ಭಾರತದ ಹಳ್ಳಿ ಜನರ ಹುಟ್ಟು ಹಬ್ಬ ಆಚರಣೆಗೆ ಅಡ್ಡಿಪಡಿಸಿದ ಚೀನಾ ಸೇನೆ!

By Suvarna NewsFirst Published Jul 12, 2021, 4:09 PM IST
Highlights
  • ಲಡಾಖ್‌ನ ದೆಮ್ಚೆಕ್ ಹಳ್ಳಿ ಪ್ರವೇಶಿಸಿದ ಚೀನಾ ಸೇನೆ
  • ಭಾರತದ ಹಳ್ಳಿಗರಿಂದ ದಲೈ ಲಾಮಾ ಹುಟ್ಟು ಹಬ್ಬ ಆಚರಣೆ
  • ಹುಟ್ಟು ಹಬ್ಬ ಆಚರಣೆಗೆ ಚೀನಾ ಸೇನೆ ವಿರೋಧ

ಲಡಾಖ್(ಜು.12): ಭಾರತದ ಸೇನೆ ಜೊತೆ ಸದಾ ಕಿರಿಕ್ ಮಾಡುತ್ತಿರುವ ಚೀನಾ ಸೇನೆ ಇದೀಗ ಭಾರತದ ಹಳ್ಳಿ ಜನರೊಂದಿಗೆ ತಕರಾರು ತೆಗೆದಿದೆ.  ಲಡಾಖ್‌ನ ದೆಮ್ಚೆಕ್ ಹಳ್ಳಿ ಜನರು ಜುಲೈ 6 ರಂದು ಟಿಬೆಟ್ ಧರ್ಮಗುರು ದಲೈ ಲಾಮಾ ಹುಟ್ಟು ಹಬ್ಬ ಆಚರಿಸಿದ್ದಾರೆ. ಈ ಸಂಭ್ರಮಾಚರಣೆಗೆ ಚೀನಾ ಸೇನೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.

ಚೀನಾ ನಿರ್ಮಿತ ಡ್ರೋನ್, ಸ್ಫೋಟಕ್ಕೆ RDX ಬಳಕೆ; ದಾಳಿ ಹಿಂದಿನ ಸ್ಫೋಟಕ ಸತ್ಯ ಬಹಿರಂಗ!.

ದೆಮ್ಚೆಕ್ ಹಳ್ಳಿಯಲ್ಲಿ ನಡೆಯುತ್ತಿದ್ದ ದಲೈ ಲಾಮಾ ಹುಟ್ಟು ಹಬ್ಬ ಆಚರಣೆಗೆ ನಿಲ್ಲಿಸಲು ಚೀನಾ ಸೇನೆ ಮೂರು ವಾಹನಗಳಲ್ಲಿ ಆಗಮಿಸಿದೆ. ಬಳಿಕ ಚೀನಾ ಗಡಿ ಬಳಿ ನಿಂತು ಭಾರತದ ಹಳ್ಳಿಯಲ್ಲಿ ಆಚರಿಸುತ್ತಿದ್ದ ದಲೈ ಲಾಮಾ ಹುಟ್ಟು ಹಬ್ಬಕ್ಕೆ ವಿರೋಧ ವ್ಯಕ್ತಪಡಿಸಿದೆ. ಬ್ಯಾನರ್ ಪ್ರದರ್ಶಿಸಿ ತಕ್ಷಣವೇ ಸಂಭ್ರಮ ನಿಲ್ಲಿಸಲು ಆಗ್ರಹಿಸಿದೆ.

ದಲೈ ಲಾಮಾ ಅವರ 86ನೇ ಹುಟ್ಟು ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಫೋನ್ ಮೂಲಕ ಶುಭಕೋರಿದ್ದರು. ದಲೈ ಲಾಮಾ ಹುಟ್ಟು ಹಬ್ಬದ ದಿನ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದೆ ಎಂದು ಸ್ವತಃ ಪ್ರಧಾನಿ ಮೋದಿ ಟ್ವೀಟ್ ಮೂಲಕ ಹೇಳಿದ್ದರು.

ಟಿಬೆಟ್ ಯುವಕರು ಚೀನಾ ಸೇನೆಗೆ: ಭಾರತದ ವಿಶೇಷ ಪಡೆ ಎದುರಿಸಲು ಡ್ರ್ಯಾಗನ್ ತಂತ್ರ!

ಈ ಟ್ವೀಟ್ ಭಾರಿ ಸಂಚಲನ ಮೂಡಿಸಿತ್ತು. ಕಾರಣ ಈ ಟ್ವೀಟ್ ಹಿಂದೆ ಪರೋಕ್ಷವಾಗಿ ಚೀನಾಗೆ ಸಂದೇಶ ನೀಡಲಾಗಿತ್ತು. ಇದೀಗ ಜುಲೈ 6 ರಂದು ಭಾರತದ ಹಳ್ಳಿ ಜನರು ದಲೈ ಲಾಮಾ ಹುಟ್ಟು ಹಬ್ಬಕ್ಕೆ ಅಡಚಣೆ ಮಾಡಿದ ಚೀನಾ ನಡೆದೆ ಭಾರತೀಯ ಸೇನೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಭಾರತದ ಪ್ರಜೆಗಳ ಸ್ವಾತಂತ್ರ್ಯ ಕಸಿದು ಕೊಳ್ಳುವ, ಅಥವಾ ಅಡ್ಡಿಪಡಿಸುವ ಯಾವುದೇ ಸಾಹಸಕ್ಕೆ ಕೈಹಾಕಬೇಡಿ ಎಂದು ಎಚ್ಚರಿಕೆ ನೀಡಿದೆ.
 

click me!