ಬೋಫೋರ್ಸ್‌ ಹಗರಣದಲ್ಲಿ ಸೋನಿಯಾ ಗಾಂಧಿ ಪಾತ್ರ: ಚಿತ್ರಾ ಸುಬ್ರಮಣ್ಯಂ ಬರೆದ ಪುಸ್ತಕದಲ್ಲಿ ಹಲವು ಆರೋಪ

ಬೋಫೋರ್ಸ್‌ ಹಗರಣದಲ್ಲಿ ರಾಜೀವ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಹೆಸರು ತಳುಕು ಹಾಕಿಕೊಂಡಿದೆ ಎಂದು ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಅಲ್ಲದೆ, ಕಾಂಗ್ರೆಸ್‌ ಚುನಾವಣೆಗೆ ಸೊರೊಸ್ ಹಣ ಬಳಸಿದೆ ಎಂದು ಯೋಗಿ ಆರೋಪಿಸಿದ್ದಾರೆ.

Chitra Subramaniam New Book Reignites Bofors Controversy, BJP Seeks Answers

ನವದೆಹಲಿ: ರಾಜೀವ ಗಾಂಧಿ ಕಾಲದ ಬೋಫೋರ್ಸ್‌ ಫಿರಂಗಿ ಹಗರಣ ಮತ್ತೆ ಸದ್ದು ಮಾಡಿದೆ. ಹಗರಣದಲ್ಲಿ ಮಧ್ಯವರ್ತಿ ಆಗಿದ್ದ ಇಟಲಿ ಶಸ್ತ್ರಾಸ್ತ್ರ ಡೀಲರ್‌ ಒಟ್ಟಾವಿಯೋ ಕ್ವಾಟ್ರೋಕಿ, ಬೋಫೋರ್ಸ್‌ ಫಿರಂಗಿ ಪರ ಲಾಬಿ ಮಾಡಲು ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಹಾಗೂ ಅವರ ಪತ್ನಿ ಸೋನಿಯಾ ಗಾಂಧಿಯ ಸಾಮೀಪ್ಯ ಬಳಸಿಕೊಂಡಿದ್ದ ಎಂದು ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ‘ಬೋಫೋರ್ಸ್‌ ಗೇಟ್‌’ ಎಂಬ ತಮ್ಮ ಹೊಸ ಪುಸ್ತಕದಲ್ಲಿ ಆರೋಪಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ, ಈ ಕೃಯ್ಯದ ಹೊಣೆ ಹೊತ್ತು ತಮ್ಮ ಸಂಸದ ಹುದ್ದೆಗೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ರಾಜೀನಾಮೆ ನೀಡಬೇಕು ಹಾಗೂ ಕ್ವಾಟ್ರೋಕಿ ಜತೆಗಿನ ನಂಟಿನ ವಿವರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿರ್ಮಲಾ ‘ರಫೇಲ್‌ ದಾಳಿ’: ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹಿಗ್ಗಾಮುಗ್ಗಾ ತರಾಟೆ

Latest Videos

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸೊರೊಸ್ ಹಣ ಬಳಕೆ: ಯೋಗಿ

ನವದೆಹಲಿ: ‘ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮಹಾ ಮೈತ್ರಿಕೂಟವು 2024ರ ಲೋಕಸಭಾ ಚುನಾವಣೆಗೆ ಬಿಲಿಯನೇರ್‌ ಉದ್ಯಮಿ ಜಾರ್ಜ್ ಸೊರೊಸ್ ಅವರ ಹಣವನ್ನು ಬಳಸಿದೆ’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ.ಯೋಗಿ ಆದಿತ್ಯನಾಥ್ ಎಎನ್‌ಐಗೆ ವಿಶೇಷ ಸಂದರ್ಶನವೊಂದನ್ನು ನೀಡಿದ್ದು, ಅದರ ಕೆಲ ತುಣುಕುಗಳು ಬಿಡುಗಡೆಯಾಗಿದ್ದು, ಅದರಲ್ಲಿ ಯೋಗಿ ‘ ದೇಶಾದ್ಯಂತ ಲೋಕಸಭೆ ಚುನಾವಣೆಯಲ್ಲಿ ವಿದೇಶಿ ಹಣ ಬಳಕೆಯಾಗಿತ್ತು ಎಂದು ನಾನು ಹೇಳುತ್ತೇನೆ. ಕಾಂಗ್ರೆಸ್‌ ಮತ್ತು ಇಂಡಿಯಾ ಕೂಟದ ಇತರ ಪಕ್ಷಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇದರಲ್ಲಿ ಭಾಗಿಯಾಗಿವೆ. ಈ ಮೂಲಕ ಅವರು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು. ಇದು ದೇಶ ದ್ರೋಹದ ವರ್ಗಕ್ಕೆ ಸೇರುತ್ತದೆ’ ಎಂದಿದ್ದಾರೆ.

Bofors scam: ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ವೇಳೆ ನಡೆದಿದ್ದ ಬೊಫೋರ್ಸ್‌ ಗನ್‌ ಖರೀದಿ ಹಗರಣಕ್ಕೆ ಮರುಜೀವ?

 

vuukle one pixel image
click me!