಇದನ್ನು ಮುಸ್ಲಿಂ ಸಂಘಟನೆಯೊಂದು ಅಲ್ಲಗಳೆದಿದೆ. ಮುಸಲ್ಮಾನರ ಸಂಖ್ಯೆ ಹೆಚ್ಚಿಸಲು ಯಾವುದೇ ಮುಸ್ಲಿಂ ಪ್ರಜೆ ಕೂಡ ಲವ್ ಜಿಹಾದ್ ನಡೆಸುತ್ತಿಲ್ಲ. ಯುವಕ- ಯುವತಿ ಅಂತಧರ್ಮೀಯ ಮದುವೆಯಾದರೆ ಅದನ್ನು ಲವ್ ಜಿಹಾದ್ ಎಂದು ಕರೆಯಲಾಗದು. ಹಿಂದುತ್ವ ಫ್ಯಾಸಿಸಂ ವಿರುದ್ಧ ಸಮಾಜದ ವಿವಿಧ ವರ್ಗಗಳು ಒಂದಾಗುತ್ತಿವೆ. ಈ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದರೆ ಒಡಕು ಉಂಟಾಗುತ್ತದೆ. ಹೀಗಾಗಿ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಆಗ್ರಹಿಸಿದೆ.
ಚರ್ಚ್‌ನ ಹೇಳಿಕೆಯನ್ನು ವಿಶ್ವ ಹಿಂದು ಪರಿಷತ್ ಸ್ವಾಗತಿಸಿದೆ. ಲವ್ ಜಿಹಾದ್ ವಿರುದ್ಧ ಒಗ್ಗೂಡಿ ಹೋರಾಡಬೇಕಾದ ಅಗತ್ಯವಿದೆ ಎಂದು ಕರೆ ಕೊಟ್ಟಿದೆ.
ಚರ್ಚ್ ಆರೋಪವೇನು?:
ಕ್ರೈಸ್ತ ಯುವತಿಯರನ್ನು ಗುರಿಯಾಗಿಸಿಕೊಂಡು ಅತ್ಯಂತ ಯೋಜಿತ ರೀತಿಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ಅಸಂಖ್ಯಾತ ಯುವತಿಯರನ್ನು ಬಲೆಗೆ ಬೀಳಿಸಲಾಗಿದೆ. ಕೇರಳದಲ್ಲಿ ಕ್ರೈಸ್ತ ಯುವತಿಯರನ್ನು ಹತ್ಯೆ ಮಾಡಿದ ನಿದರ್ಶನಗಳೂ ಇವೆ. ಐಸಿಸ್ ಉಗ್ರ ಸಂಘಟನೆ ನೇಮಕಾತಿ ಮಾಡಿಕೊಂಡಿರುವ 21 ಮಂದಿಯಲ್ಲಿ ಅರ್ಧದಷ್ಟುಮಂದಿ ಕ್ರೈಸ್ತ ಧರ್ಮದಿಂದ ಮತಾಂತರಗೊಂಡವರಾಗಿದ್ದಾರೆ. ಲವ್ ಜಿಹಾದ್ ಪ್ರಬಲವಾಗಿದ್ದು, ಸಾಮಾಜಿಕ ಶಾಂತಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿದೆ. ಇದು ಗಂಭೀರ ವಿಚಾರವಾಗಿದೆ. ಪೊಲೀಸರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಜರುಗಿಸುತ್ತಿಲ್ಲ ಎಂದು ಕೇರಳದ ಚಚ್‌ರ್ ಹೇಳಿಕೆಯಲ್ಲಿ ಬಿಡುಗಡೆ ಮಾಡಿದೆ.
ಲವ್ ಜಿಹಾದ್‌ನಿಂದ ಧಾರ್ಮಿಕ ಸ್ನೇಹದ ಮೇಲೆ ಪರಿಣಾಮವಾಗುತ್ತಿದೆ ಎಂದು ಹೇಳುತ್ತಿಲ್ಲ. ಇದನ್ನು ಕಾನೂನು- ಸುವ್ಯವಸ್ಥೆಯ ಸಮಸ್ಯೆ ಎಂದು ಸರ್ಕಾರ ನೋಡಬೇಕೇ ಹೊರತು ಧಾರ್ಮಿಕ ದೃಷ್ಟಿಯಿಂದ ಅಲ್ಲ. ಲವ್ ಜಿಹಾದ್‌ನಲ್ಲಿ ಭಾಗಿಯಾದವರ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಲವ್ ಜಿಹಾದ್ ಕುರಿತು ಪೋಷಕರು ಹಾಗೂ ಮಕ್ಕಳನ್ನು ಜಾಗೃತಿ ಮೂಡಿಸಬೇಕು ಎಂದು ಹೇಳಿಕೆಯಲ್ಲಿ ವಿವರಿಸಿದೆ.
ಕೇರಳ ಕ್ರೈಸ್ತ ಯುವತಿಯರು ಈಗ ಲವ್ ಜಿಹಾದ್ ಟಾರ್ಗೆಟ್!
ಬಲವಂತ ಆಗುತ್ತಿದೆ
ಸಾಕಷ್ಟುಕ್ರೈಸ್ತ ಯುವತಿಯರು ನಾಪತ್ತೆಯಾಗಿದ್ದಾರೆ. ಇದು ದಾಖಲೆಗಳಲ್ಲಿ ಉಲ್ಲೇಖವಾಗಿಲ್ಲ. ಆ ರೀತಿ ನಾಪತ್ತೆಯಾದವರನ್ನು ಲವ್ ಜಿಹಾದ್ ಹೆಸರಿನಲ್ಲಿ ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಪ್ರೇಮದ ನಾಟಕವಾಡಿ, ಅತ್ಯಾಚಾರ ಎಸಗಿ, ಅದರ ವಿಡಿಯೋ ಮಾಡಿ ಬಲವಂತದ ಮತಾಂತರ ಮಾಡಿದ ಬಗ್ಗೆ ಕೇರಳದಲ್ಲಿ ಇತ್ತೀಚೆಗೂ ದೂರುಗಳು ಬಂದಿವೆ.
- ಕೇರಳ ಚರ್ಚ್ ಮಂಡಳಿ
ಹೇಳಿಕೆ ಹಿಂಪಡೆಯಿರಿ
ಮುಸ್ಲಿಮರ ಜನಸಂಖ್ಯೆ ಹೆಚ್ಚಿಸಲು ಮುಸಲ್ಮಾನ ಸಮುದಾಯದ ಒಬ್ಬನೇ ಒಬ್ಬ ವ್ಯಕ್ತಿ ಲವ್ ಜಿಹಾದ್ ನಡೆಸುತ್ತಿಲ್ಲ. ಅಂತರಧರ್ಮೀಯ ವಿವಾಹಗಳು ನಡೆಯುತ್ತಿವೆ. ಅವನ್ನು ಲವ್ ಜಿಹಾದ್ ಎಂದು ಕರೆಯಲು ಆಗುವುದಿಲ್ಲ. ಈ ಹೇಳಿಕೆಯಿಂದ ಸಮಾಜದಲ್ಲಿ ಒಡಕು ಮೂಡಲಿದೆ. ಆಧಾರರಹಿತ ಆರೋಪ ಹೊಂದಿರುವ ಈ ಹೇಳಿಕೆಯನ್ನು ಚಚ್‌ರ್ ಹಿಂಪಡೆಯಬೇಕು.
- ಪಿಎಫ್‌ಐ ತಿರುಗೇಟು
ಜನವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ